ಕ್ರೀಡೆಗಳು ಮಕ್ಕಳನ್ನು ಸದೃಢರನ್ನಾಗಿಸುತ್ತವೆ- ಎಂ.ಕುಮಾರಸ್ವಾಮಿ ತಹಶೀಲ್ದಾರ್,

0
123

ಕೊಟ್ಟೂರು:ಆಗಸ್ಟ್:19:- ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸುರವರ ಜನ್ಮದಿನಾಚರಣೆ ಅಂಗವಾಗಿ ಕೊಟ್ಟೂರಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ತಹಶೀಲ್ದಾರರಾದ ಎಂ.ಕುಮಾರಸ್ವಾಮಿ ಇವರು ವಾಲಿಬಾಲ್ ಪಂದಾವಳಿಯ ಉದ್ಘಾಟನೆ ಮಾಡಿ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಬರೀ ವಿದ್ಯಾಭ್ಯಾಸದಿಂದ ಬೇಸರವಾಗಬಹುದು. “ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸಿರುತ್ತದೆ” ಎನ್ನುವಂತೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಸಹಾ ಮುಖ್ಯವಾಗಿವೆ. ಇತ್ತೀಚಿನ ದಿನಗಳಲ್ಲಿ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಭಾರತವು ಚಿನ್ನ, ಬೆಳ್ಳಿಯ ಪದಕಗಳ ಭೇಟೆಯಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ. ಆದ್ದರಿಂದ ಮಕ್ಕಳಿಗೆ ಈ ರೀತಿಯಾಗಿ ಕ್ರೀಡೆಗಳಲ್ಲಿ ಪ್ರೋತ್ಸಾಹ ನೀಡುವುದು ಅಗತ್ಯವಿದೆ ಎಂದರು.

ಸದರಿ ಕ್ರೀಡಾಕೂಟದಲ್ಲಿ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ 8 ತಂಡಗಳು ಭಾಗವಹಿಸಿದ್ದು, ವಾಲಿಬಾಲ್, ಕಬಡ್ಡಿ, ಕ್ರಿಕೆಟ್, ರನ್ನಿಂಗ್ ರೇಸ್ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಪಂಪಾಪತಿ ಇವರು ತಿಳಿಸಿದರು. ನಿಲಯ ಮೇಲ್ವಿಚಾರಕರಾದ ಬಸವರಾಜ, ಮಲ್ಲಪ್ಪ, ಹುಲುಗಪ್ಪ, ಗೋವಿಂದಪ್ಪ, ಶಿವಲೀಲ ಮುಂತಾದವರಿದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here