ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕುರಿತು ಜಾಗೃತಿ.

0
512

ಸಂಡೂರು:10:-ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಬಿ.ಆರ್ ಕ್ಯಾಂಪ್ ನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ದೈಹಿಕ ಅರೋಗ್ಯವಲ್ಲದೇ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಿದೆ, ಶೇಕಡ ಹತ್ತರಷ್ಟು ಜನರು ಒಂದಲ್ಲೊಂದು ಮಾನಸಿಕ ತೊಂದರೆಯಿಂದ ಬಳಲುತ್ತಿರುತ್ತಾರೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಉತ್ತಮ ಸಲಹೆ ನೀಡಿ ಸ್ವಾಲಂಭಿಗಳಾಗಿ ಉಪಯುಕ್ತ ಜೀವನ ನಡೆಸುವಂತೆ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು, 1992 ರಿಂದ ಪ್ರತಿ ವರ್ಷ ಅಕ್ಟೋಬರ್ 10 ರಂದು ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ,ತೀವ್ರ ಸ್ವರೂಪದ ರೋಗಿಗಳಿಗೆ ಚಿಕಿತ್ಸೆ ಕೊಡಿಸುವುದು, ಮತ್ತು ಸಾಮಾನ್ಯ ಮಾನಸಿಕ ತೊಂದರೆ ಮೇನಿಯಾ, ಗೀಳು, ದೇವರು, ದೆವ್ವ ಬಂದಂತೆ ವರ್ತಿಸುವವರಿಗೆ ಸಾಂತ್ವನ, ಮನೋ ಚಿಕಿತ್ಸೆ ನೀಡಬೇಕಾಗುತ್ತದೆ, ಉತ್ತಮ ಸ್ನೇಹಿತರ ಸಂಬಂಧ, ವ್ಯಾಯಾಮ, ದ್ಯಾನ, ಪ್ರಕೃತಿಯೊಂದಿಗೆ ಮನಸ್ಸನ್ನು ಉತ್ತಮ ಸುಸ್ಥಿರವಾಗಿಟ್ಟುಕೊಳ್ಳುವುದರಿಂದ ಮತ್ತು ಮಾದಕ ವ್ಯಸನ, ಮದ್ಯಪಾನ, ಧೂಮಪಾನಗಳನ್ನು ತ್ಯಜಿಸುವುದರಿಂದ ಸಂಪೂರ್ಣ ಆರೋಗ್ಯವಂತರಾಗಿರ ಬಹುದು ಎಂದು ತಿಳಿಸಿದರು, ಮಕ್ಕಳಲ್ಲಿ ಅವರ ಸಾಮರ್ಥ್ಯ ಗುರುತಿಸಿ ಜೀವನ ಕೌಶಲ್ಯಗಳ ಬಗ್ಗೆ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗುಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು,

ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ಎರಡನೇ ಮಂಗಳವಾರ ಮನೋಚೈತನ್ಯ ಕಾರ್ಯಕ್ರಮದಡಿ ತಜ್ಞರು ಅಗಮಿಸಿ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ, ಸಲಹೆ ನೀಡುವರು ಇದನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು, 104 ಆರೋಗ್ಯ ಸಹಾಯವಾಣಿ ಮೂಲಕ ಹೆಚ್ಚಿನ ಮಾಹಿತಿ ಪಡೆದು ಕೊಳ್ಳಬಹುದು ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ಮಾನಸಿಕ ಸಾಮಾರ್ಥ್ಯ ಕುರಿತು ಚಟುವಟಿಕೆಗಳನ್ನು ಆಸ್ಪೈರ್ ನ ಲೈಫ್ ಸ್ಕಿಲ್ ಎಜುಕೇಟರ್ ಮಲ್ಲೇಶ್ ನಡೆಸಿಕೊಟ್ಟರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಗ್ರಾಮದ ಮುಖಂಡ ರಾಮಚಂದ್ರ, ಹನುಮಕ್ಕ, ಸಂಜಮ್ಮ, ಭೂಲಕ್ಷ್ಮಿ,ಎರ್ರಮ್ಮ,ಭೀಮಲಿಂಗಮ್ಮ, ಆಶಾ ಕಾರ್ಯಕರ್ತೆ ಕಾವೇರಿ, ಹುಲಿಗೆಮ್ಮ, ಆಶಾ, ರೇಖಾ, ತೇಜಮ್ಮ, ಪದ್ಮಾ, ಗೋವಿಂದಮ್ಮ, ಮಲ್ಲೇಶ್, ಆಸ್ಪೈರ್ ವ್ಯವಸ್ಥಾಪಕಿ ಪರಿಮಳ,ಸಾವಿತ್ರಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here