ರಾಜ್ಯ ದಲಿತ ಸಂಘದ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ.

0
122

ಕಂಪ್ಲಿ: ತಾಲೂಕಿನ ನಂ 5 ಬೆಳಗೊಡು ಹಾಳ್ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಡಾ!! ಬಿ. ಆರ್ ಅಂಬೇಡ್ಕರ್ ದಲಿತ ಸಂಘದ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ರಾಣಿ ಚೆನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂಘದ ವತಿಯಿಂದ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರು ತೋರಿದಂತಹ ಧೈರ್ಯ ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಯರಿಗೂ ಆದರ್ಶವಾದ್ದು ಅವರು ರಾಜಮನೆತನದವರಾಗಿದ್ದರಿಂದ ಬಾಲ್ಯದಿಂದಲೇ ಕುದುರೆ ಸವಾರಿ ಕತ್ತಿ ಬಳಸುವ ಪರಿಗಳ ಬಗ್ಗೆ ತರಬೇತಿ ಪಡೆದಿದ್ದರು ಚೆನ್ನಮ್ಮ ಅವರು ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಹಾಗಾಗಿ ಅವರ ಜನ್ಮದಿನವನ್ನು ಕಿತ್ತೂರಿನ ವಿಜಯೋತ್ಸವ ದಿನ ಎಂದು ಆಚರಿಸಲಾಗುತ್ತದೆ ಎಂದರು,
ಚೆನ್ನಮ್ಮ ಅವರ ಜೀವನ ಮತ್ತು ಹೋರಾಟ ನಾಡಿನ ಪ್ರತಿಯೊಬ್ಬ ಮಹಿಳೆಯರು ಸ್ಪೂರ್ತಿದಾಯಕವಾಗಿದೆ ಮಹಿಳೆಯರು ಕೂಡ ಸ್ವಾವಲಂಬಿಗಳಾಗಿ ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದರು .

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಡಾ!! ಬಿ. ಆರ್ ಅಂಬೇಡ್ಕರ್ ದಲಿತ ಸಂಘದ ರಾಜ್ಯಾಧ್ಯಕ್ಷರಾದ ಕೆ ರಾಮಕೃಷ್ಣ, ರಾಜ್ಯ ಉಪಾಧ್ಯಕ್ಷರಾದ ನಬಿಸಾಬ್, ಪ್ರಧಾನ ಕಾರ್ಯದರ್ಶಿಗಳಾದ ದೊಡ್ಡ ಬಸವರಾಜ್ ಬಡಗಿ, ಸಂಘಟನಾ ಕಾರ್ಯದರ್ಶಿಯಾದ ನಾಯಕರ ನಾಗರಾಜ್, ಜಿಲ್ಲಾಧ್ಯಕ್ಷರಾದ ಎಚ್ ವೆಂಕಟೇಶ್, ರಾಜ್ಯ ಖಜಾಂಚಿಯಾಗದ ತಿಮ್ಮರೆಡ್ಡಿ ,ತಾಲೂಕ್ ಅಧ್ಯಕ್ಷರಾದ ಬಡಗಿ ಮಂಜುನಾಥ, ಜಿಲ್ಲಾ ಉಪಾಧ್ಯಕ್ಷರಾದ ಯತ್ ರೇಣುಕಪ್ಪ, ಗ್ರಾಮದ ಮುಖಂಡರಾದ ಕಲ್ಯಾಣಿ ದೊಡ್ಡ ಬಸವರಾಜ್, ನಾಯಕರು ಮಾರುತಿ, ಬಾರ್ಕೆರ್ ನಾಗರಾಜ, ವಾಸು, ನಾಯಕ ವೀರೇಶ್, ಕ್ಯಾಬೂಜಿ ರಾಜ, ಹರಿಜನ ಚಂದ್ರಶೇಖರ್, ಇನ್ನು ಮುಂತಾದವರು ಗ್ರಾಮದ ಸಾರ್ವಜನಿಕರು ಹಾಗೂ ಮುಖಂಡರು ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here