ಸಂಡೂರು ತಾಲೂಕಿನ ವಿವಿದೆಡೆ 13, 14, 15, ಮೂರು ದಿನಗಳ ಕಾಲ ಬಸ್ ಗಳ ಸಂಚಾರದಲ್ಲಿ ವ್ಯತ್ಯಯ

0
682

ಸಂಡೂರು:ಆ:12:-ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ “ಭಾರತ್ ಜೋಡೊ ಯಾತ್ರೆ” ಕಾರ್ಯಕ್ರಮ ಹಲವು ದಿನಗಳಿಂದ ಪಾದಯಾತ್ರೆಯನ್ನು ಮಾಡಿಕೊಂಡು ಬರುತ್ತಿರುವ ರಾಹುಲ್ ಗಾಂಧಿಯವರು ಗುರುವಾರ 13-10-2022 ರಂದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಬಿಜಿ ಕೆರೆ ಗ್ರಾಮಕ್ಕೆ ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಡೂರು ತಾಲೂಕಿನ ಬಸ್ ಡಿಪೋದಿಂದ 41 ಬಸ್ ಗಳನ್ನು ಕಾಂಗ್ರೆಸ್ ಪಕ್ಷವು ಒಪ್ಪಂದದ ಮೇರೆಗೆ ತೆಗೆದುಕೊಂಡಿರುವುದರಿಂದ ಸಂಡೂರು ತಾಲೂಕಿನ ವಿವಿದ ಬಾಗದ ಸಾರ್ವಜನಿಕರಿಗೆ ಸಂಚಾರದಲ್ಲಿ ವ್ಯತ್ಯಯವಾಗುತ್ತದೆ

ಹಾಗೇ ಶನಿವಾರ 15-10-2022 ರಂದು,ರಾಹುಲ್ ಗಾಂಧಿ ಬಳ್ಳಾರಿಗೆ ಅಗಮಿಸುತ್ತಿದ್ದು,ಶುಕ್ರವಾರ ರಾತ್ರಿ ಪ್ರತಿ ಹಳ್ಳಿಗಳಿಗೆ ಹೋಗಿ ಜನರನ್ನು ಸಮಾವೇಶಕ್ಕೆ ಕರೆದುಕೊಂಡು ಬರಲು ತಾಲೂಕಿನ ಸಾರಿಗೆ ಘಟಕದಿಂದ 100 ಸಾರಿಗೆ ಬಸ್ ಗಳನ್ನು ಒಪ್ಪಂದದ ಮೇರೆಗೆ ಪಕ್ಷವು ತೆಗೆದುಕೊಂಡಿದ್ದು, ಇದರಿಂದ 13, 14, 15, ಈ ಮೂರು ದಿನಗಳ ಕಾಲ ರಾತ್ರಿ ಬಸ್ ತಂಗುವ ಊರುಗಳಿಗೆ ಮತ್ತು ಶನಿವಾರ ಸಂಪೂರ್ಣ ತಾಲೂಕಿನಾಧ್ಯಂತ ಬಸ್ ಗಳ ಸಂಚಾರದಲ್ಲಿ ವ್ಯತ್ಯಯವಾಗುತ್ತಿದ್ದು ಹಳ್ಳಿಗಳಲ್ಲಿನ ಜನರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಂಚಾರ ಮಾಡುವವರು, ಸರ್ಕಾರಿ ಕೆಲಸಗಳಿಗೆ ಹೋಗುವವರಿಗೆ ತೊಂದರೆಯಾಗುತ್ತದೆ.

ಈ ಕಾರಣದಿಂದ ತಾಲೂಕಿನಲ್ಲಿ ವಿವಿದೆಡೆ ಬಸ್ ಸಂಚಾರದಲ್ಲಿ 3 ದಿನಗಳ ಕಾಲ ಸಂಡೂರು ಬಸ್ ಘಟಕದಿಂದ ವಿವಿಧ ಸ್ಥಳಗಳಿಗೆ ತೆರಳುವ ಬಸ್ ಗಳ ದೈನಂದಿನ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುತ್ತದೆ, ಹಾಗಾಗಿ ತಾಲೂಕಿನ ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು, ಪ್ರಯಾಣಿಕರು ಸಹಕರಿಸಬೇಕು ಎಂದು ಸಂಡೂರು ಘಟಕ ವ್ಯವಸ್ಥಾಪಕ ವೆಂಕಟೇಶ್ ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here