ಒತ್ತಡದಿಂದ ಕರ್ತವ್ಯ ನಿರ್ವಹಣೆ ಬೇಡ ಇಚ್ಛೆಯಿಂದ ನಿರ್ವಹಿಸಿ.

0
884

ತೋರಣಗಲ್ಲು:ಜೂನ್:03:- ಒತ್ತಡದಿಂದ ಕರ್ತವ್ಯ ನಿರ್ವಹಣೆ ಬೇಡ, ಇಚ್ಚೆಯಿಂದ ನಿರ್ವಹಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ದನ್ ಹೇಳಿದರು.

ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಮತ್ತು ಕೋವಿಡ್-19 ಲಸಿಕಾಕರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ತೋರಣಗಲ್ಲು ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚು, ಇತರೆ ರಾಜ್ಯಗಳಿಂದ ಹೋಗಿ ಬರುವವರ ಸಂಖ್ಯೆ ಅಧಿಕ ಹಾಗಿರುವಾಗ ಇರುವ ಸಿಬ್ಬಂದಿಯವರೇ ಎಲ್ಲಾ ಸೇವೆಗಳನ್ನು ಜನರಿಗೆ ಒದಗಿಸ ಬೇಕು, ಕೆಲಸದ ಒತ್ತಡ ಇದೆ, ಹಾಗಂತ ಹೇಗಪ್ಪ ಅಂತಾ ತಲೆ ಭಾರ ಮಾಡಿ ಕುಳಿತರೆ ಯಾವುದು ಸಾಧ್ಯವಾಗದು, ನಿಗದಿತ ಕೆಲಸದ ಅವಧಿಯಲ್ಲೆ ಇದು ನಮ್ಮ ಜನತೆಗೆ ಒದಗಿಸುವ ಸೇವೆಯೆಂದು ಇಚ್ಚೆಯಿಂದ ಕೆಲಸ ಮಾಡಿ ಆಗ ಪ್ರಗತಿ ಸಾಧನೆ ತಾನಾಗೇ ಬರುವುದು ಎಂದು ಅವರು ತಿಳಿಸಿದರು, 12-14, 15-18 ರ ಮಕ್ಕಳ ಕೋವಿಡ್ ಲಸಿಕಾಕರಣ ಗುರಿ ಸಾಧಿಸಲು ಬಿ.ಇ.ಓ ಗಳ ಸಹಕಾರ ಪಡೆಯಿರಿ, ಮಕ್ಕಳ ಹಾಜರಾತಿ ಅನುಗುಣವಾಗಿ ಲಸಿಕೆ ಕೊಡಿಸ ಬೇಕಾದ್ದು ಶಾಲೆಯ ಮುಖ್ಯ ಗುರುಗಳ ಜವಾಬ್ದಾರಿ, ಇದರಂತೆ ಲಸಿಕಾ ಸೆಷನ್ ಆಯೋಜಿಸಿ ಗುರಿ ಸಾಧಿಸಿ ಎಂದು ಸೂಚಿಸಿದರು ಉಳಿದಂತೆ ಗರ್ಭಿಣಿ ದಾಖಲಾತಿ, ತಪಾಸಣೆ, ಪರೀಕ್ಷೆ,ಸಾಂಸ್ಥಿಕ ಹೆರಿಗೆ, ಶಿಶು ದಾಖಲಾತಿ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಜೆ.ಎಸ್.ವೈ ಪೇಮೆಂಟ್, ಸಾಂಕ್ರಾಮಿಕ ರೋಗಗಳ ಪತ್ತೆ, ಚಿಕಿತ್ಸೆ, ಕುಡಿಯುವ ನೀರಿನ ಪರೀಕ್ಷೆಗಳು, ಅಸಾಂಕ್ರಮಿಕ ರೋಗಗಳ ಪತ್ತೆಗೆ ತಪಾಸಣೆಗೆ ಒಳಪಡಿಸುವುದು ಮತ್ತು ಸದ್ಯ ಸಿ.ಎನ್.ಎ ಸರ್ವೆ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ಸಮೀಕ್ಷೆ ಮಾಡಿ ಗುರಿ ನಿಗದಿ ಮಾಡಲು ಸಾದ್ಯ ಇದನ್ನು ಅಚ್ಚುಕಾಟ್ಟಾಗಿ ಮಾಡಿ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್, ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್,ದಂತ ಆರೋಗ್ಯಾಧಿಕಾರಿ ಡಾ.ಸಯ್ಯದ್ ಸಾದಿಯಾ ಈರಂ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ವೆಂಕಟೇಶ, ಶಶಿಧರ್,ಮಂಜುನಾಥ್, ಹರ್ಷ, ಮತ್ತು ಕ್ಷೇತ್ರ ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here