ಸರಿಸಮಾನವಾದ ನ್ಯಾಯ ಹೇಳುವ ಸಿರಿಗೆರೆ ಶ್ರೀಗಳು ಸಾವಿರಾರು ಜನ ನೊಂದವರಿಗೆ ನ್ಯಾಯ ದೊರಕಿಸಿ ಕೊಡುವವರೇ..?

0
1472

ಕೊಟ್ಟೂರು: ಸಂಸ್ಕಾರವಂತ ಉನ್ನತ ಸ್ಥಾನವಾದ ಸಿರಿಗೇರಿ ಪೀಠದಲ್ಲಿ ಕುಳಿತು ಸರಿಸಮಾನವಾದ ನ್ಯಾಯ ಹೇಳುವ ಸಿರಿಗೆರೆ ಶ್ರೀಗಳು ಸಾವಿರಾರು ನೊಂದ ಜನಗಳಿಗೆ ನ್ಯಾಯ ನೀಡಿದ್ದೀರಿ ಅದರಂತೆ ಇಲ್ಲಿ ನಡೆದಿರುವ ಘಟನೆಗೆ ತಾವೇ ಸಾಮಾಜಿಕ ನ್ಯಾಯ ಒದಗಿಸಬೇಕು ಇಲ್ಲವಾದರೆ ನೀವು ನೀಡುವ ನ್ಯಾಯದಲ್ಲಿ ತಾರತಮ್ಯ ಇದೆ ಎಂದು ಭಾವಿಸಬೇಕಾಗುತ್ತದೆ ಎಂದು ಕನಕ ಗುರುಪೀಠ ನಿರಂಜನಂದ ಪುರಿ ಮಹಾಸ್ವಾಮಿ ಹೇಳಿದರು.

ಜನವರಿ 28 ರಂದು ಕೊಟ್ಟೂರಿನಲ್ಲಿ ಹಮ್ಮಿಕೊಂಡಿದ್ದ ತರಾಳುಬಾಳು ಹುಣ್ಣಿಮೆ ಪ್ರಯುಕ್ತ ನಡೆದ ಬೈಕ್ ಮೆರವಣಿಗೆಯಲ್ಲಿ ಕಾಳಪೂರ ಗ್ರಾಮದ ಜನರ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಹಾಗೂ ಅವರನ್ನು ಬಂದಿಸುವಂತೆ ಸೋಮುವಾರ ಗ್ರಾಮದ ಸಾವಿರಾರು ಜನರು ಮುಖ್ಯ ರಸ್ತೆಯಲ್ಲಿ ಕುಳಿತು ಹೋರಾಟ ಮಾಡುವ ವೇಳೆಯಲ್ಲಿ ಸಾಂತ್ವನ ಹೇಳುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರೇ ಈ ರಾಜ್ಯವು ಗುಂಡಾಗಿರಿ ರಾಜ್ಯವಾಗದಂತೆ ಅಂಬೇಡ್ಕರ್ ರವರು ನೀಡಿರುವ ಸಂವಿಧಾನ ಬದ್ದವಾಗಿ ಸಾಮಾಜಿಕ ನ್ಯಾಯ ಸಾಮನ್ಯ ಜನಸಾಮಾನ್ಯರಿಗೂ ದೊರಕುವಂತೆ ನಡೆದುಕೊಳ್ಳಬೇಕು ಆಗುತ್ತದೆ ಎಂದು ಎಚ್ಚರಿಸಿದರು.

ಸಂಸ್ಕಾರ ಹೇಳುವಂತಹ ಜನರು ಅಮಾಯಕರ ಮೇಲೆ ಈ ತರ ಹಲ್ಲೆ ಮಾಡಿರುವುದು ಖಂಡನಿಯ
ಈ ತರಹದ ಘಟನೆ ನೋಡಿದರೆ ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ ಇಂತವರ ವಿರುದ್ಧ ಪ್ರಕರಣಕೆ ಸಂಬಂದಿಸಿದ ಸೆಕ್ಷನ್ ಗಳನ್ನ ದಾಖಲಾಸಿ ಬಂದಿಸಬೇಕು. ನಮಗೂ ಶಕ್ತಿ ಇದೆ ಎನ್ನುವುದು ಗೊತ್ತಿರಲಿ. ಇದೆ ರೀತಿಯಲ್ಲಿ ನಾವು ವರ್ತಿಸಿದರೆ ಅವರಿಗೂ ನಮಗೂ ವ್ಯತ್ಯಾಸ ಇರುವುದಿಲ್ಲ. ಇದರಿಂದಾಗಿ ಪರಮ ಪೂಜ್ಯ ಸಿರಿಗೇರಿ ಮಠ ಶ್ರೀಗಳು ನ್ಯಾಯದ ಸಂಕೇತ ಈ ಕೃತ್ಯವನ್ನು ಖಂಡಿಸಿರುತ್ತಾರೆ ಅನ್ಯಾಯ ಒಳಗಾದವರ ಜೊತೆ ಇದ್ದು ಈ ಸಮಸ್ಯೆಗಳಿಗೆ ಪರಿಹರಿಸಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ ರವರು ಮಾತನಾಡಿದರು

ಗುರುಪೀಠದ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮಿಜಿ ರವರು ಮಾತನಾಡಿ ನಾವು ನೋಂದವರ ಹಾಗೂ ಬಡವರ ಜೊತೆ ನಿರಂತರವಾಗಿ ಸೇವೆಗೆ ಸದಾ ನಿಮ್ಮ ಜೊತೆ ಇರುತ್ತೇವೆ ಈ ಘಟನೆ ವಿಚಾರ ತಿಳಿದು ಬೇಸರವಾಗಿದೆ, ತಪ್ಪಿತಸ್ಥರಿಗೆ ಕಾನೂನು ಕ್ರಮ ವಹಿಸುವಂತೆ ಈಗಾಗಲೇ ಎಸ್ಪಿ ಜೊತೆ ಚರ್ಚಿಸಿದ್ದೆವೆ ಯಾರು ಆತಂಕ ಪಡಬೇಕಾಗಿಲ್ಲ ಎಂದು ಹೇಳಿದರು.

ಇದೆ ಸಮಯಕ್ಕೆ ಆಗಮಿಸಿದ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣ ರವರು ಇಂತಹ ದುರ್ಘಟನೆ ಆಗುವುದು ನಮಗೆ ಬೇಸರ ಉಂಟಾಗಿದೆ ಈ ಘಟನೆಗೆ ಕಾರಣರಾದವರನ್ನ ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಆದಷ್ಟು ಬೇಗ ಅಂತವರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಯವರ ಜೊತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಈಶ್ವರಾನಂದ ಸ್ವಾಮಿ, ಶಾಂತಮೂರ್ತಿ ಸ್ವಾಮಿ, ಮಾತನಾಡಿದರು
ಈ ಸಂದರ್ಭದಲ್ಲಿ ಎಸ್ಪಿ ಶ್ರೀ ಹರಿಬಾಬು, ಡಿವೈಎಸ್ಪಿ ಮಲ್ಲಪ್ಪ ಮಲ್ಲಾಪುರ, ಮುಖಂಡರಾದ ಎಂಎಂಜೆ ಹರ್ಷವರ್ಧನ್, ದೊಡ್ಡ ರಾಮಣ್ಣ, ಉಜ್ಜಿನಿ ಲೋಕೇಶ್, ಮುಂತಾದವರು ಇದ್ದರು

■ನಮ್ಮ ಮೇಲೆ ಹಲ್ಲೆ ಮಾಡಿರುವ ಕುರಿತು ಪ್ರಕರಣ ದಾಖಲಾದ ಪ್ರತಿ ನೀಡುತ್ತಿಲ್ಲ, ಯಾವ ಯಾವ ಖಾಯ್ದೆಗಳು ದಾಖಲಾಗಿವೆ ಎಂಬ ಮಾಹಿತಿ ನೀಡುತ್ತಿಲ್ಲ, ಇದಕ್ಕೆ ಪ್ರಮುಖ ಕಾರಣರಾಗಿರುವರನ್ನು ಬಂಧಿಸಿಲ್ಲ ಈ ಎಲ್ಲ ಘಟನೆಗಳು ನೋಡಿದರೆ ರಾಜಕೀಯ ಒತ್ತಡ ಬರುತ್ತಿದೆ ಎಂಬ ಸಂಶಯ ಮೂಡುತ್ತದೆ. ನಾವು ದೌರ್ಜನಕ್ಕೆ ಒಳಗಾಗಿ
ನಮ್ಮ ಮನೆಗಳಿಗೆ, ಹಾಗೂ ದುಡಿಮೆಯ ವಾಹನಗಳಿಗೆ, ಅಂಗಡಿ ಮುಗಟ್ಟುಗಳಿಗೆ, ತುಂಬಲಾಗದ ನಷ್ಟ ಉಂಟಾಗಿದೆ ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಇಲ್ಲವಾದರೆ ಜೀವನ ನಡೆಸಿದ ತುಂಬಾ ಕಷ್ಟಕರವಾಗುತ್ತದೆ.

-ಗ್ರಾಮಸ್ಥರು

ವರದಿ:ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here