ಮೆಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಪ್ಸಿಲಾನ್ ಕಾರ್ಬನ್ ಪ್ರೈವೇಟ್ ಲಿಮಿಟೆಡ್ ಪ್ಯಾಕ್ಟರಿಯಿಂದ ವೈದ್ಯಕೀಯ ಉಪಕರಣಗಳ ಕೊಡುಗೆ

0
324

ಸಂಡೂರು: ಜುಲೈ: 06: ಮೆಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳೀಯ ಎಪ್ಸಿಲಾನ್ ಕಾರ್ಬನ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಯಿಂದ 50 ಕ್ಕೂ ಹೆಚ್ಚು ವೈದ್ಯಕೀಯ ಉಪಕರಣಗಳ ಕೊಡುಗೆ ನೀಡಲಾಯಿತು
ತಾಲೂಕಿನ ಮೆಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳೀಯ ಎಪ್ಸಿಲಾನ್ ಕಾರ್ಬನ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ರವಿಕುಮಾರ್ ಬಾರಸ್ಕರ್ ಮತ್ತು ಸಿ.ಎಸ್.ಆರ್ ಮುಖ್ಯಸ್ಥರಾದ ರಾಜೇಶ್ ಮೌರ್ಯ ಅವರು ಆಗಮಿಸಿ ಮೆಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 50 ಕ್ಕೂ ಹೆಚ್ಚು ವೈದ್ಯಕೀಯ ಉಪಕರಣಗಳನ್ನು ಒದಗಿಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ದನ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಮೆಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪೂರ್ಣ ನವೀಕರಣ ಗೊಂಡ ಸಂದರ್ಭದಲ್ಲಿ ಸಿ.ಎಸ್.ಆರ್ ಫಂಡಿನಲ್ಲಿ ಅತ್ಯವಶ್ಯಕವಾದ ಶಸ್ತ್ರಚಿಕಿತ್ಸಾ ಉಪಕರಣಗಳು,ವೈದ್ಯಕೀಯ ಉಪಕರಣಗಳು,ಇ.ಸಿ.ಜಿ ಯಂತ್ರ, ಪೀಠೋಪಕರಣಗಳು, ಹಾಸಿಗೆಗಳು,ಡಿಫಿಬ್ರಿಲೇಟರ್,ಮತ್ತು ಆಶಾ ಕಿಟ್ ಸೇರಿದಂತೆ 50 ಕ್ಕೂ ಹೆಚ್ಚು ಉಪಕರಣಗಳನ್ನು ಒದಗಿಸಿದ್ದಾರೆ, ಇದರಿಂದಾಗಿ ಇಲ್ಲಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪೂರೈಸಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಎಪ್ಸಿಲಾನ್ ಕಾರ್ಬನ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ರವಿಕುಮಾರ್ ಬಾರಸ್ಕರ್ ಅವರು ಮಾತನಾಡಿ ಸ್ಥಳೀಯ “ಪ್ರಾಥಮಿಕ ಅರೋಗ್ಯ ಕೇಂದ್ರಗಳ ಬಲವರ್ಧನೆ”ಗೆ ಎಪ್ಸಿಲಾನ್ ಕಾರ್ಬನ್ ಫ್ಯಾಕ್ಟರಿಯು ಸಹಕಾರ ನೀಡುತ್ತಾ ಬಂದಿದ್ದು ಹೆಮ್ಮೆ ಎನಿಸುತ್ತಿದೆ, ಈಗಾಗಲೇ ಗ್ರಾಮಗಳಲ್ಲಿ ಸಂಚಾರಿ ಆರೋಗ್ಯ ಘಟಕದಿಂದ (ಆಂಬ್ಯೂಲೆನ್ಸ್) ಸೇವೆಗಳನ್ನು ನೀಡುತ್ತಿದ್ದು, ಕೋವಿಡ್ ಸಮಯದಲ್ಲಿ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳು, ಹಾಗೂ ಕುಡಿತಿನಿ ಮತ್ತು ವಿಠಲಾಪುರ ಕೇಂದ್ರಗಳಿಗೂ ಸಹ ಉಪಕರಣಗಳನ್ನು ಪೂರೈಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಧನ್ಯವಾದಗಳು ಅರ್ಪಿಸುತ್ತಾ, ಮುಂದಿನ ದಿನಗಳಲ್ಲಿ ಮತ್ತಷ್ಟು ಕೈಜೋಡಿಸಲು ಅವಕಾಶ ಮಾಡಿ ಕೊಡುವಂತೆ ಮನವಿ ಮಾಡಿದರು,
ಈ ಸಂದರ್ಭದಲ್ಲಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕುಶಾಲ್ ರಾಜ್ ಮೆಟ್ರಿಕಿ ಕೇಂದ್ರವನ್ನು ಸುಸಜ್ಜಿತ ಆಸ್ಪತ್ರೆಯನ್ನಾಗಿ ರೂಪಿಸಿದ್ದಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಧಿಕಾರಿ ಡಾ.ಹೆಚ್.ಎಲ್ ಜನಾರ್ದನ್ ಅವರಿಗೂ ಮತ್ತು ಎಪ್ಸಿಲಾನ್ ಕಾರ್ಬನ್ ಫ್ಯಾಕ್ಟರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ರವಿಕುಮಾರ್ ಬಾರಸ್ಕರ್ ಅವರಿಗೂ ಗೌರವ ಸನ್ಮಾನ ಮಾಡಿ ಕೃತಜ್ಞತೆಗಳನ್ನು ತಿಳಿಸಿದರು,

ಈ ಸಂದರ್ಭದಲ್ಲಿ ಡೆಪ್ಯುಟಿ ಮ್ಯಾನೇಜರ್ ಗಣೇಶ್ ವಾಲ್ವೆಕಾರ್,ಡಾ.ಸಾಯಿರಾಂ, ಸಿಬ್ಬಂದಿ ಜಡೆಮ್ಮ,ಶೃತಿ,ಮಂಜುನಾಥ್, ವೀರೇಂದ್ರ ಸ್ವಾಮಿ,ಉಮಾ,ಸಂಧ್ಯಾರಾಣಿ, ರತ್ನಮ್ಮ,ವಿದ್ಯಾಶ್ರಿ,ಮೇಘನಾ,ತುಕಾರಾಮ್, ಆಶಾ ಕಾರ್ಯಕರ್ತೆ ಈರಮ್ಮ, ಅನುಪಮಾ,ಲಕ್ಷ್ಮಿ, ಗೌರಮ್ಮ,ಪುಷ್ಪ, ರತ್ನಮ್ಮ,ಸುನಿತಾ,ಶಿಲ್ಪಾ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here