ಗ್ರಾಮ ಪಂಚಾಯಿತಿ ತೆರವಾದ ಸ್ಥಾನಗಳಿಗೆ ಉಪ ಚುನಾವಣಾ ವೇಳಾ ಪಟ್ಟಿ ಪ್ರಕಟ

0
71

ಬಳ್ಳಾರಿ,ಜು.06:ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಆದೇಶಿಸಿದ್ದಾರೆ.

ನಾಮಪತ್ರಗಳನ್ನು ಸಲ್ಲಿಸಲು ಜುಲೈ 12 ರಂದು ಕೊನೆಯ ದಿನವಾಗಿರುತ್ತದೆ. ಜುಲೈ 13 ರಂದು ನಾಮ ಪತ್ರಗಳನ್ನು ಪರಿಶೀಲಿಸುವ ದಿನವಾಗಿರುತ್ತದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಜುಲೈ 15 ಕೊನೆಯ ದಿನವಾಗಿರುತ್ತದೆ. ಮತದಾನವು ಜುಲೈ 23 ರಂದು ನಡೆಯಲಿದೆ.

ಖಾಲಿ ಇರುವ ಗ್ರಾಮ ಪಂಚಾಯಿತಿಗಳ ವಿವರ:
ಬಳ್ಳಾರಿ ತಾಲೂಕಿನ ಚಾನಾಳು ಗ್ರಾಮ ಪಂಚಾಯಿತಿ ಖಾಲಿ ಇರುವ ಸ್ಥಾನ 1(ಸಾಮಾನ್ಯ). ಸಿರುಗುಪ್ಪ ತಾಲೂಕಿನ ಬಿ.ಎಂ.ಸೂಗೂರು ಗ್ರಾಪಂನಲ್ಲಿ 2 ಸ್ಥಾನ(ಸಾಮಾನ್ಯ, ಸಾಮಾನ್ಯ ಮಹಿಳೆ), ದೇಶನೂರು ಗ್ರಾಪಂನಲ್ಲಿ ಸ್ಥಾನ 1(ಸಾಮಾನ್ಯ), ಕುಡುದರಹಾಳ್ ಗ್ರಾಪಂನಲ್ಲಿ ಸ್ಥಾನ 1(ಸಾಮಾನ್ಯ ಮಹಿಳೆ). ಕಂಪ್ಲಿ ತಾಲೂಕಿನ 10.ಮುದ್ದಾಪುರ ಗ್ರಾಪಂನಲ್ಲಿ 2 ಸ್ಥಾನ(ಸಾಮಾನ್ಯ, ಸಾಮಾನ್ಯ) ಕ್ಕೆ ಉಪ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here