“ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ” ಸಮೀಕ್ಷೆಗೆ ಚಾಲನೆ ನೀಡಿದ ಕೆ.ಕಲ್ಗುಡೆಪ್ಪ

0
365

ಸಂಡೂರು: ಜು:17: ಕುರೇಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ “ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ” ಸಮೀಕ್ಷೆಗೆ ಚಾಲನೆ ನೀಡಿದ ಸದಸ್ಯ ಕೆ.ಕಲ್ಗುಡೆಪ್ಪ, ತಿಳಿಸಿದರು
ತಾಲೂಕಿನ ಕುರೇಕುಪ್ಪ ಪುರಸಭೆಯ ಮುದುಗಮ್ಮ ದೇವಸ್ಥಾನದ ಆವರಣದಲ್ಲಿ ಸಮೀಕ್ಷೆಗೆ ಚಾಲನೆ ನೀಡಿ ಮಾತನಾಡಿದ ಕೆ.ಕಲ್ಗುಡೆಪ್ಪ ಕ್ಷಯರೋಗಕ್ಕೆ ಉತ್ತಮ ಚಿಕಿತ್ಸೆ ಕೊಟ್ಟಿದ್ದರಿಂದ ರೋಗಿಗಳ ಸಂಖ್ಯೆ ಕಡಿಮೆಯಾಗಿರಬಹುದು,ಇಂತಹ ಮನೆ ಮನೆ ಸಮೀಕ್ಷೆಯಿಂದ ಸಲ್ಪ ಲಕ್ಷಣಗಳು ಇದ್ದವರನ್ನು ಬೇಗ ಪತ್ತೆ ಹಚ್ಚಲು ಸಾಧ್ಯವಿದೆ ಬಡಜನತೆಯನ್ನು ಕ್ಷಯರೋಗದಿಂದ ರಕ್ಷಿಸಲು ನಾವು ಕೈಜೋಡಿಸಲು ಸಿದ್ದ, ಸಮೀಕ್ಷೆ ಯಶಸ್ವಿಯಾಗಲಿ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸಮೀಕ್ಷೆ ಹದಿನೇಳು ದಿನಗಳು ನಡೆಯಲಿದೆ, ಯಾರಿಗಾದರೂ ಎಡಬಿಡದೆ ಕೆಮ್ಮು, ಕೆಮ್ಮಿದಾಗ ಕಫ,ಕಫದಲ್ಲಿ ರಕ್ತದ ಕಣಗಳು,ಸಂಜೆ ಜ್ವರ, ರಾತ್ರಿ ಬೆವರು,ಹಸಿವೆ ಇಲ್ಲದಿರುವುದು,ನಿರಂತರ ತೂಕ ಇಳಿಕೆ, ಆಯಾಸ ಇಂತಹ ಸಾಮಾನ್ಯ ಲಕ್ಷಗಳು ಇವವರು ನಿಮ್ಮ ಕಣ್ಣಿಗೆ ಬಿದ್ದರೆ ಕಪ ಪರೀಕ್ಷೆಗೆ ಕಳಿಸಿ, ರೋಗ ಪತ್ತೆಯಾದರೆ ಉಚಿತ ಪೂರ್ಣ ಚಿಕಿತ್ಸೆ ನೀಡಿ, ಚಿಕಿತ್ಸೆ ಅವಧಿಯ ಆರು ತಿಂಗಳು 500/-ರೂ ಗಳ ಸಹಾಯಧನ ನೀಡಲಾಗುವುದು, ಕ್ಷಯರೋಗ ಮುಕ್ತ ಗ್ರಾಮವಾಗಲು ಎಲ್ಲರೂ ಕೈಜೊಡಿಸಿ ಎಂದು ಮನವಿ ಮಾಡಿದರು,

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಗಿರೆಪ್ಪ,ಅಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಸುರಕ್ಷಾಧಿಕಾರಿ ಸೂಫಿಶರ್ಮ, ಆಶಾ ಕಾರ್ಯಕರ್ತೆ ಬಸಮ್ಮ,ನೀಲಮ್ಮ, ತಿಮ್ಮಕ್ಕ,ಅಂಬಮ್ಮ,ಈರಮ್ಮ,ತಿಪ್ಪಮ್ಮ,ರಾಮಪ್ಪ, ಪ್ರಭು, ಹೊನ್ನೂರುಸ್ವಾಮಿ, ಹನುಮಂತಪ್ಪ, ಪರಶುರಾಮ್,ಸುಭಾಶ್, ಚಿದಂಬರೇಶ,ಹುಲುಪ್ಪ,ಗಂಗಾಧರ,ಕರೆಪ್ಪ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here