ಶಿವಶರಣ ಹಡಪದ ಅಪ್ಪಣ್ಣ ಜಯಂತಿಯ ಪೂರ್ವಭಾವಿ ಸಭೆ.

0
105

ಸಂಡೂರು:ಜೂನ್:28:- ಸಂಡೂರು ಪಟ್ಟಣದಲ್ಲಿ 13-07-2022 ರಂದು ನಡೆಯಲಿರುವ ಶಿವಶರಣ ಹಡಪದ ಅಪ್ಪಣ್ಣ ನವರ ಜಯಂತಿಯ ಬಗ್ಗೆ,ಸಂಡೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಸಮುದಾಯದ ಮುಖಂಡರಿಂದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಅಧ್ಯಕ್ಷ-ಕಾರ್ಯದರ್ಶಿ ಗಳು ಹಾಗೂ ಗುರು ಹಿರಿಯರು, ಯುವಕರು ಸೇರಿದಂತೆ ಕೋರೋನಾ ಅನ್ನೋ ಮಹಾಮಾರಿಯಿಂದ 2 ವರ್ಷಗಳಿಂದ ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸಲು ಆಗಲಿಲ್ಲ, ಇದರಿಂದ ನಮ್ಮ ಹಡಪದ ಸಮಾಜದವರಿಗೆ ತುಂಬಾ ಬೇಜಾರಿನ ವಿಷಯವಾಗಿದೆ. ಹಾಗಾಗಿ ನಾವು ಈ ಸಾರಿ ನಮ್ಮ ಹಡಪದ ಅಪ್ಪಣ್ಣನವರ ಜಯಂತಿಯನ್ನು ಬಹಳ ಅದ್ದೂರಿಯಾಗಿ, ವಿಜೃಂಭಣೆಯಿಂದ ಆಚರಿಸೋಣ ಎಂದು ಸಭೆಯಲ್ಲಿ ಸರ್ವರೂ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ- ಕಾರ್ಯದರ್ಶಿಗಳಾದ ದೊಡ್ಡ ಬಸಪ್ಪ ಹಾಗೂ ಗಣೇಶ್ (ಸಾಸಲವಾಡ ) ಇವರು ಮಾತನಾಡುತ್ತಾ, ನಮ್ಮ ಹಡಪದ ಅಪ್ಪಣ್ಣ ಸಮಾಜದ ಸರ್ವ ಸದಸ್ಯರು ಈ ಜಯಂತಿಗೆ ಆಗಮಿಸಿ, ಜಯಂತಿಯನ್ನು ಅದ್ದೂರಿಯಾಗಿ ಯಶಸ್ವಿ ಗೊಳಿಸಬೇಕೆಂದು ಕರೆ ನೀಡಿದರು. ಹಾಗೆ ಅವರು ನಮ್ಮ ಹಡಪದ ಅಪ್ಪಣ್ಣ ಸಮಾಜವು, ಈ ನಮ್ಮ ಸಮಾಜದಲ್ಲಿ ಬಹು ಮುಖ್ಯ ಪಾತ್ರವನ್ನುವಹಿಸುತ್ತಿದೆ, ಆದರೂ ನಮಗೆ ಇಂದಿಗೂ ಕೂಡ ಯಾವುದೇ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ, ನಾವು ನಮ್ಮ ಕಾಯಕವನ್ನು ತುಂಬಾ ಶಿಸ್ತಾಗಿ, ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಕೂಡ ನಮ್ಮ ಕಾಯಕದ ಮೇಲೆ ಒಂದೇ ಜೀವನ ನಡೆಸೋ ಅದೆಷ್ಟೋ ಬಡ ಕುಟುಂಬಗಳು ಇದ್ದಾವೆ, ಆದ್ದರಿಂದ ರಾಜ್ಯ ಸರ್ಕಾರವು ಈಗಲಾದರೂ ನಮ್ಮ ಸಮಾಜವನ್ನು ಗುರುತಿಸಿ, ಸರ್ಕಾರದ ಸೌಲಭ್ಯಗಳನ್ನು ನಮಗೆ ಓದಿಗಿಸಿಕೊಟ್ಟು, ನಮ್ಮ ಸಮಾಜದ ಬೆಳವಣಿಗೆಗೆ ಸಾತ್ ನೀಡಬೇಕೆಂದು ಆಶಿಸುತ್ತಾ. ನಾವು ಈ ಸಭೆಯ ಮೂಲಕ ರಾಜ್ಯ ಸರ್ಕಾರಕ್ಕೆ ಒಂದೇ ಮನವಿಯನ್ನು ಮಾಡಿಕೊಳ್ಳುತ್ತಿದ್ದೇವೆ, ನಮ್ಮ ಹಡಪದ ಅಪ್ಪಣ್ಣ ಸಮಾಜವನ್ನು ಈಗಲಾದರೂ ಪ್ರತ್ಯೇಕವಾಗಿ ಗುರುತಿಸಿ, ನಮ್ಮ ಕಾಯಕಕ್ಕೆ ಅನುಕೂಲವಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿ ಕೊಳ್ಳುತ್ತಿದ್ದೇವೆ ಎಂದು ಆಗ್ರಹಿಸಿದರು.

ಈ ಪೂರ್ವಬಾವಿ ಸಭೆಯ ಸಂಧರ್ಭದಲ್ಲಿ ಸಂಡೂರು ಪಟ್ಟಣದ ಹಡಪದ ಸಮಾಜದ ಗುರು -ಹಿರಿಯರು ಮತ್ತು ಸರ್ವ ಸದಸ್ಯರು ಹಾಗೂ ಸಂಡೂರು ಗ್ರಾಮ ಘಟಕಗಳಾದ ಭುಜಂಗನಗರ, ಯಶವಂತನಗರ, ಕೃಷ್ಣನಗರ, ಬಂಡ್ರಿ, ಸೊವೇನಹಳ್ಳಿ ತುಂಬರಾಗುದ್ದಿ, ದೇವಗಿರಿ,ಭೋಮ್ಮಘಟ್ಟ, ಗೆಣತಿಕಟ್ಟೆ, ತಾರನಗರ, ಉಬ್ಬಲಗಂಡಿ ಹಾಗೂ ಇನ್ನಿತರ ಗ್ರಾಮದ ಹಡಪದ ಅಪ್ಪಣ್ಣ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here