ಉದ್ಯಾನವನಗಳ ಅಭಿವೃದ್ಧಿಯೇ ಸಾರ್ವಜನಿಕರ ಹಿತಕ್ಕಾಗಿ :ಎ ನಸರುಲ್ಲಾ

0
167

ಕೊಟ್ಟೂರು: ಸುಂದರ ಹೂವುಗಳು, ಹಸಿರು ಹುಲ್ಲಿನ ಹಾಸು, ಪಕ್ಷಿಗಳ ಕಲರವ, ಬಗೆಬಗೆಯ ಗಿಡಮರಗಳನ್ನು ತನ್ನೊಡಲಲ್ಲಿ ತುಂಬಿಕೊಂಡು ನಳನಳಿಸುತ್ತ ನೋಡುಗರಿಗೆ ಸಂತಸ ನೀಡವ ಉದ್ಯಾನವನಗಳು

ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ನಿಯಮದ ಪ್ರಕಾರ ಉದ್ಯಾನವನಕ್ಕೆಂದು ಮೀಸಲಾದ ಸ್ಥಳವನ್ನು ಪಟ್ಟಣ ಪಂಚಾಯ್ತಿ ತನ್ನ ಸುಪರ್ಧಿಗೆ ಪಡೆದು ಸಾರ್ವಜನಿಕರ ಹಿತಕ್ಕೋಸ್ಕರ ಮೂಲ ಸೌಕರ್ಯಗಳನ್ನು ಕಲ್ಪಿಸ ಬೇಕಾಗಿದೆ.

ಉದ್ಯಾನವನಗಳಲ್ಲಿ ವಾಯು ವಿಹಾರಕ್ಕೆ ಪಾದಾಚಾರಿ ರಸ್ತೆ ಹಾಗೂ ಮಕ್ಕಳಿಗೆ ಆಟಿಕೆ ಸಾಮಾಗ್ರಿಗಳು ಹಾಗೂ ವ್ಯಾಯಾಮ ಸಾಮಾಗ್ರಿಗಳನ್ನು ಅಳವಡಿಸುವುದು, ಆಸನಗಳ ವ್ಯವಸ್ಥೆ ಹಾಗೂ ನೀರು, ವಿದ್ಯುತ್ ದೀಪ ಮುಂತಾದ ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ ಆಯಾ ಬಡಾವಣೆ ನಿವಾಸಿಗಳಿಗೆ ವಿಶ್ರಾಂತಿ ಪಡೆಯುವುದರ ಜೊತೆ ಮನಸ್ಸಿಗೆ ಅಹ್ಲಾದಕರ ವಾತಾವರಣ ಉಂಟಾಗುತ್ತದೆ ಎಂದು ಹಿರಿಯ ನಾಗರಿಕ ಗುರುಬಸವರಾಜ್ ಅಭಿಪ್ರಾಯಿಸುತ್ತಾರೆ.

ಪಟ್ಟಣದ ವಿದ್ಯಾನಗರ, ನೇಕಾರ ಕಾಲೋನಿ ಹಾಗೂ ಆಂಜನೇಯ ಬಡಾವಣೆ ವಿಶ್ವೇಶ್ವರಯ್ಯ ಮಕ್ಕಳಿಗೆ ಆಟಿಕೆ ಸಾಮಾಗ್ರಿಗಳು ವೃದ್ಧರಿಗೆ ಮೆಚ್ಚಿಗೆ ಉದ್ಯಾನವನ ಅಗಿದೆ,ಮುಂತಾದ ನಾಲ್ಕೈದು ಉದ್ಯಾನವನಗಳಲ್ಲಿ ಹಸಿರು ಹೊನಲು ತಂಡ ಹಾಗೂ ಕೆಲವು ಬಡಾವಣೆ ನಿವಾಸಿಗಳು  ಸ್ವಯಂ ಆಸಕ್ತಿವಹಿಸಿ ಗಿಡಮರಗಳನ್ನು ನೆಟ್ಟು ಪೋಷಿಸುತ್ತಿರುವುದರಿಂದ ಬೆರಳೆಣಿಕೆಯಷ್ಟು ಉದ್ಯಾನವನಗಳು ಹಸಿರಿನಿಂದ ಕಂಗೊಳಿಸುತ್ತಿರುವ ದೃಶ್ಯ ಕಾಣಬಹುದು.

ಆಯಾ ಬಡಾವಣೆ ನಿವಾಸಿಗಳ ಸಹಭಾಗಿತ್ವದಲ್ಲಿ ಉದ್ಯಾನವನಗಳ ಅಭಿವೃದ್ಧಿಗೆ  ಸ್ಥಳೀಯರು ಕೈಜೋಡಿಸಿದರೆ  ಪಟ್ಟಣದ ಸೌಂದರ್ಯ ಹೆಚ್ಚಿಸುವುದರ ಜೊತೆಯಲ್ಲಿ ಉದ್ಯಾನವನಗಳು ಅಭಿವೃದ್ಧಿಯ ಭಾಗ್ಯ ಕಾಣುತ್ತವೆ ಎಂದು ಹಸಿರು ಹೊನಲು ತಂಡದ ನಾಗರಾಜ್ ಬಂಜಾರ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪಟ್ಟಣದಾದ್ಯಂತ 140 ಕ್ಕೂ  ಹೆಚ್ಚು ಉದ್ಯಾನವನಗಳು ಇದ್ದು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಮುಂದಾಗುತ್ತೇವೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ನಸರುಲ್ಲಾ ತಿಳಿಸಿದರು.

ಪಟ್ಟಣದ ಜನತೆಗೆ ಸೌಲಭ್ಯಗಳನ್ನು ಕಲ್ಪಿಸಬೇಕಾದ ಸ್ಥಳೀಯ ಆಡಳಿತವು ಅಭಿವೃದ್ಧಿಯ ಪ್ರತಿ ಹಂತದಲ್ಲೂ
ಮುಂದಾಗಿ ಪಟ್ಟಣದ ಸೌಂದರ್ಯವನ್ನು ಇಮ್ಮಡಿಗೊಳಿಸಬೇಕೆಂದು ಸಾರ್ವಜನಿಕರ  ಒತ್ತಾಸೆಯಾಗಿದೆ.

LEAVE A REPLY

Please enter your comment!
Please enter your name here