ಕಾಯಿಸಿ,ಆರಿಸಿದ ನೀರನ್ನೇ ಕುಡಿಯಿರಿ, ಬಿಸಿ ಬಿಸಿ ಆಹಾರವನ್ನೆ ಸೇವಿಸಿ, ಸ್ವಚ್ಛತೆಗೆ ಗಮನವಿಡಿ: ಡಿ.ಹೆಚ್.ಓ ಡಾ.ಯಲ್ಲಾ ರಮೇಶ್ ಬಾಬು,

0
495

ಸಂಡೂರು: ಸೆ: 17: ತಾಲೂಕಿನ ಬಂಡ್ರಿ ಸಮೀಪದ ಹಿರೇ ಕೆರೆಯಾಗಿನ ಹಳ್ಳಿಯಲ್ಲಿ ಶನಿವಾರ ಶಂಕಿತ ವಾಂತಿ ಭೇದಿ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಯಲ್ಲಾ ರಮೇಶ್ ಬಾಬು ಅವರು ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು,

ಕುಡಿಯುವ ನೀರಿನ ಮೂಲಗಳ ಮಾದರಿ ಸಂಗ್ರಹಿಸಿದ ಮಾಹಿತಿಯನ್ನು ಪಡೆದರು,ಹಿರೇ ಕೆರೆಯಾಗಿನ ಹಳ್ಳಿಯ ಎರಡನೇ ವಾರ್ಡಿನಲ್ಲಿ ಮಾತ್ರ ಪ್ರಕರಣಗಳು ಕಂಡು ಬಂದಿರುವುದರಿಂದ ಕುಡಿಯುವ ನೀರಿನ ಸರಬರಾಜು ಪೈಪ್ ತಿಪ್ಪೆ ಗುಂಡಿಗಳಲ್ಲಿ ಹಾದು ಹೋಗಿರುವ ಕಾರಣ ತಕ್ಷಣ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದ್ದು, ಶುದ್ಧ ಕುಡಿಯುವ ನೀರನ್ನು ಕ್ಲೋರಿನೇಷನ್ ಮಾಡಿ ಸರಬರಾಜು ಮಾಡುವಂತೆ ಸೂಚಿಸಿದ್ದು, ಆರ್.ಓ ಪ್ಲಾಂಟ್ ಇದ್ದರೂ ಜನರು ಕುಡಿಯಲು ಬಳಸದಿರುವ ಬಗ್ಗೆ ಮಾಹಿತಿ ಪಡೆದ ಅವರು ಮನೆ ಮನೆ ಭೇಟಿ ನೀಡಿ ಜನರಿಗೆ ಕುಡಿಯಲು ಶುದ್ಧ ನೀರು ಬಳಸಬೇಕು, ಬಿಸಿ ಆಹಾರವನ್ನು ಸೇವಿಸ ಬೇಕು, ಕತ್ತರಿಸಿ ತೆರೆದಿಟ್ಟ ಹಣ್ಣು ಹಂಪಲಗಳನ್ನು ಸೇವಿಸ ಬೇಡಿ, ಹೊಲಗಳಿಗೆ ಹೋಗುವಾಗ ಕಾಯಿಸಿದ ನೀರನ್ನೆ ತೆಗೆದು ಕೊಂಡು ಹೋಗಿ, ಊಟ ಮಾಡುವ ಮುಂಚೆ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು, ಬಯಲು ಶೌಚಕ್ಕೆ ಹೋಗಬಾರದು, ಮನೆಯಲ್ಲಿರುವ ಶೌಚಾಲಯಗಳನ್ನು ಬಳಸಬೇಕು ಎಂದು ತಿಳಿಸಿದರು,

ನೀರು ಸಂಗ್ರಹಿಸುವ ಟ್ಯಾಂಕ್ ಗಳನ್ನು ಸ್ವಚ್ಛ ಗೊಳಿಸಲು ಸೂಚಿಲಾಗಿದೆ, ಸಮುದಾಯ ಭವನದಲ್ಲಿ 24/7 ತಾತ್ಕಾಲಿಕ ಕ್ಲಿನಿಕ್ ತೆರದು ಚಿಕಿತ್ಸೆ ನೀಡಲಾಗುತ್ತಿದೆ,ವೈದ್ಯರು ಮತ್ತು ಸಿಬ್ಬಂದಿಯನ್ನು ಗ್ರಾಮಕ್ಕೆ ನಿಯೋಜಿಸಲಾಗಿದೆ,ಸೂಕ್ತ ಔಷಧಿ ಪೂರೈಸಲಾಗಿದೆ, ಆಶಾ ಕಾರ್ಯಕರ್ತರು ಮನೆ ಮನೆ ಸಮೀಕ್ಷೆ ಕೈಗೊಂಡಿದ್ದಾರೆ, ವಾಂತಿ ಭೇದಿ ನಿಯಂತ್ರಣ ಕುರಿತು ಅರಿವನ್ನು ಮೂಡಿಸುತ್ತಿದ್ದಾರೆ, ಕೈಗಳನ್ನು ಸ್ವಚ್ಛವಾಗಿ ತೊಳೆಯುವ ಪ್ರಾತ್ಯಕ್ಷಿಕೆ ಮಾಡಿ ತೋರಿಸುತ್ತಿದ್ದಾರೆ, ಆತಂಕ ಬೇಡ,ಕಾಲರಾ ನಿಯಂತ್ರಣ ಮಾರ್ಗ ಸೂಚಿಗಳನ್ನು ಎಚ್ಚರಿಕೆಯಿಂದ ಇರಲು ಸೂಚಿಸಿದರು,
ಇಲ್ಲಿಯವರೆಗೆ ಒಟ್ಟು 29 ಪ್ರಕರಣಗಳು ವರದಿಯಾಗಿದ್ದು ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 4, ಕೂಡ್ಲಿಗಿ ಆಸ್ಪತ್ರೆಯಲ್ಲಿ 5, ಬಳ್ಳಾರಿ ವಿಮ್ಸ್‌ನಲ್ಲಿ 2, ಉಳಿದಂತೆ 18 ಗ್ರಾಮದಲ್ಲೆ ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದಾರೆ,

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಮರಿಯಂಬಿ,ಮತ್ತು ಅವರ ತಂಡ, ಕಾರಲರಾ ನಿಯಂತ್ರಣ ಘಟಕದ ತಂಡ, ತಾಲೂಕಿನ ಆರೋಗ್ಯಾಧಿಕಾರಿ ಡಾ.ಭರತ್ ಕುಮಾರ್, ಡಾ.ಚಂದ್ರಪ್ಪ, ಚೋರುನೂರು ವೈದ್ಯಾಧಿಕಾರಿ ಡಾ. ಅಕ್ಷಯ್, ಬಂಡ್ರಿ ಮತ್ತು ತಾಲೂಕಿನ ಆರೋಗ್ಯಾಧಿಕಾರಿಗಳ ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here