ಜೆ.ಎಸ್.ಎಸ್.ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ

0
102

ಧಾರವಾಡ ಫೆ.12: 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ನಗರದ ಜೆ.ಎಸ್.ಎಸ್. ಕಾಲೇಜು ಆವರಣದಲ್ಲಿ ಇಂದು (ದಿ:12.02.2021 ರಂದು) ರಸ್ತೆ ಸುರಕ್ಷತೆ ಕುರಿತು ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

ಜೆ.ಎಸ್.ಎಸ್. ಕಾಲೇಜು ಪ್ರಾಂಶುಪಾಲರಾದ ಅಜಿತ ಪ್ರಸಾದ್ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡುವ ಸಮಯದಲ್ಲಿ ಸಮಯ ಪ್ರಜ್ಞೆ, ತಾಳ್ಮೆಯಿಂದ, ಸಂಚಾರಿ ನಿಯಮಗಳನ್ನು ಪಾಲಿಸಿ ವಾಹನ ಚಾಲನೆ ಮಾಡುವಂತೆ ಸಲಹೆ ನೀಡಿದರು.

ಹಿರಿಯ ಮೋಟಾರು ವಾಹನ ನಿರೀಕ್ಷಕ ಪಿ.ಆರ್.ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ಕಡ್ಡಾಯವಾಗಿ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು, ವಾಹನ ಚಾಲನೇ ಮಾಡುವ ಸಮಯದಲ್ಲಿ ಐ.ಎಸ್.ಐ ಮಾರ್ಕ ಹೊಂದಿರುವ ಹೆಲ್ಮೆಟ್‍ಗಳನ್ನು ಧರಿಸಿ ವಾಹನ ಚಾಲನೆ ಮಾಡಬೇಕು. ಇಲ್ಲದಿದ್ದರೆ ಅಪಘಾತ ಸಂಭವಿಸಿದಾಗ ತೆಲೆಗೆ ಪೆಟ್ಟು ಬಿದ್ದು ಮೃತ ಪಟ್ಟ ನಿರ್ದೇಶನಗಳನ್ನು ವಿವರಿಸಿದರು, ಕಾರು ಚಾಲನೆ ಮಾಡುವ ಸಮಯದಲ್ಲಿ ಸೀಟಬೇಲ್ಟ್ ಹಾಕಿಕೊಂಡು ವಾಹನ ಚಾಲನೆ ಮಾಡಲು ತಿಳಿಸಿದರು. ಸಮಾರಂಭದಲ್ಲಿ ಜೆ.ಎಸ್.ಎಸ್. ಕಾಲೇಜಿನ ಮಹಾವೀರ ಉಪಾಧ್ಯೆ, ಸಾರಿಗೆ ಇಲಾಖೆಯ ಸಿಬ್ಬಂದಿಗಳಾದ ಎಂ.ಎಫ್.ಬನಹಟ್ಟಿ ಹಾಗೂ ಲಕ್ಷ್ಮೀ ಹಾಜರಿದ್ದರು.

LEAVE A REPLY

Please enter your comment!
Please enter your name here