ಸಿರಗುಪ್ಪದಲ್ಲಿ ಸಂತ ಸೇವಾಲಾಲ್ 283 ನೇ ಜಯಂತ್ಯೋತ್ಸವ

0
145

ಸಿರುಗುಪ್ಪ,ಫೆ.15 ; ಜನರಲ್ಲಿನ ಅಜ್ಞಾನ, ಅಂಧಕಾರ, ಅಸಮಾನತೆ, ಜಾತಿ ಪದ್ಧತಿ ಮತ್ತು ಧರ್ಮಾಂದತೆಗಳನ್ನು ತೊಡೆದುಹಾಕಲು ಹಲವು ಜನ ಸಾಂಸ್ಕೃತಿಕ ನಾಯಕರು ಮೇಧಾವಿಗಳು ಹೋರಾಡಿದ್ದಾರೆ ಅಂಥವರಲ್ಲಿ ಸಂತ ಸೇವಾಲಾಲ್ ಪ್ರಮುಖರು ಎಂದು ಸಿರಗುಪ್ಪ ತಹಶೀಲ್ದಾರ್ ಸತೀಶ್ ಬಿ ಕೂಡಲಗಿ ಹೇಳಿದರು.
ಸಿರಗುಪ್ಪದ ತಾಲ್ಲೂಕು ಪಂಚಾಯತ್ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸಂತ ಸೇವಲಾಲರ 283ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು.
ಸೇವಾಲಾಲ್ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ಸಾಗಿಸಿ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಶಾಸೂಮೊದೀನ್ ಅವರು ಮಾತನಾಡಿ ಸೇವಾಲಾಲ್ ಮತ್ತು ಜಗನ್ಮಾತೆ ಮರಿಯಮ್ಮಳ ಮಂದಿರಗಳ ಅಭಿವೃದ್ಧಿಗೆ 68 ಲಕ್ಷ ರೂ. ಸರ್ಕಾರ ಅನುದಾನ ಮಂಜೂರು ಮಾಡಿದ್ದು ಶೀಘ್ರದಲ್ಲಿಯೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.
ದೈಹಿಕ ಶಿಕ್ಷಕ ಬಿ ಈರಣ್ಣ ಕಾರ್ಯಕ್ರಮ ನಿರೂಪಿಸಿದರು, ಸಹಾಯಕ ಕೃಷಿ ನಿರ್ದೇಶಕ ಎನ್ ನಜೀರ್ ಅಹ್ಮದ್, ಲೋಕಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಎ ಅಬ್ದುಲ್ ನಬಿ, ಜಿಲ್ಲಾ ಪಂಚಾಯತ್ ಸದಸ್ಯೆ ರಾಧಾ ಧರಪ್ಪ ನಾಯಕ್, ಬಂಜಾರ ಸಮಾಜದ ಭೀಮಾ ನಾಯಕ್, ನಗರಸಭೆಯ ಸದಸ್ಯ ಮಹಾದೇವ, ತಾಲ್ಲೂಕು ಪಂಚಾಯತಿಯ ಅಲ್ಲಾಭಕ್ಷಿ, ವಕೀಲ ವೆಂಕಟೇಶ ನಾಯಕ್, ಬಂಜಾರ ಸಮುದಾಯದ ಮುಖಂಡರು, ವಿವಿಧ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here