ಅಸ್ಪøಶ್ಯತೆ ನಿವಾರಣಾ ಸಪ್ತಾಹ ಆಚರಣೆ ನಿಮಿತ್ತ ಬೀದಿನಾಟಕ/ಕರಪತ್ರಗಳ ಮುಖೇನ ಜಾಗೃತಿ,ಬೀದಿನಾಟಕದ ಮೂಲಕ ಅಸ್ಪøಶ್ಯತೆ ನಿವಾರಣೆ ಜಾಗೃತಿ

0
73

ಬಳ್ಳಾರಿ,ಫೆ.22 : ಅಸ್ಪøಶ್ಯತೆ ನಿವಾರಣಾ ಸಪ್ತಾಹ ಆಚರಣೆ ನಿಮಿತ್ತ ಅಸ್ಪೃಶ್ಯತೆ ನಿವಾರಣೆಗೆ ಸಂಬಂಧಿಸಿದಂತೆ ಬೀದಿನಾಟಕ ಹಾಗೂ ಕರಪತ್ರಗಳ ಮುಖಾಂತರ ಜಾಗೃತಿ ಮೂಡಿಸುವ ಕಲಾ ಜಾಥಾಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸೋಮವಾರ ಚಾಲನೆ ನೀಡಿದರು.
ಚಾಲನೆ ನೀಡಿದ ನಂತರ ಅವರು ಮಾತನಾಡಿ, ಅಸ್ಪøಶ್ಯತೆ ಆಚರಣೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು,ಕಂಡುಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ ಅವರು ಅಸ್ಪøಶ್ಯತೆ ನಿವಾರಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿ ಎಂದರು.
ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಅಧಿನಿಯಮ 1989 ಹಾಗೂ 2005 ಮತ್ತು ನಿಯಮಗಳು 1995 ಮತ್ತು ಪರಿಷ್ಕøತ ನಿಯುಮಗಳ 2016ರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಒಂದು ವಾರಗಳ ಕಾಲ ಅಸ್ಪøಶ್ಯತೆ ನಿವಾರಣೆ ಸಪ್ತಾಹ ಕಾರ್ಯಕ್ರಮವು ನಡೆಯಲಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ ಅವರು ಮಾತನಾಡಿ, ಫೆ.22ರಿಂದ 26ರವರೆಗೆ ಐದು ದಿನಗಳ ಕಾಲ ತಾಲೂಕು, ಹೋಬಳಿ, ಗ್ರಾಮೀಣ ಮಟ್ಟದಲ್ಲಿ ಸಾಕ್ಷ್ಯ-ಚಿತ್ರ ಪ್ರದರ್ಶನ, ಬೀದಿ ನಾಟಕ ಮತ್ತು ಕರಪತ್ರ ಹಂಚುವುದರ ಜೊತೆಗೆ ಪ್ರತಿದಿನ 3 ಕಾರ್ಯಕ್ರಮಗಳಂತೆ 3 ಗ್ರಾಮಗಳಲ್ಲಿ ಅಂತರ್ ಜಾತಿ ವಿವಾಹ, ಸರಳ ವಿವಾಹ, ವಿಧವಾ ವಿವಾಹ, ದಂಪತಿಗಳಿಗೆ ಪ್ರೋತ್ಸಾಹ ಧನ, ದೇವದಾಸಿ ವಿವಾಹ, ದೌರ್ಜನ್ಯದಲ್ಲಿ ನೊಂದ ಸಂತ್ರಸ್ತರಿಗೆ ಪರಿಹಾರ ಹಾಗೂ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಅನುಷ್ಟಾನಗೊಳಿಸುತ್ತಿರುವ ಇತರೆ ಕಾರ್ಯಕ್ರಮಗಳ ಕುರಿತಾಗಿ ಅರಿವು ಮೂಡಿಸಲಾಗುತ್ತದೆ ಎಂದರು.
ಕಾರ್ಯಕ್ರಮಗಳ ವಿವರ: ಸೋಮವಾರ ಜಿಲ್ಲೆಯ ಜಿಲ್ಲಾಧಿಕಾರಿಗಳ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ ನಗರದ ಸಿಟಿ ಬಸ್ ನಿಲ್ದಾಣ ಮತ್ತು ಯರ್ರಂಗಳಿ, ವದ್ದಟ್ಟಿ, ಬಾದನಹಟ್ಟಿ ಗ್ರಾಮಗಳ ಗ್ರಾಮ ಪಂಚಾಯತಿ ಆವರಣದಲ್ಲಿ ಅಸ್ಪøಶ್ಯತೆ ನಿವಾರಣೆಯ ಕುರಿತು ಕಾರ್ಯಕ್ರಮಗಳು ನಡೆದವು. ಫೆ.23ರಂದು ಕೊಳಗಲ್ಲು, ಕಪ್ಪಗಲ್ಲು, ಕರ್ಚೇಡು ಗ್ರಾಮ ಪಂಚಾಯತಿ ಆವರಣ, 24ರಂದು ಎತ್ತಿನಬೂದಿಹಾಳ್, ಸಂಜೀವರಾಯನ ಕೋಟೆ, ಹಲಕುಂದಿ ಗ್ರಾಮ ಪಂಚಾಯತಿ ಆವರಣ, ಫೆ.25ರಂದು ದಮ್ಮೂರು, ಹಾವಿನಹಾಳ್, ವೀರಾಪುರ, ಕಲ್ಲುಕಂಭ ಗ್ರಾಮ ಪಂಚಾಯತಿ ಆವರಣ, ಫೆ.26ರಂದು ಜಾನೆಕುಂಟೆ, ಹರಗಿನದೋಣಿ, ಬೆಳಗಲ್ಲು ಗ್ರಾಮ ಪಂಚಾಯತಿ ಆವರಣದಲ್ಲಿ ಅಸ್ಪøಶ್ಯತ ನಿವಾರಣೆ ಒಳಗೊಂಡಂತೆ ಹಲವು ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮಟ್ಟದ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಬಳ್ಳಾರಿ ತಹಸೀಲ್ದಾರ್ ರೆಹಮಾನ್ ಪಾಶಾ, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಂಗಣ್ಣ, ಇಲಾಖೆಯ ವಿಜಯಲಕ್ಷ್ಮೀ, ವೇದಾವತಿ, ಚಿಗುರು ಕಲಾ ತಂಡದ ಕಲಾವಿದರು ಇದ್ದರು.

LEAVE A REPLY

Please enter your comment!
Please enter your name here