ಬಳ್ಳಾರಿ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2021 ಪಾಲಿಕೆ ಚುನಾವಣೆ: 758 ಜನ ಸಿಬ್ಬಂದಿಗೆ ಚುನಾವಣಾ ತರಬೇತಿ

0
80

ಬಳ್ಳಾರಿ,ಏ.22 : ಬಳ್ಳಾರಿ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯ ಸೇರಿದಂತೆ ಸುಸೂತ್ರ ಚುನಾವಣಾ ಕಾರ್ಯ ಜರುಗಿಸುವ ನಿಟ್ಟಿನಲ್ಲಿ ಚುನಾವಣಾ ತರಬೇತಿಯು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ನಡೆಯಿತು.
379 ಜನ ಪಿಆರ್‍ಒ ಮತ್ತು 379 ಜನ ಎಪಿಆರ್‍ಒ ಸೇರಿದಂತೆ ಒಟ್ಟು 758 ಜನ ಸಿಬ್ಬಂದಿಗೆ ಚುನಾವಣೆಯ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯದ ಕುರಿತು ತರಬೇತಿ ನೀಡಲಾಯಿತು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 18 ಕೊಠಡಿಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸ್ ಬಳಕೆ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೋವಿಡ್ ಮಾರ್ಗಸೂಚಿ ಅನ್ವಯ 24 ಜನ ಸೆಕ್ಟರಲ್ ಅಧಿಕಾರಿಗಳು, 8 ಜನ ಮಾಸ್ಟರ್ ಟ್ರೈನರ್ಸ್‍ಗಳು 758 ಜನ ಸಿಬ್ಬಂದಿಗೆ ತರಬೇತಿ ನೀಡಿದರು.
ಮತದಾನದ ಸಮಯದಲ್ಲಿ ಯಾವ ರೀತಿಯ ಕಾರ್ಯ ನಿರ್ವಹಿಸಬೇಕು, ಇವಿಎಂಗಳ ಬಳಕೆ, ಮತದಾನದ ನಂತರ ಕೈಗೊಳ್ಳಬೇಕಾದ ಕ್ರಮಗಳು, ಇವಿಎಂ ಸೀಲ್ ಮಾಡುವ ವಿಧಾನ ಒಳಗೊಂಡಂತೆ ಹಲವು ವಿಷಯಗಳ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಯಿತು.
ಈ ತರಬೇತಿ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಸೇರಿದಂತೆ ಇನ್ನೀತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

LEAVE A REPLY

Please enter your comment!
Please enter your name here