ವನಸಿರಿ ಹಾಗೂ ಜೀವ ಸ್ಪಂದನ ಸಂಸ್ಥೆ ವತಿಯಿಂದ ಡಾ.ರಾಜಕುಮಾರ್ ಹಾಗೂ ಸಚಿನ್ ತೆಂಡೂಲ್ಕರ್ ಹುಟ್ಟು ಹಬ್ಬ ಆಚರಣೆ

0
140

ಸಿಂಧನೂರಿನ ಬೇತಲ್ ಮಕ್ಕಳ ಮನೆ ಆಶ್ರಮದಲ್ಲಿ ವನಸಿರಿ ಫೌಂಡೇಶನ್ ಹಾಗೂ ಜೀವ ಸ್ಪಂದನ ಸೇವಾ ಸಂಸ್ಥೆ ನೇತೃತ್ವದಲ್ಲಿ ಕರ್ನಾಟಕ ರತ್ನ, ವರನಟ ಡಾ.ರಾಜಕುಮಾರ್, ಮತ್ತು ಭಾರತರತ್ನ ಸಚಿನ್ ತೆಂಡೂಲ್ಕರ್ ಅವರು ಹುಟ್ಟು ಹಬ್ಬದ ಪ್ರಯುಕ್ತ ಆಶ್ರಮದಲ್ಲಿರುವ ಗಿಡಗಳಿಗೆ ಮಣ್ಣಿನ ಮಡಿಕೆ ಕಟ್ಟಿ ಮೂಕ ಪಕ್ಷಿ ಪ್ರಾಣಿಗಳಿಗೆ ದಾಹ ತೀರಿಸುವ ಮೂಲಕ ಸರಳವಾಗಿ ದಿಗ್ಗಜರ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ, ಬೇತಲ್ ಮಕ್ಕಳ ಮನೆ ಮುಖ್ಯಸ್ಥ ಜೋಸೆಫ್ ಕ್ರಿಸ್ಟೋಫರ್, ಸಿದ್ದಪ್ಪ ಜಿನೂರ್ ಡಾ:ರಾಜ ನ್ಯೂಸ್,
ಮಂಜು ಗಿರಿಜಾಲಿ, ರಾಜು ಅಡವಿಭಾವಿ,ನಾಗರಾಜ್ ಉಪ್ಪಾರ್, ರಾಮಯ್ಯ,ಶಾಕಿರ್ ಸೇರಿದಂತೆ ಹಲವರಿದ್ದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here