ಭಗವಂತನ ಅವತಾರಗಳೆ ಕಲಿಯುಗದಲಿ ಗುರುಗಳಾಗಿ ಅವತರಿಸುತ್ತಾರೆ: ವಸಿಷ್ಠ ಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ.

0
262

ಕಲಿಯುಗದಲ್ಲಿ ಭಗವಂತನಿಗೆ ಅವತಾರಗಳು ಇರುವುದಿಲ್ಲಾ.ಕಲಿಯ ಬಾಧೆ ನಿರಂತರವಾಗಿ ಸಜ್ಜನರಿಗೆ ಅಧಿಕವಾದಂತೆ ಭಕ್ತವತ್ಸಲನಾದ ಭಗವಂತನು ಗುರುಗಳರೂಪದಲ್ಲಿ ಅವತಾರ ಮಾಡಿ ಭಕ್ತರ ಅಭಿಷ್ಠೇಗಳನ್ನು ಇಡೇರಿಸುತ್ತಾ ಮೋಕ್ಷ ಸುಖವನ್ನು ಕೊಡುವಂತಹ ಶಕ್ತಿ ಗುರುಗಳಿಗೆ ವಿಶೇಷವಾಗಿರುತ್ತದೆ. ಆದ್ದರಿಂದ ಗುರುಗಳ ಆರಾಧನಾ ಮಹೋತ್ಸವಗಳು ಬಹು ವಿಜೃಂಭಣೆಯಿಂದ ಜರುಗುತ್ತವೆ ಎಂದು ವಸಿಷ್ಠಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ ಅಭಿಪ್ರಾಯ ಪಟ್ಟರು
ಅವರು ಗೊರಲೊಟಿ ಗ್ರಾಮ ವಿದ್ಯಾಸಂಪೂರ್ಣ ತೀರ್ಥ ಆರಾಧನಾ ಮಹೋತ್ಸವದ ಸಮಾರೋಪ ಸಮಾರಂಭದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ನಿತ್ಯದಲ್ಲಿ ಗುರುಗಳ ಸ್ಮರಣೆ ಹಾಗೂ ಅವರ ಸೇವೆಸಲ್ಲಿಸುವುದರಿಂದ ವಿಶೇಷ ಜ್ಞಾನ ಭಕ್ತಿ ಪ್ರಾಪ್ತಿಯಾಗಿ ಮೋಕ್ಷವನ್ನು ಪಡೆಯುವಂತಹ ಅನುಗ್ರಹ ಆರ್ಶಿವಾದಗಳು ಗುರುಗಳಿಂದ ಲಭಿಸುತ್ತದೆ ಎಂದರು.

ಈ ಸಂದರ್ಭಲ್ಲಿ ಗೊರಲೊಟಿ ವಿದ್ಯಾಸಂಪೂರ್ಣತೀರ್ಥ ಸೇವಾ ಸಮಿತಿಯ ಖಜಾಂಚಿ ಭೋಗೇಶರಾವ್ ದೇಶಪಾಂಡೆ, ಲಿಂಗದಹಳ್ಳಿ ಶ್ರೀರಾಮದಾಸರ ಅರ್ಚಕರಾದ ಕೃಷ್ಣಾಚಾರ್ಯ ಗುರುಗುಂಟ ಹಾಗೂ ವಿಶೇಷ ಸೇವೆ ಸಲ್ಲಿಸಿದ ರಾಘವೇಂದ್ರಾಚಾರ್ಯ ಜೋಷಿ ಇವರನ್ನು ವಸಿಷ್ಠಧಾಮದ ವತಿಯಿಂದ ಪ್ರಲ್ಹಾದ ಕುಲಕರ್ಣಿ, ನರಸಿಂಹಾಚಾರ್ಯ ಜೋಷಿ ಹಾಗೂ ನಾರಾಯಣರಾವ ಶಾಲುಹೊದಿಸಿ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಂಕಣ್ಣಾಚಾರ್ಯ ಜೋಷಿ ದೋಟಿಹಾಳ ವಹಿಸಿದ್ದರು.
ಪ್ರತಿದಿನ ಸುಪ್ರಭಾತ, ದೇವರನಾಮಗಳು, ವಿಶೇಷ ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಸೇವೆ, ಪುಷ್ಪಾಲಂಕಾರ, ಅಲಂಕಾರ ಪಂಕ್ತಿ, ಭಕ್ತರಿಗೆ ಅನ್ನಸಂತರ್ಪಣೆ ಜರುಗಿದವು. ಶಂಕರನಾರಾಯಣಾಚಾರ್ಯ ಹೋಮ ಧಾರ್ಮಿಕ ಕಾರ್ಯಕ್ರಮಗಳು ನೇತೃತ್ವ ವಹಿಸಿದ್ದರು. ವಾಸವಿ ಭಜನಾಮಂಡಳಿಯಿಂದ ವಿಶೇಷ ಭಜನೆಯೊಂದಿಗೆ ರಥೋತ್ಸವ ಕಾರ್ಯಕ್ರಮ ಜರುಗಿತು.

ವರದಿ:ಅವಿನಾಶ ದೇಶಪಾಂಡೆ ಸಿಂಧನೂರು✍️

LEAVE A REPLY

Please enter your comment!
Please enter your name here