3 ಲಕ್ಷ ಮೌಲ್ಯದ ರೈಫೆಲ್ ಅನ್ನು ಉಡುಗೊರೆಯಾಗಿ ನೀಡಿದ ಸೋನುಸೂದ್

0
119

ಸೋನು ಸೂದ್​ ಅವರ ಸಮಾಜ ಸೇವೆ ಹೊಗಳಿಕೆಗೆ ಪದಗಳಿಲ್ಲ. ದೇಶದಲ್ಲಿ ಕಷ್ಟ ಎಂದವರ ಪಾಲಿನ ದೇವರಾಗಿದ್ದಾರೆ ಅವರು. ಈ ಮಾನವೀಯತೆಯ ಮರ‍್ತಿ ಈಗ ಮಹಿಳಾ ಶೂಟರ್​ ಒಬ್ಬರ ನೆರವಿಗೆ ಆಗಮಿಸಿದ್ದು, ಆಕೆಯ ಕನಸಿಗೆ ರೆಕ್ಕೆ ಕಟ್ಟಿದ್ದಾರೆ. ಅಷ್ಟೇ ಅಲ್ಲದೇ, ಈ ಮೂಲಕ ಒಲಂಪಿಕ್​​ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರದ ಪದಕ ನಿರೀಕ್ಷೆ ಹುಟ್ಟುಹಾಕಿದ್ದಾರೆ. ರ‍್ಖಂಡ್​ನ ಕೊನಿಕಾ ಲಯಕ್​ ಎಂಬ ರಾಜ್ಯ ಮಟ್ಟ ಮಹಿಳಾ ಶೂಟರ್​ ಒಬ್ಬರು ಸೋನು ಸೂದ್​ಗೆ ಸಹಾಯ ಕೋರಿ ಟ್ವೀಟ್​ ಮೂಲಕ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿರುವ ಸೋನು ಸೂದ್​ ೩ ಲಕ್ಷ ರೂಪಾಯಿ ಮೌಲ್ಯದ ರ‍್ಮನ್​ ರೈಫೆಲ್​ ಅನ್ನು ಉಡುಗೊರೆಯಾಗಿ ನೀಡಿದ್ದು, ಅವರ ಅಭ್ಯಾಸಕ್ಕೆ ನೆರವಾಗಿದ್ದಾರೆ. ಕಳೆದ ಜನವರಿಯಲ್ಲಿ ಸೋನ್​ ಸೂದ್​ ಟ್ವೀಟ್​ ಮಾಡಿದ ಕೊನಿಕಾ ಲಯಕ್, ತಾವು ಜಾರ್ಖಂಡ್​ನ 11ನೇ ರಾಜ್ಯ ರೈಫಲ್​ ಶೂಟಿಂಗ್​ ಚಾಪಿಂಯನ್​ಶಿಪ್​ನಲ್ಲಿ ಬೆಳ್ಳಿ ಮತ್ತು ಚಿನ್ನದ ಪದಕ ಗೆದಿದ್ದೇನೆ. ಆದರೂ ಕೂಡ ಸರ್ಕಾತ ತನ್ನ ಸಹಾಯಕ್ಕೆ ಬಂದಿಲ್ಲ. ಅಭ್ಯಾಸಕ್ಕಾಗಿ ತನಗೊಂದು ರೈಫಲ್​ ನೀಡುವಂತೆ ಸರ್ಕಾರದ ಸಚಿವರು, ಅಧಿಕಾರಿಗಳು ಸೇರಿದಂತೆ ನಟ ಸೋನು ಸೂದ್​ಗೆ ಟ್ಯಾಗ್​ ಮಾಡಿ ಮನವಿ ಮಾಡಿದ್ದರು. ಅವರ ಮನವಿಗೆ ಮಾರ್ಚ್​ನಲ್ಲಿ ಸ್ಪಂದಿಸಿದ ಸೋನು ಸೂದ್​ ಶೀಘ್ರದಲ್ಲೇ ರೈಫಲ್​ ನೀಡುವ ಭರವಸೆ ನೀಡಿದ್ದರು.

ಜಾರ್ಖಂಡ್​ನ ಧನ್​ಬಾದ್​ನ ಕೊನಿಕಾ ಎರಡು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಅರ್ಹತೆ ಪಡೆದಿದ್ದು, ಈ ವೇಳೆ ತನ್ನ ಕೋಚ್​ ಹಾಗೂ ಸ್ನೇಹಿತರಿಂದ ರೈಫಲ್​ ಪಡೆದು ಪ್ರದರ್ಶನ ನಡೆಸಿದ್ದರು. ಈ ಕುರಿತು ಮಾತನಾಡಿರುವ ಕೊನಿಕಾ, ರೈಫಲ್​ ಬೆಲೆ ಸುಮಾರು 3 ಲಕ್ಷ ರೂ ಇದ್ದು, ಅದನ್ನು ಪಡೆಯುವಷ್ಟು ಹಣ ತಮ್ಮ ಬಳಿ ಇಲ್ಲ. ಇದೇ ಕಾರಣದಿಂದ ನಾನು ಕೋಚ್ ಮತ್ತು ಸ್ನೇಹಿತರನ್ನು ಅವಲಂಬಿಸುತ್ತಿದ್ದೆ. ರೈಫಲ್​ ಪಡೆಯಬೇಕೆಂದು 80 ಸಾವಿರ ಹಣ ವ್ಯವಸ್ಥೆ ಮಾಡಿಕೊಂಡು 1 ಲಕ್ಷ ಲೋನ್​ ಮಾಡಲು ಮುಂದಾಗಿದ್ದೆ. ಈಗಾಗಲೇ ಅರ್ಡರ್​ ಮಾಡಿದ್ದು, ಅದು ಇನ್ನು ಎರಡೂವರೆ ತಿಂಗಳಲ್ಲಿ ಸಿಗಲಿದೆ. ಈ ವೇಳೆ ಅದೃಷ್ಟವಶಾತ್​ ಸೋನು ಸೂದ್​ ಫೌಂಡೇಶನ್​ ನನಗೆ ಜರ್ಮನ್​ ರೈಫಲ್​ ಅನ್ನು​ ನೀಡಿದರು ಎಂದು ತಿಳಿಸಿದ್ದಾರೆ. ರೈಫಲ್​ ಸಿಗುತ್ತಲೇ ಕೊನಿಕಾ ಟ್ವಿಟರ್​ ಮೂಲಕ ಸೋನು ಸೂದ್​ಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ರೈಫಲ್​ ಸಿಕ್ಕಿದ್ದು, ಇದರಿಂದ ಕುಟುಂಬ ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ, ಇಡೀ ಗ್ರಾಮ ನಿಮ್ಮ ಆಶೀರ್ವಾದಿಸುತ್ತಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ, ಮುಂದಿನ ಒಲಂಪಿಕ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ಖಚಿತ. ಇದಕ್ಕಾಗಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ. ಸೋನು ಸೂದ್ ಅವರ ಈ ಕಾರ್ಯಕ್ಕೆ ಹಲವರು ಮೆಚ್ಚಿ ನಿಮ್ಮ ಸಹಾಯಕ್ಕೆ ಕೊನೆ ಎಂಬುದೇ ಇಲ್ಲ. ನಿಮ್ಮ ಕಾರ್ಯ ಅದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here