ಬಂಡ್ರಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್-19 ಜಾಗೃತಿ ಅಭಿಯಾನ

0
224

ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ, ಅಜೀಮ್ ಪ್ರೇಮ್ ಜಿ ಪೌಂಡೆಷನ್ ಸಹಯೋಗದಲ್ಲಿ 08.07.2021 ರಂದು ಕೋವಿಡ್-19 ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಕೋವಿಡ್ ಲಸಿಕೆ ಜಾಗೃತಿ ಅಂಗವಾಗಿ ಗ್ರಾಮದ ವಾಲ್ಮೀಕಿ ಸರ್ಕಲ್ ಮತ್ತು ವಾರ್ಡ್ ಗಳಲ್ಲಿ ವಾಹನದೊಂದಿಗೆ ಪ್ರಚಾರ ಮಾಡಲಾಯಿತು,

ಗ್ರಾಮದ ವಾಲ್ಮೀಕಿ ಸರ್ಕಲ್ ಹತ್ತಿರ ಆರೋಗ್ಯ ಇಲಾಖೆಯ ಸಿಬ್ಬಂದಿಯು ಹಾಗೂ ಆಶಾ ಕಾರ್ಯಕರ್ತೆಯರು ಕೋವಿಡ್ ಲಸಿಕೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು

ಈ ಸಂದರ್ಭದಲ್ಲಿ ಡಾ.ಭರತ್ ಕುಮಾರ್ ಮಾತನಾಡಿ..ಪ್ರತಿಯೊಬ್ಬರು ಮಾಸ್ಕನ್ನು ಧರಿಸಬೇಕು, ಸಾಬೂನಿನಿಂದ ಕೈಗಳನ್ನು ತೊಳೆಯಬೇಕು, ಕನಿಷ್ಠ 2 ಮೀಟರ್ ಗಳ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು,ಹಾಗೂ ಜ್ವರ, ನೆಗಡಿ ಕೆಮ್ಮು, ಉಸಿರಾಟದ ತೊಂದರೆ, ತಲೆನೋವು/ಮೈಕೈ ನೋವು ಈ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಭೇಟಿನೀಡಿ ವೈದ್ಯರ ಸಲಹೆ ಮತ್ತು ಚಿಕಿತ್ಸೆಯನ್ನುಯನ್ನು ಪಡೆದುಕೊಳ್ಳಿ

ಮೂರನೆ ಅಲೆ ಪ್ರಾರಂಭಕ್ಕೂ ಮುನ್ನ ಹದಿನೆಂಟು ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದಲ್ಲಿ ಮಕ್ಕಳಿಗೆ ಸೋಂಕು ತಗುಲುವ ಅಪಾಯ ಕಡಿಮೆಯಾಗುವುದು ಅದಕ್ಕಾಗಿ ಯಾವುದೇ ಸಂದೇಹ ಪಡದೇ ಸ್ವಯಂ ಪ್ರೇರಿತವಾಗಿ ಬಂದು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಭರತ್ ಕುಮಾರ್, ಆರೋಗ್ಯ ಸಿಬ್ಬಂದಿಗಳಾದ ಪದ್ಮಾವತಿಬಾಯಿ, ಆಶಾ ಕಾರ್ಯಕರ್ತೆಯರಾದ ಪಾಪಮ್ಮ, ಕಾಳಮ್ಮ, ಯಲ್ಲಮ್ಮ, ವೀಣಾ,ಉಮಾದೇವಿ, ಈರಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್,ಹಾಗೂ ಗ್ರಾಮದ ಸಾರ್ವಜನಿಕರು ಇತರರು ಇದ್ದರು

LEAVE A REPLY

Please enter your comment!
Please enter your name here