ವಾಹನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಮಾ ಪಾಲಿಸಿಗಳು..

0
114
Symbol of family protection by a general agent

ಎಲ್ಲದ್ದಕ್ಕೂ ಭದ್ರತೆ ಅನ್ನೋದು ಇದ್ದಾಗ ಮಳೆಗಾಲದ ಖುಷಿಯನ್ನು ದುಪ್ಪಟಾಗಿಸುತ್ತದೆ. ಆದರೆ ಮಳೆಯಿಂದ ಸೃಷ್ಟಿ ಆಗುವ ಅವಘಡಗಳಿಗೆ ಆರ್ಥಿಕ ಸಮಸ್ಯೆ ಎದುರಾದ್ರೆ ಮುಗೀತು. ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕು. ಈ ನಿಟ್ಟಿನಲ್ಲಿ ಮಳೆಗಾಲದಲ್ಲಿ ನಿಮ್ಮ ಮನೆ, ವಾಹನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಮಾ ಪಾಲಿಸಿ ಮಾಡಿಸುವುದು ಮರೆಯಬೇಡಿ. ಇದಕ್ಕಾಗಿ ನಾವು ನಿಮಗಾಗಿ ಅಂತ ಕೆಲವೊoದಿಷ್ಟು ವಿಮಾ ಪಾಲಿಸಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಸಮಗ್ರ ಆರೋಗ್ಯ ವಿಮಾ ಪಾಲಿಸಿ ಖರೀದಿಸಿ : ‘ಮಾನ್ಸೂನ್​ ಅಂದ್ರೆ ಮಳೆಗಾಲದ ಈ ಸಮಯದಲ್ಲಿ ಮಲೇರಿಯಾ, ಡೆಂಘಿ, ಸೊಳ್ಳೆಯಿಂದ ಹರಡುವ ಆರೋಗ್ಯ ಸಮಸ್ಯೆಗಳಿಗೆ ನಿರ್ದಿಷ್ಟ ಕವರೇಜ್​ಗಳಿವೆ. ಆದರೂ ಸಮಗ್ರ ಆರೋಗ್ಯ ಪಾಲಿಸಿ ಜೊತೆಗೆ ಟಾಪ್ ಅಪ್ ಪಾಲಿಸಿಗಳನ್ನು ಖರೀದಿಸಬಹುದು’ ಎಂದು ಆಪ್ಟಿಮಾ ಮನಿ ಮ್ಯಾನೇಜರ್‌ಗಳ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಮತ್​​ಪಾಲ್ ಹೇಳುತ್ತಾರೆ. ಸ್ವತಂತ್ರ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯನ್ನು ಖರೀದಿಸಲು ಮರೆಯಬೇಡಿ. ಇದು ತಾತ್ಕಾಲಿಕ ಅಂಗವೈಕಲ್ಯದ ಪ್ರಯೋಜನವನ್ನು ನೀಡುತ್ತದೆ.

ಗೃಹ ವಿಮಾ ಪಾಲಿಸಿ : ಗೃಹ ವಿಮಾ ಪಾಲಿಸಿಯಲ್ಲಿ ಮನೆಯ ಮೌಲ್ಯಯುತ ವಸ್ತುಗಳ ಪರಿಗಣನೆ ಇರಲಿ. ಪೋರ್ಟಬಲ್ ಎಲೆಕ್ಟ್ರಾನಿಕ್ ಉಪಕರಣ, ಆಭರಣ ಮತ್ತು ಬೆಲೆಬಾಳುವಂತಹ ವಸ್ತುಗಳ ಆಡ್ ಆನ್ ವಿಮೆಯನ್ನು ಹೆಚ್ಚಿಸಲು ಬಳಸಬಹುದು ಎಂದು ಸಲಹೆ ನೀಡುತ್ತಾರೆ.

ಮೋಟಾರ್ ಮತ್ತು ಗೃಹ ವಿಮಾ ಪಾಲಿಸಿ : ಮೋಟಾರು ವಿಮಾ ಪಾಲಿಸಿ ಮಳೆಯ ಪ್ರವಾಹದ ಹಿನ್ನೆಲೆ ಉಂಟಾದ ಎಂಜಿನ್ ಭಾಗ ಮತ್ತು ಇನ್ನಿತರ ನಷ್ಟವನ್ನು ತುಂಬುತ್ತದೆ. ಆದರೆ ನೀವು ಪ್ರವಾಹದ ಸ್ಥಳದಲ್ಲಿ ಕಾರನ್ನು ಚಲಿಸಿದರೆ ಅದರ ನಷ್ಟಕ್ಕೆ ಹಣ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ.

ಈ ನಿಟ್ಟಿನಲ್ಲಿ ಹೊಸ ಕಾರು ಖರೀದಿಸುವಾಗ ಸುರಕ್ಷತೆ ಸಲುವಾಗಿ ಎಂಜಿನ್ ಪ್ರೊಟೆಕ್ಷನ್ ರೈಡರ್ ಜೊತೆಗೆ ಶೂನ್ಯ-ಸವಕಳಿ ಮೋಟಾರ್ ವಿಮಾ ಪಾಲಿಸಿಯನ್ನು ಖರೀದಿಸಿ. ಮಳೆಯಿಂದ ಉಂಟಾದ ನೀರಿನ ರಸ್ತೆಯಲ್ಲಿ ಚಲಿಸುವಾಗ ನಿಧಾನವಾಗಿ ಚಲಿಸಿ ಇದರಿಂದ ಎಂಜಿನ್​​ನಲ್ಲಿ ನೀರು ಸೇರುವ ಸಾಧ್ಯತೆ ತಪ್ಪಿಸಬಹುದು. ನೀರಿನಲ್ಲಿ ಸಿಲುಕಿಕೊಂಡರೆ ಕ್ರ್ಯಾಂಕ್ ಮಾಡಬಾರದು. ಇದರಿಂದ ಎಂಜಿನ್​ ಅಪಾರ ಪ್ರಮಾಣದಲ್ಲಿ ಹಾನಿಗೆ ಒಳಗಾಗುವುದನ್ನು ತಪ್ಪಿಸುತ್ತದೆ. ಅಲ್ಲದೇ ಎಂಜಿನ್ ಪ್ರೊಟೆಕ್ಟ್ ಆಡ್-ಆನ್ ರೈಡರ್ ಪಾಲಿಸಿ ತೆಗೆದುಕೊಂಡರೆ ನೀರಿನ ಪ್ರವೇಶ ಮತ್ತು ಆಯಿಲ್ ಲೀಕೇಜ್​ ನಷ್ಟವನ್ನು ತುಂಬಿಕೊಡಲಾಗುತ್ತೆ.

ತಪ್ಪದೇ ಈ ನಿಯಮ ಪಾಲಿಸಿ : ಮಳೆ ಬರುವ ಸಂದರ್ಭದಲ್ಲಿ ಶಿಥಿಲಗೊಂಡ ಕಟ್ಟಡ, ಮರದ ಕೆಳಗೆ ವಾಹನ ನಿಲ್ಲಿಸಬಾರದು.ವಿಮಾ ವೆಚ್ಚ ಸಿಗಬಹುದು. ಆದರೆ ಸಂಪೂರ್ಣ ನಿಮ್ಮ ವಾಹನ ಬದಲಾಗುವುದಿಲ್ಲ. ಇದು ಸಂಕಟಕ್ಕೆ ಕಾರಣವಾಗುತ್ತದೆ.

ಹಾನಿಯ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಿ ಇಡಿ : ಮಳೆಯಿಂದ ಮನೆ ಹಾನಿಯಾಗಿದ್ದರೆ, ಮೊಬೈಲ್ ಬಳಸಿ ನೀರಿನ ಮಟ್ಟ ಮತ್ತು ಹಾನಿಯನ್ನು ವಿಡಿಯೋ ಮಾಡಿಟ್ಟುಕೊಳ್ಳಿ. ಇದು ಕಡ್ಡಾಯವಲ್ಲ. ಆದರೂ ಗೃಹ ವಿಮಾ ಹಕ್ಕು ಹಾನಿ ಸಾಬೀತು ಮಾಡಲು ನೆರವಾಗುತ್ತದೆ ಎಂದು ಸತ್ಪತಿ ಅಭಿಪ್ರಾಯ ಪಡುತ್ತಾರೆ.

LEAVE A REPLY

Please enter your comment!
Please enter your name here