ಜನನ-ಮರಣ ಪ್ರಮಾಣ ಪತ್ರಗಳನ್ನು ಸೇವಾಸಿಂಧುವಿನಡಿ ಪಡೆಯಿರಿ: ಜಿಲ್ಲಾಧಿಕಾರಿ

0
407

ಮಂಡ್ಯ :ಸಾರ್ವಜನಿಕರು ಸೇವಾ ಸಿಂಧು ವೆಬ್ಸೈಟ್ಗೆ ಲಾಗಿನ್ ಮಾಡಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನಿಗದಿತ ಶುಲ್ಕ ರೂ.5 ನ್ನು ಆನ್ಲೈನ್ ಮೂಲಕ ಪಾವತಿಸಿ ಡೌನ್ಲೋಡ್ ಮಾಡುವ ಮೂಲಕ ಪಡೆಯಬಹುದೆಂದು ಜಿಲ್ಲಾಧಿಕಾರಿ ಎಸ್.ಅಶ್ವತಿರವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನನ-ಮರಣ ಜಿಲ್ಲಾಮಟ್ಟದ ಸಮನ್ವಯ ಸಮಿತಿ-2021ರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಾರ್ವಜನಿಕರು ನಾಗರಿಕ ಸೇವೆ ಕೇಂದ್ರಗಳಾದ ಸೇವ ಸಿಂದು, ಗ್ರಾಮ ಒನ್ ಕೇಂದ್ರ ಗಳಲ್ಲಿ ಮನವಿ ಸಲ್ಲಿಸಿ ನಿಗದಿತ ಶುಲ್ಕ ರೂ. 25 ನ್ನು ಪಾವತಿಸಿಯು ಸಹ ಜನನ-ಮರಣ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಲು ಪಡಿತರ ಚೀಟಿ ಸಂಖ್ಯೆಯನ್ನು ದಾಖಲಿಸುವ ಬಗ್ಗೆ ಚರ್ಚಿಸಿ, ಜನಿಸಿದ ಮಗುವಿನ ಪೆÇೀಷಕರು ಅಥವಾ ಮೃತಪಟ್ಟ ವ್ಯಕ್ತಿಯ ಪಡಿತರ ಚೀಟಿ ಸಂಖ್ಯೆ ಹೊಂದಿದ್ದಲ್ಲಿ ಸಂಬಂಧಪಟ್ಟ ಕಲಂನಲ್ಲಿ ನಮೂದಿಸಬೇಕು ಅಥವಾ ಪಡಿತರ ಚೀಟಿ ಸಂಖ್ಯೆ ಇಲ್ಲದಿದ್ದಲ್ಲಿ ಪೆÇೀಷಕರು ಅಥವಾ ಮೃತಪಟ್ಟ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಕುಟುಂಬ ತಂತ್ರಾಂಶದಲ್ಲಿನ ಲಿಂಕ್ ನಲ್ಲಿ ದಾಖಲಿಸಿ ರೇಷನ್ ಕಾರ್ಡ್ ಸಂಖ್ಯೆ ಲಭ್ಯತೆಯ ಬಗ್ಗೆ ಪರಿಶೀಲಿಸಬೇಕು ಎಂದರು.

2021ರ ಜೂನ್ ಮಾಹೆ ವಿಳಂಬ ನೊಂದಣಿ ವಿವರವನ್ನು ಪರಿಶೀಲಿಸಿ ಜನನ ಅಥವಾ ಮರಣದ ಘಟನೆಯು ಯಾವ ಸ್ಥಳದಲ್ಲಿ ಘಟನೆ ಸಂಭವಿಸಿದೆಯೋ ಆ ಸ್ಥಳದ ಕಾರ್ಯವ್ಯಾಪ್ತಿ ಇರುವ ಸ್ಥಳೀಯ ನೋಂದಣಾಧಿಕಾರಿಯವರು 21 ದಿನಗಳ ಒಳಗಾಗಿ ನೋಂದಣಿ ಮಾಡಿಸಿ ಒಂದು ಉಚಿತ ಪತ್ರವನ್ನು ಪಡೆಯಬಹುದಾಗಿದೆ. 21 ದಿನಗಳ ನಂತರ ಜನನ ಮರಣದ ನೋಂದಣಿಯನ್ನು ನಿಗದಿತ ಅಧಿಕಾರಿಯ ಬರಹರೂಪದ ಅಪ್ಪಣೆ ಮೇರೆಗೆ ವಿಳಂಬ ಶುಲ್ಕವನ್ನು ಪಾವತಿಸುವ ಮೂಲಕ ಜನನ ಮರಣ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ ಎಂದರು.

ಕೋವಿಡ-19 ನಿಂದ ಘಟಿಸಲಾದ ಮರಣ ನೋಂದಣಿ ಕುರಿತು ಚರ್ಚಿಸಿ, ಜಿಲ್ಲೆಯಲ್ಲಿ 2020 ರ ಜನವರಿಯಿಂದ ಡಿಸೆಂಬರ್ ವರೆಗೆ ಇ-ಜನ್ಮ ತಂತ್ರಾಂಶದಲ್ಲಿ ಒಟ್ಟು 277 ಮರಣ ಪ್ರಕರಣಗಳು ಕೋವಿಡ್-19 ನಿಂದ ದಾಖಲಾಗಿವೆ. ಮತ್ತು 148 ಮರಣ ಪ್ರಕರಣಗಳು ಆರೋಗ್ಯ ಇಲಾಖೆಯಡಿ ದಾಖಲಾಗಿವೆ. ಇ-ಜನ್ಮ ತಂತ್ರಾಂಶದಲ್ಲಿ ದಾಖಲಾಗಿರುವ ಮರಣಗಳ ಸರಿಯಾದ ಮಾಹಿತಿಯನ್ನು ಪಡೆದು ಕೋವಿಡ್ ನಿಂದ ಮರಣ ಹೊಂದಿರುವರೋ ಇಲ್ಲವೋ ಎಂಬುದನ್ನು ದಾಖಲಿಸಿ ಎಂದರು
ಸದರಿ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಧನಂಜಯ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಮ್ಮ, ಕಾರ್ಮಿಕ ಸಹಾಯಕ ಅಧಿಕಾರಿ ನಾಗರತ್ನ, ಡಾ.ಸಂಜಯ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here