ಸೆಲ್ಫಿ ತೆಗೆದುಕೊಳ್ಳೋ ವೇಳೆ ಮಿಂಚು ಅಪ್ಪಳಿಸಿ ಮೂವರಿಗೆ ಗಂಭೀರ ಗಾಯ

0
225

ಮಿಂಚು ನೋಡಲು ಆಕರ್ಷಣೀಯ ಎಂದೆನ್ನಿಸಿದರೂ ಮಿಂಚಿನ ಹೊಡೆತದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಸರಿಸುಮಾರು 2000 ಜನರು ಮೃತಪಡುತ್ತಿದ್ದಾರೆ. ಧಾರಾಕಾರ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತ ಮೂವರು ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ಇಂಗ್ಲೆಂಡ್‌ನ ಲಂಡನ್‍ನಲ್ಲಿ ನಡೆದಿದೆ. ಮೂವರಿಗೂ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವಾಗ ಮಿಂಚು ಸಂಭವಿಸಿದೆ ಎಂದು ತಿಳಿದುಬಂದಿದೆ.

ಏನಿದು ಘಟನೆ?

ರೆಚೆಲ್, ಇಸೋಬೆಲ್ ಮತ್ತು ಆ್ಯಂಡ್ರೀವ್‌ ಜಾಬ್ಸನ್ ಅವರಿಗೆ ಸುಟ್ಟ ಗಾಯಗಳಾಗಿವೆ. ಈ ಮೂವರು ಸೈಕ್ಲಿಂಗ್ ಮೂಲಕ ಪ್ರವಾಸಕ್ಕೆ ತೆರಳಿದ್ದರು. ಸೋಮವಾರ ಬರ್ಕ್‍ಷೈರ್ನ‌ ಮೈಡೆನ್‍ಹೆಡ್‍ನಿಂದ ಬರುತ್ತಿದ್ದ ವೇಳೆ ಮಳೆ ಜೋರಾದ ಕಾರಣ ಹ್ಯಾಂಪ್ಟನ್ ಕೋರ್ಟ್ ಪ್ಯಾಲೆಸ್ ಬಳಿಯ ಸರ್ರೆಯ ಮೊಲೆಸಿ ಲಾಕ್‍ನಲ್ಲಿ ಮರದ ಕೆಳಗೆ ಹೋಗಿ ನಿಂತಿದ್ದಾರೆ.

ಪಿಎಚ್‍ಡಿ ವಿದ್ಯಾರ್ಥಿಯಾದ ಇಸೋಬೆಲ್ ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ನಾನು ಫೋಟೋ ತೆಗೆದುಕೊಳ್ಳುವಾಗ ನಗು ಮೊಗದಲ್ಲಿದ್ದೆವು. ಆದರೆ ಮಳೆಯಿಂದ ಅದು ದುಃಖದ ಚಿತ್ರವಾಗಿ ಬದಲಾಗಿದೆ ಎಂದು ಬೇಸರಿಸಿಕೊಂಡಿದ್ದಾರೆ

ತಕ್ಷಣ ನಾವು ಮೂವರು ಕೆಳಗೆ ಬಿದ್ದೆವು. ಆಗ ನಮಗೆ ಜೋರಾದ ಶಬ್ದ ಬಿಟ್ಟರೆ ಮತ್ತೆ ಏನು ಕೇಳಲಿಲ್ಲ. ನನ್ನ ಬಲಗೈ ಸಂಪೂರ್ಣ ಶಕ್ತಿ ಕಳೆದುಕೊಂಡಿತ್ತು. ನನಗೆ ಆ ಕೈ ಅಲುಗಾಡಿಸಲು ಸಾಧ್ಯವಾಗಲೇ ಇಲ್ಲ ಎಂದು ಘಟನೆಯನ್ನು ವಿವರಿಸಿದ್ದಾರೆನಾವು ನಮ್ಮ ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಂಡೆವು. ಆ ಮರು ಕ್ಷಣ ನಾವು ನೆಲದ ಮೇಲೆ ಬಿದ್ದಿದ್ದೆವು. ನಾನು ನನ್ನ ಸಹೋದರಿ ಕೂಗಿ ಕೊಂಡೆವು. ನನ್ನ ತೊಡೆ ಮತ್ತು ಹೊಟ್ಟೆಯ ಭಾಗ ಸುಟ್ಟು ಹೋಗಿತ್ತು. ನಾನು ಮತ್ತು ನನ್ನ ಸಹೋದರಿಯ ಮೇಲೆ ಮಿಂಚು ಅಪ್ಪಳಿಸಿದ ಗುರುತುಗಳಿವೆ ಎಂದು ರೆಚೆಲ್ ಹೇಳಿದ್ದಾರೆ.

ನಾವು ಬಿದ್ದಿರುವುದನ್ನು ಕಂಡ ಕೆಲವರು ನಮಗೆ ಸಹಾಯ ಮಾಡಿದರು. ದಕ್ಷಿಣ ಲಂಡನ್‍ನ ಟೂಟಿಂಗ್‍ನಲ್ಲಿರುವ ಸೇಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲವು ಗಂಟೆಗಳ ನಂತರ ಡಿಸ್ಚಾರ್ಜ್ ಮಾಡಲಾಯಿತು ಎಂದು ಬಿಬಿಸಿ ವರದಿ ಮಾಡಿದೆ.

ಇಸೋಬೆಲ್ ಕೈಯಲ್ಲಿ ಟೈಟಾನಿಯಂ ಪ್ಲೇಟ್ ಇತ್ತು. ಇದು ಮಿಂಚು ನಮಗೆ ಅಪ್ಪಳಿಸಲು ಕಾರಣವಾಗಿರಬಹುದು. ಈ ಅಪಘಾತದ ನಂತರ ಟೈಟಾನಿಯಂ ಪ್ಲೇಟ್ ಆಕೆಯ ಕೈಯಲ್ಲಿ ಇಟ್ಟುಕೊಂಡಿದ್ದ ಕಾರಣ ನನ್ನ ಸಹೋದರಿಯ ಕೈ ತುಂಬಾ ಬಿಸಿಯಾಗಿತ್ತು. ಇದನ್ನು ಕಂಡು ಕೆಲವರು ಆಶ್ಚರ್ಯಗೊಂಡರು ಎಂದು ವಿವರಿಸಿದ್ದಾರೆ.

ಪಶ್ಚಿಮ ಲಂಡನ್‍ನ ಕೆನ್ಸಿಂಗ್ಟನ್‍ನಲ್ಲಿರುವ ಕ್ವೀನ್ ಗಿಟಾರ್ ವಾದಕ ಬ್ರಿಯಾನ್ ಮೇ ಮನೆ ಹಾನಿಗೊಳಗಾಯಿತು. ಕೆನ್ಸಿಂಗ್ಟನ್ ಮತ್ತು ಚೆಲ್ಸಿಯಾದಂತಹ ಶ್ರೀಮಂತ ಪ್ರದೇಶಗಳ ಮೇಲೂ ಕೆಟ್ಟ ಪರಿಣಾಮ ಬೀರಿವೆ. ಲಂಡನ್‍ನ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಎಗ್ಗಿಲ್ಲದೆ ಸುರಿಯುತ್ತಿರುವ ಮಳೆಯಿಂದ ಪ್ರವಾಹವೂ ಕೂಡ ಸಂಭವಿಸಿದೆ.

24 ಗಂಟೆಗಳ ಅವಧಿಯಲ್ಲಿ ಸೋಮವಾರ ಕೇವಲ ಒಂದು ಗಂಟೆಯಲ್ಲಿ 47.8 ಮಿ.ಮೀ ಮಳೆಯಾಗಿದೆ, ಜುಲೈನ ಸರಾಸರಿ ಮಾಸಿಕ ಮಳೆ 44.5 ಮಿ.ಮೀ. ಎನ್ನಲಾಗಿದೆ.

LEAVE A REPLY

Please enter your comment!
Please enter your name here