ಭೂ ಕಬಳಿಕೆ ತಡೆಗೆ : ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ

0
137

ಹಾಯ್ ಸಂಡೂರ್, ವಾರ್ತೆ
ಹೊಸಪೇಟೆ.ಜು18: ಪ್ರಭಾವಿ ರಾಜಕಾರಣಿ ಕುಟುಂಬವಾದ ಲಾಡ್ ಕುಟುಂಬದ ಕೆಲವರು ಕಬಳಿಕೆ ಮಾಡಿರುವ ಭೂಮಿಯನ್ನು ಮರಳಿ ಪಡೆಯುವ ಮೂಲಕ ಆರ್ಹ ಸಾಗುವಳಿದಾರರಿಗೆ ಪಟ್ಟ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ, ತಾಲ್ಲೂಕು ಸಮಿತಿ ಪದಾಧಿಕಾರಿಗಳು, ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಶ್ರಮಿಕ ಭವನದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾದ್ಯಾಂತ ನಡೆಯುತ್ತಿರುವ ಅಕ್ರಮ ಗಣಿ, ಸರ್ಕಾರಿ ಜಮೀನು ಕಬಳಿಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಇಂತಹ ಕ್ರಮಗಳನ್ನು ತಡೆಯಲು ಸರ್ಕಾರವನ್ನು ಒತ್ತಾಯಿಸಿದರು.
ಮಾಜಿ ಸಚಿವ ಸಂತೋಷ್ ಲಾಡ್ ಮತ್ತು ಅವರ ಕುಟುಂಬದ ಸದಸ್ಯರು ಸಂಡೂರು ತಾಲ್ಲೂಕಿನ ಮಾಳಾಪುರ ಗ್ರಾಮದ ಸರ್ವೇ ನಂ. 123 ರಲ್ಲಿ 47.63 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮ ದಾಖಲೆ ಸೃಷ್ಠಿಸಿ, ಖರೀದಿ ಮಾಡಿರುವುದಾಗಿ ಹೇಳಲಾಗುತ್ತಿದೆ. ಪ.ಜಾತಿ, ಪ.ಪಂಗಡ ಹಾಗೂ ಹಿಂದುಳಿದ ವರ್ಗದ 16 ಜನ ಬಡ ರೈತರು, ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಕೃಷಿ ಭೂಮಿಯನ್ನು ಲಾಡ್ ಕುಟುಂಬ ಅನೈತಿಕ ಮಾರ್ಗದಲ್ಲಿ ವಂಚಿಸಿ ಅಕ್ರಮವಾಗಿ ವಶಪಡಿಸಿಕೊಂಡಿದೆ. ಹಣಬಲ ರಾಜಕೀಯ ಪ್ರಭಾವ ಬೆಳಸಿ ಬಡ ರೈತರನ್ನು ಒಕ್ಕೆಲೆಬ್ಬುಸಲಾಗುತ್ತಿದೆ ಎಂದು ದೂರಿದರು.

ಸಂತೋಷ್ ಲಾಡ್ ಮತ್ತು ಲಾಡ್ ಕುಟುಂಬ ಅಕ್ರಮವಾಗಿ ಕಬಳಿಸಿರುವ ಸರ್ಕಾರಿ ಭೂಮಿಯನ್ನು ಹಿಂದಕ್ಕೆ ಪಡೆಯಬೇಕು. ಆರ್ಹ ಉಳುಮೆದಾರರಿಗೆ ಪಟ್ಟಾ ವಿತರಣೆ ಮಾಡಬೇಕು. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು. ಅನಿಧಿಕೃತ ಸಾಗುವಳಿಯನ್ನು ಅಕ್ರಮಗೊಳಿಸಿ ಪಟ್ಟಾ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಯಲ್ಲಾಲಿಂಗ, ಜಿ.ಕರಿಹನುಮಂತ, ಕೆ.ಕರಿಹನುಮಂತ, ಬಾಣದ ನಾಗರಾಜ, ಬಾಣದ ರಾಮಣ್ಣ, ಮರಡಿ ನಾಗರಾಜ, ಬೆಳಗೋಡ್ ತಾಯಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here