ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರಿಂದ ಲ್ಯಾಪ್‍ಟಾಪ್ ವಿತರಣೆ

0
127

ಬಳ್ಳಾರಿ,ಸೆ.02 : ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ ಅವರು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್, ಟೂಲ್‍ಕಿಟ್ ಹಾಗೂ ತರಬೇತಿ ಸಮವಸ್ತ್ರಗಳನ್ನು ಗುರುವಾರ ವಿತರಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವಿ.ರಾಮಣ್ಣ , ಶಾಸಕರ ಆಪ್ತರಾದ ನಾಗರಾಜ್ , ಗೋವರ್ಧನ್ ರೆಡ್ಡಿ , ಮೋಕಾ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಹಂಪಮ್ಮ ಗೋವಿಂದಪ್ಪ , ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಗಾದಿಲಿಂಗನಗೌಡ , ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಪಿ.ಶಶಿಕಲಾ ಜಗನ್ನಾಥ್, ಬಿ.ಆರ್.ಎಲ್ ಸೀನಾ, ಸೋಮು, ಉಮಾಪತಿ, ನಾಗಲಕೆರೆ ಗೋವಿಂದ , ಅಲ್ಲ ಭಕ್ಷಿ, ಕಾಂಗ್ರೆಸ್ ಮುಖಂಡರಾದ ವಿ.ಎನ್ ಶ್ರೀನಾಥ್, ಹಾಗೂ ತರಬೇತಿ ಸಂಸ್ಥೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here