ಅನ್ನದಾತ ಹಾಗೂ ಸೈನಿಕರ ಸೇವೆ ಸ್ಮರಣೀಯ : ಕೆ.ಪಿ.ಪುತ್ತೂರಾಯ

0
75

ಶಿವಮೊಗ್ಗ : ಸೆಪ್ಟಂಬರ್ 21: ಹಸಿವನ್ನು ನೀಗಿಸುವ ರೈತನನ್ನು ಹಾಗೂ ಪ್ರತಿ ಪ್ರಜೆಯ ನೆಮ್ಮದಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಸೈನಿಕರ ಸೇವೆಯನ್ನು ಮರೆಯಲಾಗದು ಎಂದು ಖ್ಯಾತ ವೈದ್ಯ ಹಾಗೂ ಬರಹಗಾರ ಡಾ|| ಕೆ.ಪಿ.ಪುತ್ತೂರಾಯ ಅವರು ಹೇಳಿದರು.
ಅವರು ಇಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಇರುವಕ್ಕಿಯ ಕ್ಯಾಂಪಸ್‍ನಲ್ಲಿ ಏರ್ಪಡಿಸಿದ್ದ 9ನೇ ಸಂಸ್ಥಾಪನಾ ದಿನಾಚರಣೆ, ನಿವೃತ್ತ ಸಿಬ್ಬಂಧಿಗಳಿಗೆ ಹಾಗೂ ವಿವಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತೀಯ ಪರಂಪರೆಯಲ್ಲಿ ಕೃಷಿಗೆ ಪ್ರಾಧಾನ್ಯತೆ ಇದೆ. ಈ ವಿಷಯದ ಕುರಿತು ಬೋಧಿಸುವವರು ಆತ್ಮವಂಚನೆ ಮಾಡಿಕೊಳ್ಳದೆ ಪ್ರಾಮಾಣಿವಾಗಿ ಸೇವೆ ಸಲ್ಲಿಸಬೇಕು ಎಂದ ಅವರು ಪ್ರಾಜ್ಞರು, ಪಂಡಿತರು, ಪ್ರತಿಭಾವಂತರು ಹಾಗೂ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಋಣ ತೀರಿಸಿದಂತಾಗಲಿದೆ ಅಲ್ಲದೆ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಲಿದೆ ಎಂದರು.
ಸುದೀರ್ಘಾವಧಿಯವರೆಗೆ ಸೇವೆ ಸಲ್ಲಿಸಿದ ನಿವೃತ್ತ ನೌಕರರನ್ನು ಗೌರವಿಸುವುದು ಸತ್ಕಾರ್ಯ. ವೃತ್ತಿಗೆ ನಿವೃತ್ತಿಯೇ ಹೊರತಾಗಿ ತಮ್ಮ ಪ್ರವೃತ್ತಿಗಲ್ಲ. ಆದ್ದರಿಂದ ನಿವೃತ್ತರು ತಮ್ಮ ಸೇವೆ ಪ್ರವೃತ್ತಿಯನ್ನು ಮುಂದುವರೆಸಬೇಕು. ನಿವೃತ್ತರಾದುದಕ್ಕೆ ನಿರುತ್ಸಾಹಿಗಳಾಗಬಾರದು. ಸಾಹಿತ್ಯ, ಸಂಗೀತ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಿ. ಖರ್ಚನ್ನು ಮಿತಗೊಳಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ಪೋಷಕರು ತಮ್ಮ ಆಶಯಗಳನ್ನು ಮಕ್ಕಳ ಮೂಲಕ ನಿರೀಕ್ಷಿಸುತ್ತಾರೆ. ವಿದ್ಯಾರ್ಥಿಗಳ ಮೇಲೆ ಪೋಷಕರ ಆಶಯ ಈಡೇರಿಸುವ ಹೊಣೆಗಾರಿಕೆ ಹಾಗೂ ಭವಿಷ್ಯವನ್ನು ಉಜ್ವಲವಾಗಿರುವಂತೆ ರೂಪಿಸಿಕೊಳ್ಳುವ ಅಗತ್ಯವಿದೆ. ವಿದ್ಯಾರ್ಥಿ ಜೀವನ ಭವಿಷ್ಯದ ಬದುಕಿಗೆ ಬುನಾದಿಯಾಗಲಿದೆ ಎಂದ ಅವರು, ನಿರೀಕ್ಷಿತ ಗುರಿ ಸಾಧಿಸಲು ಕನಸನ್ನು ಹೊಂದಿದ್ದು, ಅದರ ಸಾಧನೆಗೆ ಶ್ರಮಿಸುತ್ತಿರಬೇಕು. ಅದಕ್ಕಾಗಿ ಆತ್ಮವಿಶ್ವಾಸ, ಬದ್ಧತೆ ಇರಬೇಕು. ದೇಶದ ಮಹಾನ್ ಆದರ್ಶವಾದಿಗಳನ್ನು ಅನುಸರಿಸಬೇಕು. ವಿಶೇಷವಾಗಿ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಜೆಗಳನ್ನು ತಯಾರು ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಬೋಧನಾ ವೃತ್ತಿಗೆ ನಿಯೋಜಿತರಾದವರು ಅಸಾಧಾರಣ ಪಾಂಡಿತ್ಯ, ಜ್ಞಾನ, ಬೋಧನಾಭಿರುಚಿ ಮತ್ತು ಸಾಮಥ್ರ್ಯ ಹೊಂದಿರಬೇಕು. ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಕೆರಳಿಸುವ ಪ್ರೇರಣಾಶಕ್ತಿ ಹೊಂದಿರಬೇಕು. ಶಿಷ್ಯ ಸಂಪತ್ತಾಗಿರುವ ವಿದ್ಯಾರ್ಥಿಗಳನ್ನು ದೇಶದ ಆಸ್ತಿಗಳಾಗಿ, ಸತ್ಪ್ರಜೆಗಳನ್ನಾಗಿ ರೂಪಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರು ಮಾತನಾಡಿ, ಮುಂದುವರೆಯುತ್ತಿರುವ ದೇಶಗಳಲ್ಲಿ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಳ್ಳುವ ಭಾರತವೂ ಕೂಡ ಅನೇಕ ಸಮಸ್ಯೆ-ಸವಾಲುಗಳನ್ನು ಎದುರಿಸುತ್ತಿದೆ. ಆಹಾರೋತ್ಪಾದನೆಯಲ್ಲಿ ದೇಶದ ರೈತರ ಹಾಗೂ ವಿಜ್ಞಾನಿಗಳ ಶ್ರಮ ಅಭಿನಂದನಾರ್ಹ ಆದರೂ, ದೇಶದ ಶೇ.25ರಷ್ಟು ಮಂದಿ ಹಸಿವಿನಿಂದ, ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿರುವುದು ಖೇದಕರ ಸಂಗತಿ ಎಂದರು.
ಕೃಷಿ ಕ್ಷೇತ್ರಕ್ಕೆ ಆಸಕ್ತರು, ಹೊಸದನ್ನು ಶೋಧಿಸುವ ಉತ್ಸಾಹಿಗಳು, ಬದುಕನ್ನು ಕಟ್ಟಿಕೊಳ್ಳಬೇಕೆಂಬ ತುಡಿತ ಹೊಂದಿರುವವರ ಅಗತ್ಯವಿದೆ. ಬಹುಸಂದರ್ಭದಲ್ಲಿ ಬದುಕಿಗೆ ದಾರಿ ಕಾಣದೆ ಕತ್ತಲು ಆವರಿಸಿದಾದ ಕೃಷಿ ಕ್ಷೇತ್ರ ಆಯ್ಕೆಯಾಗುತ್ತದೆ. ಇಂತಹವರುಗಳಿಂದ ಸಾಧನೆ ನಿರೀಕ್ಷಿಸುವುದು ಸಾಧ್ಯವಿಲ್ಲ. ಯುವಜನತೆ ಔದ್ಯೋಗಿಕ ಆಯ್ಕೆಯಲ್ಲಿ ಸೋತಿರುವುದು ಗೋಚರಿಸುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ|| ಎಂ.ಕೆ.ನಾಯ್ಕ್ ಅವರು ಮಾತನಾಡಿದರು. ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಬಿ.ಶಿವರಾಮ್, ದೊಡ್ಡಗೌಡ ಸಿ.ಪಾಟೀಲ್, ಕೆ.ನಾಗರಾಜ್, ವೀರಭದ್ರಪ್ಪ ಪೂಜಾರ್ ಸೇರಿದಂತೆ ವಿವಿಯ ಉಪನ್ಯಾಸಕರು, ಆಹ್ವಾನಿತರು, ಗಣ್ಯರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ವಿವಿಧ ವಿಭಾಗಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಹಾಗೂ ಸಾಧನೆ ಮಾಡಿದ ಪ್ರಾಧ್ಯಾಪಕರು, ಸಂಶೋಧಕರು, ವಿಜ್ಞಾನಿಗಳು ಹಾಗೂ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

“ಡಾ|| ನಾಗರಾಜಪ್ಪ ಅಡಿವಪ್ಪರವರ ಪರಿಚಯ”
ಡಾ|| ನಾಗರಾಜಪ್ಪಅಡಿವಪ್ಪರ, ಇವರು ಬಿ.ಎಸ್ಸಿ. (ತೋಟಗಾರಿಕೆ) ಎಂ.ಎಸ್ಸಿ. (ತೋಟಗಾರಿಕೆ) ಪದವಿಯಗಳನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ, ಪಿ.ಎಚ್.ಡಿ. (ತೋಟಗಾರಿಕೆ) ಪದವಿಯನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ, ಮ್ಯಾನೇಜ್, ಹೈದರಾಬಾದದಿಂದಕೃಷಿ ವಿಸ್ತರಣೆಯಲ್ಲಿ ಪಿ.ಜಿ. ಡಿಪ್ಲೋಮಾವನ್ನು ಹಾಗೂ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗದಿಂದ ಹಾಗು ಭೌದಿಕ ಆಸ್ತಿ ಹಕ್ಕುಗಳಲ್ಲಿಪಿ. ಜಿ. ಡಿಪ್ಲೋಮಾವನ್ನು ಪಡೆದಿರುತ್ತಾರೆ. ಏಪ್ರೀಲ-2006 ರಿಂದ ಜುಲೈ-2009 ರವರೆಗೆಕೇಂದ್ರ ಸರ್ಕಾರದ ಕೃಷಿ ವಿಮಾ ಕಂಪನಿಯಲ್ಲಿ ಆಡಳಿತಾಧಿಕಾರಿಗಳಾಗಿ, ಜುಲೈ 2009 ರಿಂದಜುಲೈ 2015 ರವರೆಗೆ ಕೃಷಿ ವಿಜ್ಞಾನ​ಕೇಂದ್ರ, ​ಶಿವಮೊಗ್ಗದಲ್ಲಿ ತೋಟಗಾರಿಕೆ ವಿಷಯ ತಜ್ಞರಾಗಿ, ಜುಲೈ 2015 ರಿಂದ ಇಲ್ಲಿಯವರೆಗೆ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (ತೋಟಗಾರಿಕೆ) ಅಲ್ಲದೆ, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ (ತಾಳೆ ಬೆಳೆ) ಹಾಗೂ ಅಡಿಕೆ ಸಂಶೋಧನಾಕೇಂದ್ರ, ಶಿವಮೊಗ್ಗದ ಪ್ರಧಾನ ಸಂಶೋಧಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 27 ಕೋರ್ಸ್‍ಗಳನ್ನು ಭೋದಿಸಿ, 12 ಎಂ.ಎಸ್ಸಿ. ವಿದ್ಯಾಥಿಗಳಿಗೆ ಮಾರ್ಗದರ್ಶಕರಾಗಿ, 200 ಕ್ಕೂ ಹೆಚ್ಚು ತರಬೇತಿಗಳನ್ನು, 175 ಮಂಚೂಣಿ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿದ್ದಾರೆ.ರೂ. 25 ಲಕ್ಷ ಮೌಲ್ಯದ ತೋಟಗಾರಿಕಾ ಕಸಿ/ಸಸಿ ಗಿಡಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿರುತ್ತಾರೆ.ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಜರ್ನಲಗಳಲ್ಲಿ 30 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.4 ತೋಟಗಾರಿಕಾ ತಂತ್ರಜ್ಞಾನ ಬಿಡುಗಡೆಯಲ್ಲಿ ಮುಖ್ಯ ಸಂಶೋಧಕರಾಗಿ, ತರಕಾರಿ ಜೆಳೆಗಳ 6 ತಳಿ ಹಾಗೂ 3 ತೋಟಗಾರಿಕಾ ತಂತ್ರಜ್ಞಾನ ಬಿಡುಗಡೆಯಲ್ಲಿ ಸಹಸಂಶೋಧಕರಾಗಿದ್ದಾರೆ.35 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನೆಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.ರಾಷ್ಟ್ರಮಟ್ಟದ ಸಮ್ಮೇಳನಗಳಲ್ಲಿ ಅತ್ಯುತ್ತಮ ಸಂಶೋಧನಾ ಪ್ರಬಂಧ ಮಂಡನೆಗಾಗೆ2 ಬಾರಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.2 ರಾಷ್ಟ್ರಮಟ್ಟದ ಹಾಗೂ 4 ರಾಜ್ಯಮಟ್ಟದ ಸಮ್ಮೇಳನ/ ಗೋಷ್ಠಿಗಳಲ್ಲಿ ಸಂಘಟನಾ ಹಾಗೂ ಸಹ ಸಂಘಟನಾ ಕಾರ್ಯದರ್ಶಿಯಾಗಿ ಯಶಸ್ವಿಗೊಳಿಸಿದ್ದಾರೆ.165 ತರಬೇತಿ, ಸಮ್ಮೇಳನ ಹಾಗೂ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ.ರಾಜ್ಯಮಟ್ಟದ 6 ತಾಂತ್ರಿಕ ಸಮಿತಿಗಳಲ್ಲಿ ಸದಸ್ಯರಾಗಿ ನಾಮಕರಣಗೊಂಡಿದ್ದಾರೆ.ರೂ. 5.03 ಕೋಟಿ ಮೌಲ್ಯದ ಪ್ರಾಯೋಜನೆಗಳನ್ನು ಪ್ರಧಾನ ಹಾಗೂ ಉಪಸಂಶೋಧಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಉತ್ತಮ ಸೇವೆಗಾಗಿ 2011-12ರಿಂದ 2014-15ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ 3 ಬಾರಿ ಸರ್ಟಫಿಕೆಟ್‍ ಆಫ್ ಮೇರಿಟನ್ನು ಹಾಗೂ 2016-17ರಲ್ಲಿ ಕೃಷಿ ಮತ್ತುತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದಿಂದ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here