ಜಲಜೀವನ ಮಿಷನ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕುಡಿಯುವ ನೀರಿನ ಕೆರೆಗೆ ರಾಯಚೂರು ಅಧಿಕಾರಿಗಳ ತಂಡ ಭೇಟಿ.

0
127

ರಾಯಚೂರು:ಸೆ:22:- ಸಿಂಧನೂರು ತಾಲೂಕಿನ ಹೊಸಳ್ಳಿ ಇಜೆ ಗ್ರಾಮ ಹಾಗೂ ಹೊಸಳ್ಳಿ ಇಜೆ ಕ್ಯಾಂಪಿಗಾಗಿ ಜಲಜೀವನ ಯೋಜನೆ ಅಡಿಯಲ್ಲಿ ನಿರ್ಮಾಣವಾದ ಕುಡಿಯುವ ನೀರಿನ ಕೆರೆಗೆ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಇಡಿ ಮೇನಕಾ ಪಾಟೀಲ್ ಮತ್ತು ಅಧಿಕಾರಿಗಳ ತಂಡ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಕೆರೆಯಲ್ಲಿ ಉಪ್ಪು ನೀರು ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳ ಮುಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್ ನಾಗಲಿಂಗಪ್ಪ, ಮುಖಂಡ ಅಶೋಕ್ ನಲ್ಲ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದರು‌.

ನಂತರ ಮಾಧ್ಯಮದವರೊಂದಿಗೆ ಅಧಿಕಾರಿಗಳು ಮಾತನಾಡಿ, ತಂತ್ರಜ್ಞಾನ ಬಳಸಿ ಕಾರ್ಯ ಆರಂಭಿಸಲಾಗುವುದು, ಎಲ್ಲರ ಸಲಹೆಯೊಂದಿಗೆ ಕಾಮಗಾರಿ ನಡೆಸುತ್ತೇವೆ ಎಂದರು..

ವರದಿ:ಅವಿನಾಶ ದೇಶಪಾಂಡೆ ಸಿಂಧನೂರು✍️

LEAVE A REPLY

Please enter your comment!
Please enter your name here