ಅವಳಿ ಜಿಲ್ಲೆಗೆ ಕೇಂದ್ರ ಸರಕಾರದ ಕ್ಷಯರೋಗ ಕಾರ್ಯಕ್ರಮ ಪರಿಶೀಲನಾ ತಂಡ ಭೇಟಿ: ಪರಿಶೀಲನೆ, ಕ್ಷಯರೋಗ ಪತ್ತೆ,ಸುಧಾರಣಾ ಕ್ರಮಗಳು ಕಾರ್ಯಚಟುವಟಿಕೆಗಳ ಪರಿಶೀಲಿಸಿದ ತಂಡ

0
93

ಬಳ್ಳಾರಿ,ಅ.23: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಕೇಂದ್ರ ಸರಕಾರದ ಕ್ಷಯರೋಗ ಕಾರ್ಯಕ್ರಮದ ಪರಿಶೀಲನಾ ತಂಡ ಶನಿವಾರ ಭೇಟಿ ನೀಡಿದ್ದು,ಅವಳಿ ಜಿಲ್ಲೆಗಳಲ್ಲಿರುವ ವಿವಿಧ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅ.25 ರವರೆಗೆ ವಿವಿಧ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವುದರ ಜೋತೆಗೆ ಕಾರ್ಯ ಚಟುವಟಿಕೆಗಳ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾಹಿತಿ ವಿನಿಮಯ ಹಮ್ಮಿಕೊಳ್ಳುವ ಕಾರ್ಯಕ್ರಮವಿದೆ ಎಂದು ತಂಡದ ನೇತೃತ್ವ ವಹಿಸಿರುವ ರಾಜ್ಯ ಕ್ಷಯರೋಗ ಹಿರಿಯ ತಜ್ಞ ವೈದ್ಯರಾದ ಡಾ.ಸುರೇಶ ಶಾಸ್ತ್ರಿ ತಿಳಿಸಿದರು.
ಸಂಡೂರು, ಸಿರುಗುಪ್ಪ, ಹೊಸಪೇಟೆ ತಾಲೂಕುಗಳಿಗೆ ಮೂರು ತಂಡಗಳು ಶನಿವಾರ ಭೇಟಿ ನೀಡಿದ್ದು, ರೋಗಿಗಳೊಂದಿಗೆ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ಸೇವನೆಯ ಸಹಾಯಕ್ಕಾಗಿ ಮಾಸಿಕ ರೂ. 500ಗಳನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ವರ್ಗಾಯಿಸುವ ಯೋಜನೆ ಬಗ್ಗೆ ಹಾಗೂ ಅಸ್ಪತ್ರೆಗಳಲ್ಲಿ ರೋಗ ನಿರ್ಧರಿಸುವಿಕೆ ವಿಧಾನ, ಪರೀಕ್ಷಾ ವಿಧಾನಗಳ ಸುಧಾರಣೆಗೆ ಕೈಗೊಂಡ ಕ್ರಮಗಳು ಹಾಗೂ ದಾಖಲಾತಿಗಳ ನಿರ್ವಹಣೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗ ನಿರ್ಧಾರದ ಮತ್ತು ಚಿಕಿತ್ಸೆಯ ದಾಖಲಾತಿ ವಿವರವನ್ನು ಸರಕಾರಕ್ಕೆ ತಿಳಿಸುವ ಹಾಗೂ 2025 ಕ್ಕೆ ಕ್ಷಯರೋಗ ನಿರ್ಮೂಲನೆಗೆ ಕೈಗೊಳ್ಳಬೇಕಾದ ಕಾರ್ಯ ಮತ್ತು ಜಾಗೃತಿ ಚಟುವಟಿಕೆಗಳ ಪರಿಶೀಲನೆ ಮತ್ತು ಸಲಹೆಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್‌.ಎಲ್‌.ಜನಾರ್ಧನ ಅವರು ಮಾತನಾಡಿ ಜಿಲ್ಲೆಯಲ್ಲಿ 03 CBNAAT ಕೇಂದ್ರಗಳು, 06
TRUENAAT ಕೇಂದ್ರಗಳು,93 ನಿಗಧಿತ ಕಫ ಪರೀಕ್ಷಾ ಕೇಂದ್ರಗಳು,23 ಎಕ್ಸ್‌ ರೇ ಕೇಂದ್ರಗಳಿದ್ದು ಇಲ್ಲಿ ಕ್ಷಯರೋಗದ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ಕೈಗೊಂಡು ವರದಿಯನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಕ್ಷಯರೋಗ ಕಾರ್ಯಕ್ರಮದ ಪರಿಶೀಲನಾ ತಂಡದ ಸದಸ್ಯರಾದ ಡಾ.ತಾರಕ ಶಾ, ಡಾ.ಸಾಜೀಯಾ ವಫಾಯಿ,ಡಾ.ಗುಲ್ಫಮ್‌ ಹಶ್ಮೀ,ಡಾ.ನಿಶ್ಚಿತ್ವ ಕೆ.ಆರ್,
ಡಾ.ದೇವಿಗಾನ್ .ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ.ಇಂದ್ರಾಣಿ, ಜಿಲ್ಲಾ ಆರ್ಸಿಎಎಚ್ ಅಧಿಕಾರಿ ಡಾ.ಅನಿಲಕುಮಾರ ಆರ್, , ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಈರಣ್ಣ, ಡಾ.ಭಾಸ್ಕರ, ಡಾ.ಕುಶಾಲ್ ರಾಜ್, ಆಡಳಿತ ವೈದ್ಯಾಧಿಕಾರಿಗಳಾದ ಡಾ.ಸಲೀಮ್‌, ಡಾ.ರಾಮಶೇಟ್ಟಿ, ಡಾ.ದೇವರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಜಿಲ್ಲಾ ಕ್ಷಯರೋಗ ಘಟಕ ಮೇಲ್ವಿಚಾರಕ ಸಣ್ಣಕೇಶವ, ಜಿಲ್ಲಾ ಡಿಪಿಪಿಎಮ್‌ಸಿ ಕೆ.ಉದಯಕುಮಾರ, ಪಂಪಾಪತಿ, ಸೇರಿದಂತೆ ಇತರ ಸಿಬ್ಬಂದಿ ವರ್ಗದರು ಹಾಜರಿದ್ದರು.

LEAVE A REPLY

Please enter your comment!
Please enter your name here