ಗೊಲ್ಲಲಿಂಗಮ್ಮನಹಳ್ಳಿಯಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷರಿಂದ ಕಬ್ಬಡಿ ಪಂದ್ಯಾವಳಿಗಳ ಉದ್ಘಾಟನೆ

0
369

ಸಂಡೂರು:ನ:26:-ಸಂಡೂರು ತಾಲೂಕು ವಿಧಾನಸಭಾ ಕ್ಷೇತ್ರದ ಚೋರನೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಗೊಲ್ಲಲಿಂಗಮ್ಮನಹಳ್ಳಿಯಲ್ಲಿ ಸಂಡೂರು ಜೆಡಿಎಸ್ ತಾಲೂಕು ಅಧ್ಯಕ್ಷರಾದ ಶ್ರೀ ಎನ್ ಸೋಮಪ್ಪನವರ ಅಭಿಮಾನಿಗಳ ವತಿಯಿಂದ ಪ್ರಥಮ ಬಾರಿಗೆ ಗೋಲ್ಲಿಂಗಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಬ್ಬಡಿ ಪಂದ್ಯಾವಳಿಯನ್ನು ಮುಖ್ಯ ಅತಿಥಿಗಳಾಗಿ ಉದ್ಘಾಟಿಸಿದರು.

ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷರಾದ ಶ್ರೀ ಎನ್ ಸೋಮಪ್ಪ ಗ್ರಾಮೀಣ ಬಾಗದಲ್ಲಿ ಗ್ರಾಮೀಣ ಕ್ರೀಡೆಗಳು ಬಹಳ ಮುಖ್ಯ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಗಳಲ್ಲಿ ಬಾಗವಹಿಸುವುದು ಬಹುಮುಖ್ಯ ಎಂದರು,

ಈ ಸಂದರ್ಭದಲ್ಲಿ ಕೆ ಕೆ ಮೆಹಬೂಬ್ ಬಾಷ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ಘಟಕ ಅಧ್ಯಕ್ಷ ಖಾದರ್ ಬಾಷ ವಿಕಲಚೇತನ ತಾಲೂಕು ಅಧ್ಯಕ್ಷರಾದ ಶ್ರೀ ಎ.ಕೆ. ಸಿದ್ದೇಶ್ ಮತ್ತು ರಾಜ್ಯ ಟೈಲರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಖಾದರ್ ಬಾಷ ಅಂಕಮನಹಾಳ್ ವಿರೇಶ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here