ನಿವೃತ್ತ ಅಧಿಕಾರಿ ಬಿ.ಡಿ.ಓಬಪ್ಪ ತಾಪಂ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದಾದರು ಏಕೆ ಗೊತ್ತಾ..!!

0
265

ಕೂಡ್ಲಿಗಿ:ಡಿ:04:-ವಿಜಯನಗರ ಜಿಲ್ಲೆ ಕೂಡ್ಲಿಗಿ,ಪಿಡಿಓ ನಿರ್ಲಕ್ಷ್ಯ ಧೋರಣೆ ಖಂಡಿಸಿ ನಿವೃತ್ತ ಅಧಿಕಾರಿ ಬಿ.ಡಿ.ಓಬಪ್ಪರವರು ಡಿ 4ರಂದು, ಕೂಡ್ಲಿಗಿ ತಾಲೂಕು ಪಂಚಾಯ್ತಿ ಕಚೇರಿ ಮುಂದೆ ಏಕಾಂಗಿಯಾಗಿ ಉಪವಾಸ ಧರಣಿ ಸತ್ಯಾಗ್ರಹ ಕುಳಿತಿದ್ದಾರೆ.

ತಾಲೂಕಿನ ಗುಂಡುಮುಣುಗು ಗ್ರಾಮ ಪಂಚಾಯ್ತಿಯಲ್ಲಿರುವ ಆಸ್ಥಿ ಪತ್ರಕ್ಕೆ ಸಂಬಂಧಿಸಿದ ಕಡತ,ಹತ್ತಾರು ತಿಂಗಳುಗಳಿಂದ ಪಿಡಿಓ ರಾಮಕೃಷ್ಣರ ಬಳಿಯಿದ್ದು ಅವರು ಕಡತ ವಿಲೇವಾರಿ ಮಾಡದೇ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ.ಹಲವು ತಿಂಗಳುಗಳಿಂದ ವಿನಾಕಾರಣ ತಮ್ಮನ್ನು ಅಲೆದಾಡಿಸುತ್ತಿದ್ದಾರೆಂದು ಭೀಮಸಮುದ್ರ ಗ್ರಾಮದ ಬಿ.ಡಿ.ಓಬಪ್ಪ ಆರೋಪಿಸಿದ್ದಾರೆ,

ಈ ವಿಷಯವಾಗಿ ತಾಲೂಕು ಪಂಚಾಯ್ತಿ ಇಓ ಅಧಿಕಾರಿ ಜಿ.ಎಂ.ಬಸಣ್ಣರವರ ಗಮನಕ್ಕೆ ಲಿಖಿತವಾಗಿ ತಂದಿದ್ದು. ಅವರೂ ಕೂಡ ಸ್ಪಂದಿಸಿಲ್ಲ ಅವರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ. ಇಲಾಖಾ ಉನ್ನತಾಧಿಕಾರಿಗಳ ಗಮನಕ್ಕ ತಂದಿದ್ದರಿಂದಾಗಿ ಕುಪಿತಗೊಂಡ ರಾಮಕೃಷ್ಣ ,ಪಿಡಿಓ ರಾಮಕೃಷ್ಣ ತಮ್ಮೊಂದಿಗೆ ಇನ್ನೂ ಉದ್ಧಠನದಿಂದ ವರ್ತಿಸುತ್ತಿದ್ದಾರೆಂದು ಬಿ.ಡಿ.ಓಬಪ್ಪ ದೂರಿದ್ದಾರೆ,ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣರವರ ಅನುಚಿತ ವರ್ತನೆ ಹಾಗೂ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಷಯದಲ್ಲಿ ತಾಪಂ ಇಓ ಅಧಿಕಾರಿ ಜಿ.ಎಂ.ಬಸಣ್ಣರವರೂ ಕೂಡ ಬೇಜವಾಬ್ದಾರಿಯನ್ನು ತೋರುತ್ತಿದ್ದು,ಈ ಅವ್ಯವಸ್ಥೆಯನ್ನು ತಾವು ಖಂಡಿಸಿ ಉಪವಾಸ ಧರಣಿ ಸತ್ಯಾಗ್ರಹ ಮಾಡಿತ್ತಿರುವುದಾಗಿ ಓಬಣ್ಣ ತಿಳಿಸಿದ್ದಾರೆ.ಅವರು ಬೆಳಿಗ್ಗೆಯಿಂದಲೇ ಕೂಡ್ಲಿಗಿ ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ಏಕಾಂಗಿಯಾಗಿ ಧರಣಿ ಉಪವಾಸ ಸತ್ಯಾಗ್ರಹ ಮಾಡಿದರು.ತಾಪಂ ಕೆಲ ಸಿಬ್ಬಂದಿಯವರು ಅವರ ಉಪವಾಸ ಧರಣಿ ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸೋ ಪ್ರಯತ್ನ ನಡೆಸಿದರು,ಆದರೆ ಅದಾವುದಕ್ಕೂ ಜಗ್ಗದ ಬಗ್ಗದ ಓಬಣ್ಣ ತಮ್ಮ ಉಪವಾಸ ಧರಣಿ ಮುಂದುವರೆಸಿದರು.
ಈ ಸಂಬಂಧಿಸಿದಂತೆ ಅವರು ಹೇಳಿಕೆ ನೀಡಿದ್ದಾರೆ,ಸಂಬಂಧಿಸಿದ ಅಧಿಕಾರಿಗಳು ಸ್ಪಂಧಿಸದಿದ್ದಲ್ಲಿ ಶೀಘ್ರವೇ ವಿಜಯನಗರದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಚೇರಿ ಬಳಿ.ತಾವು ಏಕಾಂಗಿಯಾಗಿ ಉಪವಾದ ಧರಣಿ ಸತ್ಯಾಗ್ರಹ ಮಾಡೋ ಮೂಲಕ,ಅವ್ಯವಸ್ಥೆ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಓಬಣ್ಣ ತಿಳಿಸಿದ್ದಾರೆ.

ವರದಿ:-ಇಬ್ರಾಹಿಂ ಖಲೀಲ್

LEAVE A REPLY

Please enter your comment!
Please enter your name here