ಬಿಸಿಎಂ ಬಾಲಕಿಯರ ವಸತಿ ನಿಲಯಕ್ಕೆ ಸಮರ್ಪಕ ಆಹಾರ ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿ.

0
211

ಸಂಡೂರು:ಡಿ:05:-ಪಟ್ಟಣದ ಬಾಲಕಿಯರ ಬಿಸಿಎಂ ಹಾಸ್ಟೆಲ್ ನಲ್ಲಿ ಸಮರ್ಪಕ ಆಹಾರ, ನೀರು ಸೇರಿ ಅಗತ್ಯ ಆರೋಪಿಸಿ ನಿಲಯದ ಬಾಲಕಿಯರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈವರೆಗೆ ಬಾಡಿಗೆ ಮನೆಯಲ್ಲಿ ವಸತಿ ನಿಲಯ ನಡೆಸಲಾಗುತ್ತಿತ್ತು. ಇತ್ತೀಚಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಎರಡೂ ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಎಪಿಎಂಸಿ ಬಳಿಯ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಗ್ರಂಥಾಲಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹಾಸ್ಟೆಲ್ ನಲ್ಲಿ ಊಟ ಗುಣಮಟ್ಟದಿಂದ ಕೂಡಿಲ್ಲ. ಹುಳು ಹಿಡಿದ ಅಕ್ಕಿ. ಕೊಳೆತ ತರಕಾರಿ ಬೇಯಿಸಿ ಬಡಿಸುತ್ತಾರೆ. ಕುಡಿಯಲು ಶುದ್ಧ ನೀರಿಲ್ಲ. ಕಳಪೆ ಅಡುಗೆ ಕುರಿತು ಪ್ರಶ್ನಿಸಿದರೆ, ಸಿಬ್ಬಂದಿ ಜಗಳಕ್ಕೆ ಬರುತ್ತಾರೆ ಎಂದು ವಿದ್ಯಾರ್ಥಿನಿಯರು ದೂರಿದರು.

ಅಡುಗೆ ಸಿಬ್ಬಂದಿ ನಡುವೆ ಹೊಂದಾಣಿಕೆ ಇಲ್ಲದೆ ಪ್ರತಿನಿತ್ಯ ಕೂಗಾಡುತ್ತಾರೆ. ವಾರ್ಡನ್ ಸರಿಯಾಗಿ ಹಾಸ್ಟೆಲ್ ಗೆ ಬರಲ್ಲ ತಾಲೂಕು ಬಿಸಿಎಂ ಅಧಿಕಾರಿ ಸಂಗಮೇಶ್ ಗೆ ಹೇಳಿದರೆ, ಇದೇನ್ ನಿಮ್ಮ ಮನೆ ಅಂದ್ಕೊಂಡಿದ್ದೀರಾ? ನಿಮ್ಮ ನಿಮ್ಮ ಕೆಲಸ ನೀವೇ ಮಾಡಿಕೊಳ್ಳಬೇಕು ಎಂದು ಉದ್ಧಟತನ ತೋರುತ್ತಾರೆಂದು ತಹಶೀಲ್ದಾರ್ ಹೆಚ್.ಜೆ.ರಶ್ಮಿ ಬಳಿ ದೂರಿದರು.

ಅಡುಗೆ ಸಿಬ್ಬಂದಿಗೆ ತಹಶೀಲ್ದಾರ್ ತರಾಟೆ:-

ವಿದ್ಯಾರ್ಥಿನಿಯರ ದೂರು ಅಲಿಸಿದ ತಹಶೀಲ್ದಾರ್ ಹೆಚ್ ಜೆ. ರಶ್ಮಿ ಮಧ್ಯಾನ್ಹ ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿದರು.ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ವಿಷಯ ತಿಳಿದು ಹಾಸ್ಟೆಲ್ ಗೆ ಭೇಟಿ ನೀಡಿದ ಶಾಸಕ ಇ.ತುಕಾರಾಮ್, ಬಿಸಿಎಂ ಅಧಿಕಾರಿ ಸಂಗಮೇಶ್ ಮತ್ತು ಅಡುಗೆ ಸಿಬ್ಬಂದಿ ನಿರ್ಲಕ್ಷಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ವಿದ್ಯಾರ್ಥಿನಿಯರಿಗೆ ಸಮರ್ಪಕ ಕುಡಿವ ನೀರು ಒದಗಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.


“ವಿದ್ಯಾರ್ಥಿನಿಯರ ಸಮಸ್ಯೆ ಬಗ್ಗೆ ಗಮನಕ್ಕಿರಲಿಲ್ಲ. ವಿಷಯ ತಿಳಿದು ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಬಿಸಿಎಂ ಅಧಿಕಾರಿ ಸಂಗಮೇಶ್, ವಾರ್ಡನ್ ಮತ್ತು ಸಿಬ್ಬಂದಿ ನಿರ್ಲಕ್ಷದ ಬಗ್ಗೆ ಮೇಲಾಧಿಕಾರಿ ಗಮನಕ್ಕೆ ತರುವೆ. ವಿದ್ಯಾರ್ಥಿನಿಯರನ್ನು 8-10 ದಿನಗಳಲ್ಲಿ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು

-ನಾಗರಾಜ್
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಳ್ಳಾರಿ

LEAVE A REPLY

Please enter your comment!
Please enter your name here