ಕೂಡ್ಲಿಗಿ ಅರಣ್ಯ ಇಲಾಖೆಯ ಖಾಸಿಂ ಸಾಬ್ ನಿಧನ

0
142

ಸಂಡೂರು:ಡಿ:16:-ಸಂಡೂರು ತಾಲೂಕಿನ ವ್ಯಾಪ್ತಿಯ ಕೂಡ್ಲಿಗಿ ಅರಣ್ಯ ಇಲಾಖೆಯ ಬಂಡ್ರಿ ಬೀಟ್ ವಾಚರ್ ಶ್ರೀಯುತ ಖಾಸಿಂ ಸಾಬ್ ಅವರು ನಿನ್ನೆ 15.12 2021 ರ ಮಧ್ಯರಾತ್ರಿ ಹೃದಯಾಘಾತದಿಂದ ವೃತಪಟ್ಟಿದ್ದಾರೆಂದು ಅವರ ಕುಟುಂಬವರ್ಗದವರು ತಿಳಿಸಿದ್ದಾರೆ.

ವೃತ ವಾಚರ್ ಖಾಸಿಂ ಸಾಬ್ ಅವರು ಅಪಾರ ಬಂದು ಬಳಗವನ್ನು ಅಗಲಿದ್ದು, ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಕೂಡ್ಲಿಗಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಆರ್ ಎಫ್ ಓ ಮಂಜುನಾಥ, ಎಫ್ ಓ. ಕುಬೇರ, ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ನೌಕರರು, ಸ್ನೇಹಿತರು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮತ್ತು ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here