ರಾಜೀವ್ ಗಾಂಧಿ ವಿವಿ ಕಾಯ್ದೆ ತಿದ್ದುಪಡಿಗೆ ಎಬಿವಿಪಿ ಖಂಡನೆ.

0
94

ಬಳ್ಳಾರಿ:ಡಿ:17:- ರಾಜ್ಯದ ಏಕೈಕ ಹಾಗೂ ಪ್ರತಿಷ್ಠಿತ ವೈದ್ಯಕೀಯ ವಿಶ್ವ ವಿದ್ಯಾಲಯವಾದ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯವು ದೇಶದ ವೈದ್ಯಕೀಯ ಶಿಕ್ಷಣದಲ್ಲಿ ಅಗ್ರಸ್ಥಾನದಲ್ಲಿದೆ.
ಸಾವಿರಾರು ವಿದ್ಯಾರ್ಥಿಗಳು ದೇಶ – ವಿದೇಶಗಳಿಂದ ಬಂದು ವೈದ್ಯಕೀಯ ಶಿಕ್ಷಣ ಪಡೆಯಲು ವಿವಿಯ ಮೇಲೆ ಅವಲಂಭಿತರಾಗಿದ್ದಾರೆ.
ವಿವಿಗೆ ಸಂಬಂಧಿಸಿದ ಆಡಳಿತಾತ್ಮಕ ಹಾಗೂ ಹಣಕಾಸಿನ ವಿಷಯಗಳ ಬಗ್ಗೆ ಈಗಿರುವ ರಚನೆಯಂತೆ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಅಗತ್ಯ ತಿರ್ಮಾನ ತೆಗೆದುಕೊಳ್ಳುವ ವಿಶ್ವ ವಿದ್ಯಾಲಯಕ್ಕೆ ಸ್ವಾಯತ್ತತೆ ರಚನೆ ರಚನೆಯು ಈ ವರೆಗೆ ಸರಿಯಾಗಿ ನಡೆದು ಬಂದಿದೆ.

ಪ್ರಸ್ತುತ ಕರ್ನಾಟಕ ಸರ್ಕಾರವು ವಿವಿಯ ಹಣಕಾಸಿನ ವಿಷಯಗಳನ್ನು ಇನ್ಮುಂದೆ ಸರ್ಕಾರದ ಅಧೀನದಲ್ಲಿ ಇರಿಸಿಕೊಳ್ಳವ ನಿಟ್ಟಿನಲ್ಲಿ ಈಗಿರುವ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿರುವದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಿರ್ವವಾಗಿ ಖಂಡಸುತ್ತೆ .

ವಿಶ್ವವಿದ್ಯಾಲಯದ ಫಂಡ್‌ನ ಉಪಯೋಗಕ್ಕೆ ವಿಶ್ವವಿದ್ಯಾಲಯದ ಒಪ್ಪಿಗೆ ಇಲ್ಲದೆ ಸರಕಾರವೇ ಏಕಪಕ್ಷಿಯವಾಗಿ ಫಂಡ್ ಖರ್ಚು ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾನೂನಿನ ತಿದ್ದು ಪಡಿ ಮಾಡಲು ಹೊರಟಿರುವುದು ವಿವಿಯ ಹಿತದೃಷ್ಟಿಯಿಂದ ಸಮಂಜಸವಲ್ಲ. ಯುನಿವರ್ಸಿಟಿಯ ಫಂಡ್ ಕುರಿತ ಎಲ್ಲಾ ನಿರ್ಣಯವನ್ನು ಯುನಿವರ್ಸಿಟಿಯ ಆಡಳಿತ ಮಂಡಳಿಗೆ ಬಿಡುವುದೇ ಸೂಕ್ತ. ಒಂದು ವೇಳೆ ಸರಕಾರವು ಯುನಿವರ್ಸಿಟಿಯ ಫಂಡ್ ನಿರ್ವಹಣೆ ಮಾಡುವ ಅವಕಾಶ ಪಡೆದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುವ ಸಂದರ್ಭವಿರುತ್ತದೆ. ಈ ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಯುನಿವರ್ಸಿಟಿಯ ಫಂಡ್ ಕುರಿತು ಕಾನೂನು ತಿದ್ದುಪಡಿ ಮಾಡಬಾರದು.

ಶಿಕ್ಷಣ ಸಂಸ್ಥೆಗಳ ಒಟ್ಟು ಹಣಕಾಸಿನ ವಿಚಾರಗಳು ಸರ್ಕಾರದ ಅಧೀನಕ್ಕೆ ಬಂದರೆ ವಿವಿಯ ಹಣವು ಸರಿಯಾಗಿ ವಿದ್ಯಾರ್ಥಿಗಳ ಅಗತ್ಯಗಳಿಗೆ ತಕ್ಕಂತೆ ಉಪಯೋಗವಾಗದೆ ಸರ್ಕಾರಗಳ ಹಿತಾಸಕ್ತಿಯ ಆದಾರದ ಮೇಲೆ ನಡೆಯುತ್ತದೆ ಎಂಬ ಆತಂಕ ಶಿಕ್ಷಣ ತಜ್ಞರದ್ದು. ಅದರಲ್ಲೂ ಅತಿಹೆಚ್ಚು ಹಣಕಾಸಿನ ಠೇವಣಿ ಹೊಂದಿರುವ ವಿವಿಯಲ್ಲಿ ಭ್ರಷ್ಟಾಚಾರ ರಹಿತವಾದ ವಿದ್ಯಾರ್ಥಿಗಳಿಗೆ ಅನುಕೂಲಕರ ರೀತಿಯಲ್ಲಿ ಹಣಕಾಸಿನ ನಿರ್ವಹಣೆಯ ಅವಶ್ಯಕತೆ ಇದ್ದು ಮತ್ತು ಸರ್ಕಾರಗಳ ಅಧೀನದಲ್ಲಿ ಈ ಹಣಕಾಸಿನ ನಿರ್ವಹಣೆ ಬರದೆ ಸ್ವಾಯತ್ತತೆ ದೃಷ್ಟಿಯಿಂದ ಸರ್ಕಾರ ತನ್ನ ಪ್ರಸ್ತಾವನೆಯನ್ನು ಹಿಂಪಡೆಯಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ನಗರ ವತಿಯಿಂದ ಆಗ್ರಹಿಸುತ್ತೇವೆ ಈ ಸಂದರ್ಭದಲ್ಲಿ ಬಳ್ಳಾರಿ ವಿಭಾಗ ಸಂಚಾಲಕರಾದ ಹರ್ಷ ನಾಯಕ್ ಬಳ್ಳಾರಿ ಜಿಲ್ಲಾ ಸಂಚಾಲಕರಾದ ವಿನೋದ್ ಕುಮಾರ್ ಕಾರ್ಯಕರ್ತರಾದ ಸುರೇಶ್ ಭರತ್ ಅಶೋಕ್ ಹುಲೇಶ್ ರವಿ ಮತ್ತಿತರರಿದ್ದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here