ಜನನ ಮರಣ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಲು ಸ್ಥಳೀಯ ವಾಟ್ಸಪ್ ಗ್ರೂಪ್ ರಚನೆ: ಡಿಸಿ ಪವನಕುಮಾರ ಮಾಲಪಾಟಿ

0
160

ಬಳ್ಳಾರಿ,ಡಿ.23 : ಜನನ ಮರಣಗಳ ಘಟನೆಗಳಿಗೆ ಸಂಬಂಧಿಸಿದ ಜನನ ಮರಣ ನೋಂದಣಾಧಿಕಾರಿ/ಉಪ ನೋಂದಣಾಧಿಕಾರಿಗಳಿಗೆ ಮಾಹಿತಿಯನ್ನು ನೀಡಲು ಅಂಗನವಾಡಿ ಕಾರ್ಯಕರ್ತರನ್ನು ಹಾಗೂ ಆಶಾ ಕಾರ್ಯಕರ್ತರನ್ನು ಮಾಹಿತಿದಾರರನ್ನಾಗಿ ಸರ್ಕಾರದಿಂದ ನೇಮಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.
ಜನನ ಘಟನೆಗಳ ನೋಂದಣಿಯಲ್ಲಿ ಶೇ.100ರಷ್ಟು ನೋಂದಣಿಯನ್ನು ಸಾಧಿಸಲು ಸಾಧ್ಯವಾಗಿರುವುದಿಲ್ಲ. ಜನನ ಮರಣ ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಸ್ಥಳೀಯವಾಗಿ ವಾಟ್ಸಪ್ ಗ್ರೂಪ್‍ನ್ನು ರಚಿಸಿಕೊಂಡು ಜನನ ಮರಣ ಘಟನೆಗಳ ನೋಂದಣಿ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಲು ಹಾಗೂ ಶೇ.100 ರಷ್ಟು ನೋಂದಣಿಯನ್ನು ಸಾಧಿಸಬೇಕು ಎಂದು ಅವರು ತಿಳಿಸಿದ್ದಾರೆ.
ತಾಲ್ಲೂಕ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನನ ಮರಣ ನೋಂದಣಾಧಿಕಾರಿಗಳು ಮತ್ತು ಉಪ ನೋಂದಣಾಧಿಕಾರಿಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸಂಬಂಧಿಸಿದ ವಾಟ್ಸಪ್ ಗ್ರೂಪನ್ನು ಸ್ಥಳೀಯವಾಗಿ ಸೃಜಿಸಿ, ಈ ಬಗ್ಗೆ ಮಾಹಿತಿಯನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಬಳ್ಳಾರಿ ಇವರಿಗೆ ಸಲ್ಲಿಸಲು ಮತ್ತು ಘಟಿಸಿದ ಪ್ರತಿಯೊಂದು ಜನನ ಮರಣ ಘಟನೆಗಳನ್ನು ನಿಗಧಿತ ಅವಧಿಯೊಳಗೆ ತಪ್ಪದೇ ನೋಂದಾಯಿಸಬೇಕು ಎಂದು ಅವರು ತಿಳಿಸಿದ್ದಾರೆ.
ವಾಟ್ಸಪ್ ಗ್ರೂಪ್ ಸದಸ್ಯ ವಿವರ: ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು(ಗ್ರೂಪ್ ಅಡ್ಮಿನ್), ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು, ಖಾಸಗಿ ಆಸ್ಪತ್ರೆಯ ವೈದ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಂಬಂಧಿಸಿದ ಪೆÇಲೀಸ್ ಠಾಣೆ ಆರಕ್ಷಕ ನಿರೀಕ್ಷಕರು ಮತ್ತು ನಗರ ಪ್ರದೇಶದಲ್ಲಿ ಮಹಾನಗರ ಪಾಲಿಕೆ/ಪುರ ಸಭೆ/ನಗರ ಸಭೆ/ಪಟ್ಟಣ ಪಂಚಾಯತಿ/ ಕಛೇರಿಗಳ ಮುಖ್ಯಸ್ಥರು, ವಾರ್ಡ್‍ಗಳ ರೆವಿನ್ಯೂ ಅಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿಗಳು, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು, ಖಾಸಗಿ ಆಸ್ಪತ್ರೆಯ ವೈದ್ಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸಂಬಂಧಿಸಿದ ಪೆÇಲೀಸ್ ಠಾಣೆ ಆರಕ್ಷಕ ನಿರೀಕ್ಷಕರು ಸೇರಿದಂತೆ ವಾಟ್ಸಪ್ ಗ್ರೂಪ್‍ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here