ವಿಜೃಂಭಣೆಯಿಂದ ಜರುಗಿದ ಶ್ರೀವೀರಾಂಜನೇಯ ಸ್ವಾಮಿಯ ಕಾರ್ತಿಕೋತ್ಸವ

0
164

ಕೂಡ್ಲಿಗಿ/ವಿಜಯನಗರ:ಡಿ:27:- ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾ ಮತ್ತು ಬಿಸ್ನಳ್ಳಿ ಗ್ರಾಮದ ಎನ್ ಎಚ್ 50ರ ಪಕ್ಕದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಕಾರ್ತಿಕೋತ್ಸವ ಪ್ರಯುಕ್ತ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಲಕ್ಷದೀಪೋಸ್ತವ ಉದ್ಘಾಟನೆಯನ್ನು ನೆರವೇರಿಸಿ ಮನುಷ್ಯನಿಗೆ ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ದೊರೆಯಲು ಧಾರ್ಮಿಕ ಆಚರಣೆಗಳು ಮುಖ್ಯ ಆದರೆ ಅವು ಸಮಾಜದ ಎಲ್ಲ ಸಮುದಾಯಗಳ ಒಗ್ಗೂಡುವಿಕೆಯಾಗಿರಬೇಕು ಮತ್ತು ಸಾಮರಸ್ಯೆ ಜೀವನಕ್ಕೆ ಸ್ಪೂರ್ತಿಯಾಗುವಂತೆ ಇರಬೇಕು ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ ತಿಳಿಸಿದರು.

ಕಾನಾಮಡುಗು ದಾಸೋಹ ಮಠದ ಧರ್ಮಧಿಕಾರಿ ಶ್ರೀ ಐಮುಡಿ ಶರಣಾರ್ಯರು ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಕಾರ್ತಿಕ ದೀಪೋತ್ಸವ ಕೇವಲ ಧರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆ ಮಾತ್ರವಲ್ಲ ಸಮಾಜದ ಅಜ್ಞಾನದ ಕತ್ತಲು ಹೋಡಿಸಿ ಬದುಕಿನ ಭರವಸೆ ಬೆಳಕು ಮೂಡಿಸುವ ದೀಪಾರಾಧನೆಯಾಗಿದೆ ಎಂದರು. ನಂತರ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ವಿಶೇಷ ಪೂಜೆಗಳಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಸಂದರ್ಭದಲ್ಲಿ ಭಕ್ತರು ಭಾಗವಹಿಸಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬಂದು ದರ್ಶನ ಪಡೆದು ಲಕ್ಷದೀಪೋತ್ಸವ ದೀಪ ಹಚ್ಚುವ ಮೂಲಕ ವಿವಿಧ ಇಲಾಖೆಯ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಎಚ್. ರೇವಣ್ಣ, ಕೂಡ್ಲಿಗಿ ಡಿವೈಎಸ್ಪಿ ಹರೀಶ್‌ರಡ್ಡಿ, ಚಿತ್ರದುರ್ಗ ಎಸಿಬಿ ಡಿವೈಎಸ್‌ಪಿ ಜಿ.ಮಂಜುನಾಥ, ನಿವೃತ್ತ ಡಿವೈಎಸ್ಪಿ ಕೆ. ಓಂಕಾರನಾಯ್ಕ, ಬೆಳಗಾವಿ ಜಿಲ್ಲಾ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಕೆ.ಸಿ.ಸತೀಶ, ಹೆದ್ದಾರಿ ಪ್ರಾಧಿಕಾರದ ಸಹಾಯಕ ಆಯುಕ್ತ ಡಾ. ವೆಂಕಟೇಶ್‌ನಾಯ್ಕ, ಕೂಡ್ಲಿಗಿ ಸಿಪಿಐ ವಸಂತ ಆಸೋದೆ, ನಿವೃತ್ತ ಯೋಧ ಹಾಗೂ ಗ್ರಾ.ಪಂ ಮಾಜಿ ಅಧ್ಯಕ್ಷ ಜೆ.ಎಂ.ಗವಾಸ್ಕರ್‌ ನಾಯ್ಕ, ತಾಪಂ ಮಾಜಿ ಸದಸ್ಯರಾದ ಎನ್.ಪಿ. ಮಂಜುನಾಥ, ಜೆ. ಎಂ. ರಾಜಕುಮಾರ್‌ನಾಯ್ಕ, ಕುರಿಹಟ್ಟಿ ಬೋಸಣ್ಣ, ಪೂಜಾರಿ ಪ್ರಕಾಶ್, ಚಿಕ್ಕಜೋಗಿಹಳ್ಳಿ ತಾಂಡ. ಬಿಸ್ನಳ್ಳಿ ಹಾಗೂ ಇಮಡಪುರ, ಹೊಸಹಳ್ಳಿ, ಹಾರಕ ಬಾವಿ ಗ್ರಾಮದ ಗ್ರಾಮಸ್ಥರು ಸುತ್ತಮುತ್ತಲಿನ ಹಳ್ಳಿಯ ಜನರು ಭಕ್ತಾದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ್. ಹೆಚ್.

LEAVE A REPLY

Please enter your comment!
Please enter your name here