“ರಾಷ್ಟ್ರೀಯ ಮತದಾರರ ದಿನ” ಆಚರಣೆಯಲ್ಲಿ ಪ್ರತಿಜ್ಞೆ ಬೋಧಿಸಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
709

ಸಂಡೂರು:ಜ:೨೫:- ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಪ್ರತಿ ವರ್ಷದಂತೆ ಜನವರಿ 25 ರಂದು ಮತದಾರರ ದಿನ ಆಚರಿಸಿ ಮತದಾರರ ಮಹತ್ವವನ್ನು ಸಾರುವ ಮತ್ತು ಪ್ರಜಾಪ್ರಭುತ್ವವನ್ನು ಬಲಿಷ್ಠ ಗೊಳಿಸುವುದಕ್ಕಾಗಿ ಮತದಾನವನ್ನು ತಪ್ಪದೇ ಚಲಾಸುವಂತೆ ಅರಿವು ಮೂಡಿಸಲಾಯಿತು,

ಪ್ರತಿ ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ, ಶಾಂತಯುತವಾಗಿ ನಡೆಯಬೇಕು, ಚುನಾವಣೆಯ ಘನತೆಯನ್ನು ಎತ್ತಿ ಹಿಡಿಯಬೇಕು,ಹಾಗೆ ಯಾರ ಅಳುಕು ಇಲ್ಲದೆ ಧರ್ಮ, ಜಾತಿ, ಮತ, ದುಡ್ಡಿನ, ಅಥವಾ ಯಾವುದೇ ಪ್ರೇರೇಪಣೆ ದಾಕ್ಷಿಣ್ಯಕ್ಕೆ ಒಳಗಾಗದೆ ಮತಚಲಾಯಿಸುವ ಹಕ್ಕು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ, ಚುನಾವಣೆಯಲ್ಲಿ ಅಸಮರ್ಥರಾದವರು ನಿಂತಾಗ ನೋಟ ಮತ ಚಲಾಯಿಸುವ ಹಕ್ಕು ಇದೆ ಎಂದು ತಿಳಿಸಿದರು, ನಂತರ ಎಲ್ಲರೂ ಮತದಾನದ ಪ್ರತಿಜ್ಞೆಯನ್ನು ಸ್ವೀಕರಿಸಿದರು,

ಪ್ರತಿಜ್ಞೆಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಬೋಧಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಫಾರ್ಮಸಿ ಅಧಿಕಾರಿ ಮಂಜುನಾಥ್, ಲ್ಯಾಬ್ ತಂತ್ರಜ್ಞ ಶಶಿಧರ್, ನವೀನ್, ಐ.ಸಿ.ಟಿ.ಸಿ ಕೌನ್ಸಲರ್ ಶ್ರೀ ರಾಮುಲು, ವೆಂಕಪ್ಪ, ರೋಜಾ, ಮಾರೇಶ, ಚಲುವರಾಜ, ಕರಿಬಸಮ್ಮ, ರವಿ, ಮಂಜು,ರಾಜಶೇಖರ, ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಶ್ರೀವಿದ್ಯಾ, ಕೌಸರ್, ಪೂಜಾ, ಸಲ್ಮಾ, ಸುನೀತಾ, ಶ್ರೀ ದೇವಿ, ಸಂಧ್ಯಾ,ಲತಾ, ಉರುಕುಂದಮ್ಮ, ಪುಷ್ಪಾ, ತೇಜಸ್ವಿನಿ, ಪೂಜಾ, ಹುಲಿಗೆಮ್ಮ, ಮಾಬು ಸಾಬ್, ಶ್ರೀನಿವಾಸ, ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here