ಬಂಡ್ರಿ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸ ಶಿಕ್ಷಕರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುಂಜಾಗ್ರತೆಗಾಗಿ ಬಿ.ಇ.ಓ ಅವರು ಕ್ರಮ ಕೈಗೊಳ್ಳಲು ಮನವಿ.

0
586

ಸಂಡೂರು:ಜ:27: ತಾಲೂಕಿನ ಚೋರನೂರು ಹೋಬಳಿಯ ಬಂಡ್ರಿ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯ ಮಕ್ಕಳಿಗೆ ಇಂದು ಗುರುವಾರ ತಾಲೂಕು ಆರೋಗ್ಯಾಧಿಕಾರಿಗಳ ಆದೇಶದ ಮೇರೆಗೆ ಸ್ಕ್ವಾಡ್ ವೆಸ್ ಎಂಎಂಯು ಟೀಮ್ ನಿಂದ ಕೋವಿಡ್ ಟೆಸ್ಟ್ ಮಾಡಲಾಯಿತು.

ಕೆಪಿಎಸ್ ಕಾಲೇಜ್ ನ ಉಪನ್ಯಾಸಕರೊಬ್ಬರಿಗೆ ಇದೇ ತಿಂಗಳು 19 ರಂದು ಕೋವಿಡ್ ಪಾಸಿಟಿವ್ ಬಂದಿತ್ತು ಅವರು ಸದ್ಯ ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮದ ಸಾರ್ವಜನಿಕರ ಮನವಿಯ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಮಾನ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು ಅದರಂತೆ
ದಿನಾಂಕ: 22.01.2022 ರಂದು ಶನಿವಾರ ಕೆಪಿಎಸ್ ಕಾಲೇಜ್ ನಲ್ಲಿ ಕೋವಿಡ್ ಟೆಸ್ಟ್ ಮಾಡಲು ಕ್ರಮ ತೆಗೆದು ಕೊಳ್ಳಲಾಗಿತ್ತು, ಆದರೆ ಕೆಲವು ವಿದ್ಯಾರ್ಥಿಗಳು ಗೈರು ಆದ ಕಾರಣ ಎಲ್ಲಾ ವಿದ್ಯಾರ್ಥಿಗಳಿಗೂ ಟೆಸ್ಟ್ ಮಾಡಲಾಗಿರಲಿಲ್ಲ ಹಾಜರಿರುವ ವಿದ್ಯಾರ್ಥಿ/ನಿ ಗಳಿಗೆ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗಿತ್ತು,

ಆ ದಿನ ಹಾಜರಿದ್ದ ಕಾಲೇಜ್ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿದಾಗ ಅವರಲ್ಲಿ ಒಬ್ಬ ಶಿಕ್ಷಕ ಹಾಗೂ ಒಬ್ಬ ವಿದ್ಯಾರ್ಥಿಗೆ ಪಾಸಿಟಿವ್ ಬಂದಿರುತ್ತದೆ. ಇವರನ್ನು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗಿದ್ದು,

ಹೀಗೆ ನಿರಂತರ ಒಂದು ಎರಡು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ದಿ: 27.01.2022 ರಂದು ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಭರತ್ ಕುಮಾರ್ ಅವರ ನೇತೃತ್ವದಲ್ಲಿ ಕೆಪಿಎಸ್ ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಸ್ಕ್ವಾಡ್ ವೆಸ್ ಎಂಎಂಯು ಟೀಮ್ ನಿಂದ ಎಲ್ಲರಿಗೂ ಇಂದು ಕೋವಿಡ್ ಟೆಸ್ಟ್ ನ್ನು ಮಾಡಿದರು.

ಹೀಗೆ ಮೂರ್ನಾಲ್ಕು ಜನಕ್ಕೆ ಕೋವಿಡ್ ಪಾಸಿಟಿವ್ ಬಂದಿರುವುದರಿಂದ
ಬಂಡ್ರಿ ಕೆಪಿಎಸ್ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜುನಲ್ಲಿನ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಅವರ ಸಂಪರ್ಕದಲ್ಲಿರುವ ಎಲ್ಲರ ಹಿತದೃಷ್ಟಿಯಿಂದ ಸೋಂಕು ಹರಡದಂತೆ ತಮ್ಮ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ,ಹಾಗೂ ಸಂಬಂಧಪಟ್ಟ ತಾಲೂಕಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಬಂಡ್ರಿಯ ಶಾಲಾ ಕಾಲೇಜುಗಳಿಗೆ ಕೆಲವು ದಿನಗಳ ಕಾಲ ರಜೆಯನ್ನು ಘೋಷಿಸ ಬೇಕೆಂದು ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಐ.ಆರ್.ಅಕ್ಕಿ ಯವರಿಗೆ ಮನವಿ ಮಾಡಲಾಯಿತು.

LEAVE A REPLY

Please enter your comment!
Please enter your name here