ರಾಜಪುರ ಗ್ರಾಮದಲ್ಲಿ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಜಾಗೃತಿ ಜಾಥಾ

0
577

ಸಂಡೂರು:ಜ:29:-ತಾಲೂಕಿನ ರಾಜಾಪುರ ಗ್ರಾಮದಲ್ಲಿ ಹಿರಿಯ ನಾಗರೀಕರು ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ಹಾಕಿಸಿ ಕೊಳ್ಳಲು ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು

ಮೆಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ರಾಜಾಪುರ ಗ್ರಾಮದಲ್ಲಿ ಇಂದು ಕೋವಿಡ್ ಲಸಿಕಾ ಮೇಳ ಆಯೋಜಿಸಲಾಗಿದ್ದು 15 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೊದಲ ಮತ್ತು ಎರಡನೇ ಡೋಸ್ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬೂಸ್ಟರ್ ಲಸಿಕೆ ನೀಡಲು ಲಸಿಕಾ ಕೇಂದ್ರ ತೆರೆಯಲಾಗಿತ್ತು, ಜನರು ಲಸಿಕೆ ಪಡೆಯಲು ಸ್ಪಂದಿಸದಿರುವುದು ಕಂಡು, ಅಲ್ಲಿನ ಆಶಾ ಕಾರ್ಯಕರ್ತೆಯರು, ಸ್ನೇಹ ಸಂಸ್ಥೆಯ ಸದಸ್ಯರು ಸೇರಿ ಜನರು ಲಸಿಕೆ ಪಡೆಯುವಂತೆ ಗ್ರಾಮದ ಬೀದಿಗಳಲ್ಲಿ ಜಾಥ ಹಮ್ಮಿಕೊಂಡು ಜಾಗೃತಿ ಮೂಡಿಸಿದರು,

ಸಂಜೆವೇಳೆ ಸುತ್ತಮುತ್ತಲಿನ ಹೊಲದಲ್ಲಿ ಕೆಲಸ ಮಾಡುವ ಸ್ಥಳಕ್ಕೆ ಲಸಿಕಾ ತಂಡ ಬೇಟಿ ನೀಡಿ ಅಲ್ಲೆ ಲಸಿಕೆ ನೀಡಿದರು,ಇಂದು ಆರು ಜನ ಹಿರಿಯರು ಸೇರಿ ಒಟ್ಟು ಹದಿನೆಂಟು ಜನರಿಗೆ ಲಸಿಕೆ ನೀಡಲಾಯಿತು,

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಮೇಘನಾ, ಆಶಾ ಕಾರ್ಯಕರ್ತೆಯರಾದ ರತ್ಮಮ್ಮ, ಪುಷ್ಪವತಿ, ಹೊನ್ನೂರಮ್ಮ, ಸ್ನೇಹ ಸಂಸ್ಥೆಯ ಸಂಚಾಲಕಿ ಸುಲೋಚನ, ಗ್ರಾಮದ ನಾಗರೀಕರಾದ ಸಣ್ಣ ತಿಪ್ಪಯ್ಯ, ಓಬಯ್ಯ, ಹನುಮಂತಪ್ಪ, ಪದ್ಮಾವತಿ, ಜಯಮ್ಮ, ಸಿದ್ದಮ್ಮ, ಹನುಮಕ್ಕ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here