ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ವಿರುದ್ಧ ಎಫ್‌ಐಆರ್ ದಾಖಲು

0
83

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಬಿ. ತೇಜಸ್ವಿನಿ ಇವರೊಬ್ಬರು ದಂಡಾಧಿಕಾರಿಯಾಗಿ ವರ್ತಿಸುವ ರೀತಿ ನೀತಿಗಳು ಬಿಟ್ಟು ಅದನ್ನು ಮೀರಿ ವರ್ತಿಸಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಮಾತನಾಡಿದ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ದಲಿತ ಸಮುದಾಯದ ಪರಮೇಶ್‌ಗೆ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿರುವ ಪ್ರಸಂಗದಲ್ಲಿ ತೇಜಸ್ವಿನಿ ಬಿ. ವಿರುದ್ಧ ಅಟ್ರಾಸಿಟಿ ಆ್ಯಕ್ಟ್ ಅಡಿ (Atrocity case) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಹಶೀಲ್ದಾರ್ ತೇಜಸ್ವಿನಿ 2021‌‌ರ ಡಿಸೆಂಬರ್​ 3‌ ರಂದು ಪರಮೇಶಿ ಗೆ ಕಚೇರಿಗೆ ಕರೆಸಿಕೊಂಡು ನಿಂದನೆ ಮತ್ತು ಧಮ್ಕಿ ಹಾಕಿದ್ದಾರೆ ಎಂದು ದೂರಲಾಗಿದೆ. ತಾವು ವಾಸವಿದ್ದ ಗುಡಿಸಲು ಮಳೆಗೆ ಕೊಚ್ಚಿ ಹೋಗಿ ಪರಮೇಶ್‌ ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದರು. ಗಂಜಿ ಕೇಂದ್ರದಲ್ಲಿ ಪರಮೇಶ ಸೇರಿದಂತೆ ಇನ್ನೂ ಕೆಲವು ಕುಟುಂಬಗಳು ನೆಲೆಸಿದ್ದರು. ಆದರೆ ಗಂಜಿ ಕೇಂದ್ರ ತೊರೆದು ಗುಂಡುದೋಪಿಗೆ ತೆರಳಲು ಸೂಚಿಸಿದ್ದಾರೆ.

ಗಂಜಿ ಕೇಂದ್ರ‌ ಬಿಟ್ಟು ನಿಮ್ಮ‌ ಮೂಲ‌ ಸ್ಥಳ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಗುಂಡುದೋಪಿಗೆ ತೆರಳುವಂತೆ ತೇಜಸ್ವಿನಿ ಆದೇಶಿಸಿದ್ದರು. ಆದರೆ ಎರಡು ತಿಂಗಳ ಹಿಂದೆ‌ ಸುರಿದಿದ್ದ ಮಳೆಗೆ ಗುಂಡುದೋಪು ಮುಳುಗಿ ಗುಡಿಸಲುಗಳೆಲ್ಲಾ ಮುಳುಗಿಹೋಗಿದ್ದವು.

ಆಗಿನಿಂದ‌‌ ಡಿಸೆಂಬರ್ ವರೆಗೆ ಗಂಜಿ ಕೇಂದ್ರದಲ್ಲೇ‌ ಪರಮೇಶ್ ಮತ್ತು ಇತರೆ ದಲಿತ ಕುಟುಂಬದವರು ಇದ್ದರು. ಆದರೆ ಅಲ್ಲಿನ ವಾಸ್ತವ ಸಮಸ್ಯೆ ಹೇಳಿದ್ದಕ್ಕೆ ದಲಿತ ವ್ಯಕ್ತಿ ಪರಮೇಶ್ ಗೆ ತಹಶೀಲ್ದಾರ್ ತೇಜಸ್ವಿನಿ ನಿಂದನೆ ಮಾಡಿ, ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ತಹಶೀಲ್ದಾರ್ ತೇಜಸ್ವಿನಿ ಬೆದರಿಕೆ ಹಾಕುವ ಆಡಿಯೋ ಸಾಕ್ಷ್ಯ ಕೊಟ್ಟು, ಪರಮೇಶ್ ದೂರು ದಾಖಲು ಮಾಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಹಶೀಲ್ದಾರ್ ತೇಜಸ್ವಿನಿ ತಮ್ಮ ಆಧಾರ್ ಕಾರ್ಡ್ ರದ್ದು ಮಾಡಿ, ಗಡಿಪಾರು ಮಾಡುವ ಬೆದರಿಕೆ ಹಾಕಿದ್ದಾರೆ. ರೌಡಿ ಶೀಟರ್ ಓಪನ್ ಮಾಡಿಸುವುದಾಗಿ ಬೆದರಿಕೆಯೂ ಒಡ್ಡಿದ್ದಾರೆ ಎಂದು ನೊಂದ ಪರಮೇಶ್ ದೂರು ದಾಖಲಿಸಿದ್ದಾರೆ. ತಹಶೀಲ್ದಾರ್ ಆದವರು ಆಪತ್ಕಾಲದಲ್ಲಿ ಇದ್ದವರಿಗೆ ಸಹಾಯ, ಸಹಕಾರ ಮಾಡುವುದು ಬಿಟ್ಟು ಅಧಿಕಾರದ ಅಹಂಕಾರದಲ್ಲಿ ಮಾತನಾಡಿದರೆ ಆಗೋ ಕಥೆನೆ ಹೀಗೆ ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ ಈ ತಹಸಿಲ್ದಾರ್ ಕಥೆ.

LEAVE A REPLY

Please enter your comment!
Please enter your name here