ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆಗೆ 20ನೇ ವರ್ಷದ ಪಾದಯಾತ್ರೆ.

0
83

ಕೂಡ್ಲಿಗಿ:ಪೆ:24:- ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆಯ ಪ್ರಯುಕ್ತ ಭಕ್ತಾದಿಗಳು ಭಜನೆಯೊಂದಿಗೆ ಉಲ್ಲಾಸದಿಂದ ಪಾದಯಾತ್ರೆಯಲ್ಲಿ ಸಾಗುತ್ತಿದ್ದ ದೃಶ್ಯ ಕಂಡುಬಂತು.

ಫೆಬ್ರವರಿ 25ರಂದು ಜರುಗಲಿರುವ ಕೊಟ್ಟೂರು ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಮೊಳಕಾಲ್ಮೂರು ತಾಲ್ಲೂಕು ಕೋನಸಾಗರ ಗ್ರಾಮದಿಂದ ಕೊಟ್ಟೂರೇಶ್ವರ ಪಾದಯಾತ್ರೆ ಸಮಿತಿಯಿಂದ 20ನೇ ವರ್ಷದಿಂದ ಪಾದಯಾತ್ರೆ ಆರಂಭಗೊಂಡಿತು. ಸಿದ್ದಯ್ಯನಕೋಟೆ, ಹುರುಳಿಹಾಳು, ಗುಂಡುಮುಣುಗು, ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ವಿಶ್ರಾಂತಿ ಪಡೆದರು. ನಂತರ ಅಯ್ಯನಹಳ್ಳಿ, ನಂತರ ಬಣವಿಕಲ್ಲು ಗ್ರಾಮದಲ್ಲಿ ವಿಶ್ರಾಂತಿ ಪಡೆಯಲಾಗುತ್ತಿದೆ ಎಂದರು. ಮೂಲಕ 95 ಕಿ.ಮೀ. ಕ್ರಮಿಸಿ ಕೊಟ್ಟೂರು ತಲುಪುವ ವ್ಯವಸ್ಥೆ ಮಾಡಲಾಗಿದೆ.

ಸಂದರ್ಭದಲ್ಲಿ ಕೆ ಎಂ ಪ್ರಕಾಶ್, ಮಂಜುನಾಥ್, ರವಿಕುಮಾರ್, ಮಹಾರುದ್ರ ಸ್ವಾಮಿ, ದೇವೇಂದ್ರಪ್ಪ, ಧನಂಜಯ ಸಣ್ಣಮಾರಪ್ಪ ಸೇರಿದಂತೆ 40 ಭಕ್ತಾದಿಗಳು ಹೆಜ್ಜೆ ಹಾಕಿದರು.

LEAVE A REPLY

Please enter your comment!
Please enter your name here