ಕುಂಬಳಕಾಯಿ ಹೊಡೆದ ” ಭೈರವ ” ಚಿತ್ರ ತಂಡ.

0
631

ಅಂದು ಸಂಕ್ರಾಂತಿಗೆ ಸಿನಿಮಾ ಮೂಹೂರ್ತ ಇಂದು ಶಿವರಾತ್ರಿ ಗೆ ಕೊನೆ ಭಾಗದ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದು ಚಿತ್ರರಂಗದಲ್ಲಿ ಒಂದೊಳ್ಳೆ ಹವಾ ಸೃಷ್ಟಿ ಮಾಡುತ್ತಿದೆ ಎಂದು ಸಿನಿಮಾ ಮಂದಿಯ ಬಾಯಲ್ಲಿ ಸಧ್ಯ ಹರಿದಾಡುತ್ತ ಇರುವ ಸಿನಿಮಾನೇ ಭೈರವ.

ಎಸ್‌… ಖ್ಯಾತ ನಿರ್ದೇಶಕ ಪಿ.ಎನ್.ಸತ್ಯ ಅವರ ಬಲಗೈ ಬಂಟ ರಾಮ್ ತೇಜ ಅವರ ನಿರ್ದೇಶನದ “ಭೈರವ” ಸಿನಿಮಾ, ಭಾರತೀಯ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಸದ್ದು ಮಾಡುತ್ತಿದ್ದು ಮೊದಲ ಭಾಗದ ಚಿತ್ರೀಕರಣ ಉತ್ತರ ಪ್ರದೇಶದ ಮೋದಿ ನಗರದಲ್ಲಿ ಮುಗಿಸಿ, ಎರಡನೇ ಭಾಗದ ಚಿತ್ರೀಕರಣವನ್ನ ಹರಿದ್ವಾರ, ರಿಷಿಕೇಶ್ ಸೇರಿದಂತೆ ಇನ್ನೀತರೆ ಪ್ರದೇಶಗಳಲ್ಲಿ ಚಿತ್ರೀಕರಣ ಮುಗಿಸಿ ಉಳಿದ ಭಾಗವನ್ನ ಇತ್ತೀಚೆಗೆ ಬೆಂಗಳೂರಿನ ನಾಗರಭಾವಿ ಹತ್ತಿರ ಚಿತ್ರೀಕರಣ ಮುಗಿಸಿ ಚಿತ್ರಕ್ಕೆ ಕುಂಬಳಕಾಯಿ ಹೊಡೆಯಲಾಯಿತು.

ಚಿತ್ರದ ವಿಶೇಷ ವೆನಂದರೆ ಶುಕ್ರವಾರ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ ಶುಕ್ರವಾರದಂದೆ ಚಿತ್ರದ ಚಿತ್ರೀಕರಣ ಮುಗಿಸಿದ್ದು ಚಿತ್ರತಂಡಕ್ಕೆ ಮತ್ತಷ್ಟು ಖುಷಿ ನೀಡಿದೆ ಎಂದು ನಿರ್ದೇಶಕ ರಾಮ್ ತೇಜ ಅವರ ಮಾತಾಗಿದೆ

ಮುಂಬೈ ಬೆಡಗಿ ನಾಜ್ನಿ ಪಾಟ್ನಿ ಅವರು ಗೆಸ್ಟ್ ಅಫೀಯರೆನ್ಸ್ ಪಾತ್ರ ಮಾಡಿದ್ದು. ಉಳಿದಂತೆ ಚಿತ್ರದ ನಾಯಕ ಸನತ್, ನಾಯಕಿಯಾಗಿ ಶೈಲಶ್ರೀ ಪ್ರಮುಖ ಪಾತ್ರದಲ್ಲಿ ಉಮೇಶ್ ಸಕ್ಕರೆ ನಾಡು ಅವರು ಅಭಿನಹಿಸಿದ್ದಾರೆ.

ಭೈರವ ಶೀರ್ಷಿಕೆ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿದ್ದವಾಗುತ್ತಿದೆ.

ವಿಶೀಕ ಫಿಲ್ಮ್ ನ ಅಡಿಯಲ್ಲಿ ಮೂಡಿ ಬರುತ್ತಿರುವ ಭೈರವ ಸಿನಿಮಾಗೆ ಬಂಡವಾಳನ್ನ ಬಾಲಿಹುಡ್ ನ ಹನಿ ಚೌದರಿ , ಬಜಾಜ್ ವೈಬವ್, ಕನ್ನಡಿಗ ಸಿ.ವಿ. ಶ್ರೀನಿವಾಸ್ ಹಣ ಹಾಕಿದ್ದಾರೆ. ಚರಣ್ ಸುವರ್ಣ ಅವರ ಕಥೆ, ಕನ್ನಡ ಚಿತ್ರರಂದಗ ಖ್ಯಾತ ನಿರ್ದೇಶಕ ಪಿ.ಎನ್.ಸತ್ಯ ಅವರ ಗರಡಿಯಲ್ಲಿ ಪಳಗಿದ ಯುವ ನಿರ್ದೇಶಕ ರಾಮ್ ತೇಜ್ ಅವರ ರಚನೆ ನಿರ್ದೇಶನ, ಸುದೀಪ್ ಪೆಡ್ರೀಕ್ ಅವರ ಛಾಯಾಗ್ರಹಣ,ಕೆ.ಆರ್. ಲಿಂಗರಾಜು ಅವರ ಸಂಕಲನ, ಈ ಚಿತ್ರಕ್ಕೆ ವಿಶ್ವಜೀತ್ ಮತ್ತು ಕಿಶೋರ್ ಕುಮಾರ್ ಅವರು ಸಂಗೀತ ವನ್ನು ನೀಡಿದ್ದು ,ಬಾಪಿ ಟುಟಲ್ ಅವರ ಹಿನ್ನಲೆ ಸಂಗೀತ, ಸಾಹಿ ಸರ್ವೇಶ್ ಅವರ ಸಾಹಿತ್ಯ ,ಧನಂಜಯ ಅವರ ನೃತ್ಯ ನಿರ್ದೇಶನವಿದೆ.ಸಹ ನಿರ್ದೇಶಕ ರಾಗಿ ಶಿವು ಬಳ್ಳಾರಿ, ಕ್ಷೀತಿ ಚರಣ್, ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here