ಪ್ಲಾಸ್ತಿಕ್ ಮುಕ್ತ ತಾಲೂಕಾಗಿಸಲು ಒಗ್ಗಟ್ಟಾಗಿ ಶ್ರಮಿಸೋಣ; ಶಾಸಕ ತುಕಾರಾಂ ಕರೆ

0
145
????????????????????????????????????

ಸಂಡೂರು: ಅ: 10: ಪ್ರಾರಂಭದಲ್ಲಿ ಗಣಿಗಾರಿಕೆ ಬಹು ದುಸ್ತರವಾಗಿತ್ತು, ಅದಿರಿನ ಬೆಲೆಯೂ ಸಹ ಬಹು ಕಡಿಮೆ ಇತ್ತು, ಅದರೆ ಈಗ ದುಪ್ಪಟ್ಟು ಬೆಲೆ ಮತ್ತು ಟ್ರಾನ್ಸ್‍ಪೋರ್ಟ ಗುತ್ತಿಗೆದಾರರು, ಲಾರಿಮಾಲೀಕರು ಮತ್ತು ಚಾಲಕರು ಎಲ್ಲರೂ ನೆಮ್ಮದಿಯ ಬದುಕನ್ನು ಸಾಗಿಸುವಂತಹ ಕಾರ್ಯ ಈ ಸಂಘದಿಂದ ಅಗಬೇಕು ಎಂದು ಶಾಸಕ ಈ.ತುಕರಾಂ ತಿಳಿಸಿದರು.

ಅವರು ಪಟ್ಟಣದ ಸ್ಮಯೋರ್ ಕಾಲೋನಿಯಲ್ಲಿ ನೂತನವಾಗಿ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲಾ ಗಣಿ ಅದಿರು ಸಾಗಾಣಿಕೆ ಸಂಘವನ್ನು ಉದ್ಘಾಟಿಸಿ ಮಾತನಾಡಿ ಮೊದಲು 40 ಮಿಲಿಯನ್ ಟನ್ ಸಾಗಾಟ ನಡೆಯುತ್ತಿತ್ತು, ಅದರೆ ಈಗ 28 ಮಿಲಿಯನ್ ಟನ್ ಮಾತ್ರ ಸಾಗಾಟಕ್ಕೆ ಅವಕಾಶ ಇದೆ, ಅದರಲ್ಲಿ ಹೆಚ್ಚು ಅಂದರೆ 16 ಮಿಲಿಯನ್ ಟನ್ ಅದಿರನ್ನು ಜಿಂದಾಲ್ ಕಂಪನಿಗೆ ಟ್ರಾನ್ಸ್ ಪೋರ್ಟ ಮಾಡಲಾಗುತ್ತಿದೆ, ಅದ್ದರಿಂದ ತೀವ್ರವಾದ ಪೈಪೋಟಿಯಿಂದ ಕೆಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅದು ನಲ್ಲಬೇಕು, ಅಲ್ಲದೆ ಪ್ರತಿಯೊಬ್ಬರಿಗೂ ಸಹ ನೆಮ್ಮದಿಯ ಬದುಕು ಸಿಗುವಂತಹ ಕಾರ್ಯವನ್ನು ಮಾಡಬೇಕು, ಈಗಾಗಲೇ ತಾಲೂಕಿನಾದ್ಯಂತ ಇರುವ 586 ಕಿ.ಮೀ. ರಸ್ತೆಯಲ್ಲಿ 580 ಕಿ.ಲೋ ಮೀಟರ್ ರಸ್ತೆ ನಿರ್ಮಾಣ ಮಾಡಿದ್ದು ಉತ್ತಮ ಸಾಗಾಟಕ್ಕೆ ಅವಕಾಶವಿದೆ, ಮುಂದಿನ ದಿನದಲ್ಲಿ ಎಲ್ಲರೂ ಸಾಮೂಹಿಕವಾಗಿ ಸೇರಿಕೊಂಡು ಪ್ಲಾಸ್ಟಿಕ್ ಮುಕ್ತ ತಾಲೂಕನ್ನಾಗಿಸೋಣ, ಚಾಲಕರಿಗೆ ಮತ್ತು ಅದಕ್ಕೆ ಸಂಬಂಧಿಸಿದ ಸಿಬ್ಬಂದಿಗೆ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸೋಣ, ಚಾಲಕರ ಮಕ್ಕಳಿಗೆ ಶಿಕ್ಷಣ ಕೊಡಲು ನಿಮ್ಮ ಸಹಕಾರವೂ ಸಹ ಅತಿ ಅಗತ್ಯ, ಪೇಪರ್ ಲೆಸ್ ವ್ಯವಹಾರಕ್ಕೆ ಬೇಕಾದ ತಾಂತ್ರಿಕವಾಗಿ ಎಲ್ಲಾ ಸಹಕಾರ ಮತ್ತು ಸಾಪ್ಟ್‍ವೇರ್ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಪ್ರಭುಮಹಾಸ್ವಾಮಿಗಳು ಮಾತನಾಡಿ ಸಂಡೂರು ಐತಿಹಾಸಿಕ ಮಹತ್ವ ಪಡೆದುಕೊಂಡ ಪ್ರದೇಶವಾಗಿದೆ, ರಾಮಾಯಣ, ಮಹಾಭಾರತ ಕಾಲದಲ್ಲಿ ಇಲ್ಲಿನ ಗಣಿಗಾರಿಕೆಯ ಅಂಶಗಳು, ಇಂದೂ ಜಗತ್ ಪ್ರಸಿದ್ದವಾದ ಅಂಶಗಳು ಇವೆ, ಪ್ರತಿಯೊಬ್ಬರೂ ಸಹ ಗಣಿಗಾರಿಕೆಯಿಂದ ಪ್ರಖ್ಯಾತಿ ಪಡೆದರೆ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಸಂಡೂರಿಗೆ ಭೇಟಿ ನೀಡಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ, ಕಾರಣ ದಕ್ಷಿಣ ಭಾರತ ಪುಟ್ಟ ಸಂಸ್ಥಾನ ಹರಿಜನರಿಗೆ ದೇವಸ್ಥಾನದಲ್ಲಿ ಮುಕ್ತ ಪ್ರವೇಶ ನೀಡುವ ಮೂಲಕ ಸಮಾನತೆಯನ್ನು ಮೆರೆದಿದೆ, ಇದರಿಂದ ಆಕಾಶವೇನು ಕಳಚಿ ಬೀಳಲಿಲ್ಲ ಎನ್ನುವ ಮಾತು ಹರಿಜನ ಪತ್ರಿಕೆಯಲ್ಲಿ ದಾಖಲೆಯಾಗಿದೆ, ಅದನ್ನು ಘೋರ್ಪಡೆ ರಾಜವಂಶಸ್ಥರು ಸಹ ಮುಂದುವರೆಸಿ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡಿದರು,

ಇನ್ನೂ ಸಹ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸ್ತ್ರೀ ಪ್ರವೇಶ ನೀಡಿಲ್ಲ ಎನ್ನುವುದನ್ನು ಕಾಣುತ್ತೇವೆ, ಅದ್ದರಿಂದ ಸಂಡೂರು ಎಂದರೆ ಸಾಮರಸ್ಯದ ಶಾಂತಿಯ ನಾಡು, ಅದನ್ನು ನಾವೆಲ್ಲರೂ ಸಹ ಮುಂದುವರಿಸೋಣ ಸಂಘದ ಮೂಲಕ ಪ್ರತಿಯೊಬ್ಬರೂ ಸಹ ಪ್ರಗತಿ ಸಾಧಿಸಲು ಶ್ರಮಿಸಿ ಎಂದರು.

ನೂತನ ಪಧಾಧಿಕಾರಿಗಳಿಗೆ ಶಾಸಕ ಈ.ತುಕರಾಂ ಮಾಲಾರ್ಪಣೆ ಮಾಡಿ ಘೋಷಣೆ ಮಾಡಿದರು ಗೌರವ ಅಧ್ಯಕ್ಷರಾಗಿ ಚಿತ್ರಿಕಿ ಸತೀಶ್, ಅಧ್ಯಕ್ಷರಾಗಿ ವೆಂಕಟರಾವ್ ನಿಕ್ಕಂ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಮಲ್ಲಿಕಾರ್ಜುನ, ಉಪಾಧ್ಯಕ್ಷರುಗಳಾಗಿ ಜಿ.ಕುಮಾರಗೌಡ, ಬಿ.ಜಿ.ಸಿದ್ದೇಶ್, ಸುಧಾಕರ್ ಬಳ್ಳಾರಿ, ಡಿ.ಕೃಷ್ಣಾನಾಯ್ಕ, ಹನುಮಂತರೆಡ್ಡಿ, ಖಜಾಂಚಿಯಾಗಿ ಮನೋಜ್‍ಜೈನ್ ಹೊಸಪೇಟೆ, ಸಹಕಾರ್ಯದರ್ಶಿಯಾಗಿ ಅರ್.ಪಕ್ಕೀರಪ್ಪ, ಕಾರ್ಯಕಾರಿ ಸದಸ್ಯರುಗಳಾಗಿ ಕೆ.ವಿಜಯಕುಮಾರ್, ಎಂ.ಶಿವಲಿಂಗಪ್ಪ, ಪ್ರಕಾಶ್ ಪೂಜಾರ್, ಪುಲಿಕೊಂಡ, ಎನ್.ಮಂಜುನಾಥ, ಟಿ.ಮೆಹಬೂಬ್ ಸುಭಾನಿ, ಬಿ.ಅಶೋಕ್‍ಕುಮಾರ್, ಎಂ.ಶಂಕರಗೌಡ, ಟಿ.ಮಹೇಶ್, ಅವರನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಖಜಾಂಚಿಯಾದ ಮನೋಜ್ ಜೈನ್ ಮಾತನಾಡಿ ಸಂಘಟನೆಯ ಮುಖ್ಯಗುರಿ ಪೇಪರ್‍ಲೆಸ್ ವ್ಯವಹಾರ, ಎಲ್ಲರಿಗೂ ಸಮಾನ ಅವಕಾಶ, ಧರ ನಿಗದಿಯಲ್ಲಿ ಸಮತೋಲನ, ಎಲ್ಲಾ ಲಾರಿಗಳಿಗೆ ಟ್ರಾನ್ಸ್ ಪೋರ್ಟ್ ಸಿಗುವಂತೆ ಓಲಾ, ಉಬರ್ ಮಾದರಿಯ ಹ್ಯಾಪ್ ತಯಾರಿಸಲಾಗುವುದು ಎಂದರು. ಸದಸ್ಯರಾದ ಬಿ.ಜಿ.ಸಿದ್ದೇಶ್, ಚಿತ್ರಿಕಿ ಸತೀಶ್, ಇತರರು ಮಾತನಾಡಿದರು, ಮುಖಂಡ ಜಯಣ್ಣ ನಿರೂಪಿಸಿದರು, ಕಿನ್ನೂರೇಶ್ವರ ಸ್ವಾಗತಿಸಿದರು, ಮಲ್ಲಿಕಾರ್ಜುನ ವಂದಿಸಿದರು. ಎಲ್ಲಾ ಸಾರಿಗೆ ಗುತ್ತಿಗೆದಾರರು ಉಪಸ್ಥಿತರಿದ್ದರು.

ವರದಿ:-ರಾಜು ಪಾಳೇಗಾರ್

LEAVE A REPLY

Please enter your comment!
Please enter your name here