ವಸಿಷ್ಠಧಾಮದಿಂದ ಉಚಿತ ವಿವಾಹ ಹಾಗೂ ಸನಾತನಧರ್ಮ ಜಾಗೃತಿ ಅಭಿಯಾನ ಕಾರ್ಯಕ್ರಮ

0
99

ಸಿಂಧನೂರು ನಗರದ ವಸಿಷ್ಠಧಾಮ, ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಸೇವಾ ಸಮಿತಿ ಉಪ್ಪಾರವಾಡಿ ಹಾಗೂ ಗುಪ್ತದಾನಿಗಳ ಸಹಕಾರದಿಂದ ಇದೇ ದಿನಾಂಕ ೧೫-೦೪-೨೦೨೨ ಶುಕ್ರವಾರ ದಂದು ಬೆಳಿಗ್ಗೆ ೧೦-೦೦ಗಂಟೆಗೆ ಹಿಂದುಳಿದ ಬಡಕುಟುಂಬದ ಉಚಿತ ವಿವಾಹ ಹಾಗೂ ಸನಾತನ ಧರ್ಮ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉಪ್ಪಾರವಾಡಿಯ ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ವಸಿಷ್ಠಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ ತಿಳಿಸಿದರು.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಸನಾತನ ಧರ್ಮದ ಪರಂಪರೆಯ ಮೇಲೆ ನಿರಂತರ ದಬ್ಬಾಳಿಕೆ ಹಾಗೂ ಅಪಹಾಸ್ಯದ ಪ್ರಸಂಗಗಳು ಅನಾದಿಕಾಲದಿಂದಲೂ ನಡೆಯುತ್ತಲಿವೆ. ಇದಕ್ಕೆ ಪರ್ಯಾಯ ಕಾರ್ಯಕ್ರಮಗಳ ಆಯೋಜನೆ ಅನಿವಾರ್ಯ ಹಾಗೂ ಅವಶ್ಯಕವಾಗಿದೆ.

ಮುಂದಿನ ಜನಾಂಗದವರಿಗೆ ಸಂಪ್ರದಾಯಗಳು ಪೂಜೆ ಪುನಸ್ಕಾರಗಳು, ಹೋಮ ಹವನಾದಿಗಳಿಂದ ಪರಿಸರದ ಮೇಲೆ ವೈಜ್ಞಾನಿಕವಾಗಿ ಜರುಗುವ ಕ್ರೀಯೆಗಳನ್ನು ತಿಳಿಸುವ ನಮ್ಮ ಧರ್ಮದ ಮೇಲೆ ಬಲವಾದ ನಂಬಿಕೆ ಬಿತ್ತುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲೆ ಇದೆ ಎಂದರು.

ಅಲ್ಲದೇ ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗುರು ಹಿರಿಯರು ಜ್ಞಾನಿಗಳಿಂದ ವಿಶೇಷ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದರು.

ಈ ಸಂದರ್ಭದಲ್ಲಿ ಮರಿಯಪ್ಪ ಕುರಕುಂದಿ, ಛತ್ರಪ್ಪ ಕುರಕುಂದಿ, ಉಮೇಶ ಗೋಮರ್ಸಿ, ವೆಂಕಟೇಶ ಬಂಡಿ, ವಿರುಪಣ್ಣ ಗುಡಿ, ಭಾಸ್ಕರ ಗುಡಿ, ಹನುಮೇಶ ಗುಡಿ, ಗೋವಿಂದರಾವ್ ಕುಲಕರ್ಣಿ, ಅವಿನಾಶ ದೇಶಪಾಂಡೆ, ಅಶೋಕ ನಲ್ಲಾ, ಶ್ರೀನಿವಾಸ ಹೋಗಿಬಂಡಿ, ಚನ್ನಬಸವ ಸ್ವಾಮಿ ಹಿರೇಮಠ ಹರೆಟನೂರು, ಪಾಂಡುರಂಗದೇಸಾಯಿ, ಮುರಳಿಧರರಾವ್ ಕಿನ್ನಾಳ, ಪ್ರಭಾಕರ ಕುಲಕರ್ಣಿ, ಸತೀಶಾಚಾರ್ಯ ನವಲಿ, ಹನುಮಂತಾಚಾರ್ಯ ಮಸ್ಕಿ, ನಾಗರಾಜ ಡಿಕೆಎಸ್, ವೆಂಕಟೇಶಪ್ಪ, ಹನುಮೇಶ ಮೇಸ್ತ್ರಿ, ದೇವರಾಜ ಸಾಸಳ್ಳಿ ಮುಂತಾದವರ ಉಪಸ್ಥಿತರಿದ್ದರು.

ವರದಿ: ಅವಿನಾಶ್ ದೇಶಪಾಂಡೆ

LEAVE A REPLY

Please enter your comment!
Please enter your name here