“ತಪ್ಪೇನಿದೆ” ಚಲನಚಿತ್ರಕ್ಕೆ ಮಹೂರ್ತ

0
89

ಬೆಳಗಾವಿ:ಸೆ:02; “ಲೀ” ಪ್ರೊಡಕ್ಷನ್ಸ್ ನವರು ನಿರ್ಮಿಸುತ್ತಿರುವ

” ತಪ್ಪೇನಿದೆ ” ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಇಂದು ನೆರವೇರಿದೆ .
ಕ್ರೌಡ್ ಫಂಡಿಂಗ್ ಚಿತ್ರವಾಗಿರುವ ಇದರ ಚಿತ್ರೀಕರಣಕ್ಕೆ ನಿರ್ಮಾಪಕ ಮುರುಗೇಶ್ ಶಿವಪೂಜಿ ಮತ್ತು ಬಿಲ್ಡರ ಆರ್ ಎಮ್ ಚೌಗಲೆ ಚಾಲನೆ ನೀಡಿದರು.

ವಿಠ್ಠಲ ಸುವರ್ಣ ಅವರು ನಿರ್ದೇಶಿಸುತ್ತಿರುವ ನಾಯಕಿ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಿ ಮಂಗಳೂರಿನ ಸಲೋಮಿ ಡಿಸೋಜಾ ನಟಿಸುತ್ತಿದ್ದಾರೆ .ಪಿಎಸ್ಸೈ ಪಾತ್ರದಲ್ಲಿ ರಾಜ್ ಕುಮಾರ್ ನಾಯ್ಕ್ ನಟಿಸುತ್ತಿದ್ದು ರಾಜ್ ಎಂ, ಬಸವರಾಜ ವಿಐ, ಬಿ ಸಿ ಸಂದಿಪ ನಟಿಸುತ್ತಿದ್ದು ಇವರುಗಳು ಸಹ ನಿರ್ದೇಶಕರ ತಂಡದಲ್ಲಿದ್ದಾರೆ.

ಎ ಆರ್ ಕೃಷ್ಣ ಛಾಯಾಗ್ರಹಣದ ಹೊಣೆಯನ್ನು ಹೊತ್ತಿದ್ದು ಈಶ್ವರಿ ಮತ್ತು ಮಾರುತಿ ಮುಂತಾದವರು ನಟಿಸುತ್ತಿರುವ ಚಿತ್ರದ ಚಿತ್ರೀಕರಣ ಬೆಳಗಾವಿ ಪರಿಸರದ ಸುತ್ತಮುತ್ತಲಿನಲ್ಲಿ ನಡೆಯುತ್ತಿದೆ.

LEAVE A REPLY

Please enter your comment!
Please enter your name here