ವಾಕರಸಾ ಸಂಸ್ಥೆಯ 3 ಘಟಕಗಳಿಗೆ ಪಿಸಿಆರ್‌ಎ ಪ್ರಶಸ್ತಿ

0
73

ಹುಬ್ಬಳ್ಳಿ : ಏ.22: ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾದ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯು (Pಅಖಂ) ಪ್ರತಿವರ್ಷ ದೇಶಾದ್ಯಂತ ಸಾರ್ವಜನಿಕ ಸೇವಾ ವಲಯದ ಸಂಸ್ಥೆಗಳಲ್ಲಿ ಇಂಧನ ಕ್ಷಮತಾ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ.
ಏಪ್ರೀಲ್-2020 ರಿಂದ ಮಾರ್ಚ್-2021 ರವರೆಗೆ ಕಳೆದ ವರ್ಷಕ್ಕಿಂತ ಗರಿಷ್ಟ ಇಂಧನ ಉಳಿತಾಯದಲ್ಲಿ ಕಾರ್ಯಕ್ಷಮತೆಯನ್ನು ತೋರಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ ಗ್ರಾಮೀಣ 3ನೇ ಘಟಕ, ಚಿಕ್ಕೋಡಿ ಹಾಗೂ ಬೀಳಗಿ ಸಾರಿಗೆ ಘಟಕಗಳಿಗೆ ಬೆಂಗಳೂರಿನಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಪ್ರಶಸ್ತಿ ಫಲಕ ಮತ್ತು ಪ್ರತಿ ಘಟಕಕ್ಕೆ ರೂ.75 ಸಾವಿರ ನಗದು ಬಹುಮಾನವನ್ನು ನೀಡಿ ಗೌರವಿಸಲಾಗಿದೆ.
2020-21ನೇ ಸಾಲಿನಲ್ಲಿ ಹುಬ್ಬಳ್ಳಿ ಗ್ರಾಮಾಂತರ ಘಟಕ-03ನೇ ಘಟಕವು ಕಳೆದ ವರ್ಷಕ್ಕಿಂತ ಪ್ರತಿಶತ 10.53 ರಷ್ಟು ಪ್ರಗತಿಯನ್ನು ಸಾಧಿಸಿ, 90,090 ಲೀಟರ್ ಇಂಧನ ಉಳಿತಾಯ ಮಾಡುವದರೊಂದಿಗೆ ರೂ.60,88, ಲಕ್ಷಗಳಷ್ಟು ಉಳಿತಾಯ ಮಾಡಲಾಗಿರುತ್ತದೆ. ಬೀಳಗಿ ಘಟಕವು ಕಳೆದ ವರ್ಷಕ್ಕಿಂತ ಪ್ರತಿಶತ 8.66 ಪ್ರಗತಿಯನ್ನು ಸಾಧಿಸಿ, 78,130 ಲೀಟರ್ ಇಂಧನ ಉಳಿತಾಯ ಮಾಡುವದರೊಂದಿಗೆ ರೂ.54,27 ಲಕ್ಷಗಳಷ್ಟು ಉಳಿತಾಯ ಮಾಡಲಾಗಿರುತ್ತದೆ. ಮತ್ತು ಚಿಕ್ಕೋಡಿ ಘಟಕವು ಕಳೆದ ವರ್ಷಕ್ಕಿಂತ ಪ್ರತಿಶತ 7.25 ರಷ್ಟು ಪ್ರಗತಿಯನ್ನು ಸಾಧಿಸಿ 1,04,700 ಲೀಟರ್ ಇಂಧನ ಉಳಿತಾಯ ಮಾಡುವದರೊಂದಿಗೆ ರೂ.73,05 ಲಕ್ಷಗಳಷ್ಟು ಉಳಿತಾಯ ಮಾಡಲಾಗಿರುತ್ತದೆ. 3 ಸಾರಿಗೆ ಘಟಕಗಳು ಸೇರಿ ಇಂಧನ ಉಳಿತಾಯದಲ್ಲಿ ಪ್ರತಿಷತ 8.81 ಪ್ರಗತಿ ಸಾಧಿಸಿ, 2,72,920 ಲೀಟರ್‌ನಷ್ಟು ಇಂಧನ ಉಳಿತಾಯ ಮಾಡಿ ಸಂಸ್ಥೆಗೆ ರೂ.1.88 (ಒಂದು ಕೋಟಿ ಎಂಬತ್ತೆAಟು ಲಕ್ಷಗಳಷ್ಟು) ಇಂಧನದ ವೆಚ್ಚದಲ್ಲಿ ಉಳಿತಾಯ ಮಾಡಲಾಗಿರುತ್ತದೆ.
ಬೆಂಗಳೂರಿನ ಕರಾರಸಾ ನಿಗಮದ 2ನೇಯ ಘಟಕದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್, ಬಿ.ಎಂ.ಟಿ.ಸಿ ಭದ್ರತಾ ಮತ್ತು ಜಾಗೃತಾ ವಿಭಾಗದ ನಿರ್ದೇಶಕಿ ಜಿ.ರಾಧಿಕಾ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಯಾಂತ್ರಿಕ ಅಭಿಯಂತರರಾದ ಎಚ್ ಎಂ. ರಮೇಶರವರು ಪ್ರಶಸ್ತಿಗಳನ್ನು ವಿತರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕ.ರಾ.ಸಾ.ನಿಗಮದ ಅಧಿಕಾರಿಗಳು ಹಾಗೂ ಭಾರತ ಸರ್ಕಾರದ ತೈಲ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ, ವಿಭಾಗೀಯ ಯಾಂತ್ರಿಕ ಅಭಿಯಂತರರಾದ ಕೆ.ಎಫ್.ಬಸಾಪುರ, ಘಟಕ ವ್ಯವಸ್ಥಾಪಕರಾದ ಎಸ್.ಎಂ.ಗರಗ, ಬಾಗಲಕೋಟೆ ವಿಭಾಗದ ವಿಭಾಗೀಯ ಯಾಂತ್ರಿಕ ಅಭಿಯಂತರರಾದ ಎಸ್.ಬಿ.ಬಾಯಿಸರ್ಕಾರ, ಎ.ಎ.ಕೋರಿ, ಎನ್.ಟಿ.ಪಾಟೀಲ್, ಚಿಕ್ಕೋಡಿ ವಿಭಾಗದ, ವಿಭಾಗೀಯ ಯಾಂತ್ರಿಕ ಅಭಿಯಂತರರಾದ ಎಂ.ಬಿ.ಸAಗಪ್ಪ ಹಾಗೂ 3 ಘಟಕಗಳ ತಾಂತ್ರಿಕ ಮೇಲ್ವಿಚಾರಕರು ಹಾಗೂ ಇಂಧನ ಉಳಿತಾಯದ ಕುರಿತು ತರಬೇತಿ ನೀಡುವ ಚಾಲಕ ಭೋದಕರು ಉಪಸ್ಥಿತರಿದ್ದು, ಪ್ರಶಸ್ತಿಗಳನ್ನು ಸ್ವೀಕರಿಸಿದರು. ಪ್ರಶಸ್ತಿ ಪಡೆದ ವಿಭಾಗದ ಅಧಿಕಾರಿಗಳಿಗೆ, ಘಟಕ ವ್ಯವಸ್ಥಾಪಕರುಗಳಿಗೆ ಹಾಗೂ ಈ ಸಾಧನೆಗೆ ಕಾರಣೀಭೂತರಾದ ಚಾಲನಾ ಸಿಬ್ಬಂದಿಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆ ರವರು ಹಾಗೂ ಮುಖ್ಯ ತಾಂತ್ರಿಕ ಅಭಿಯಂತರರಾದ ಎಚ್ ಎಮ್. ರಮೇಶ ರವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here