ಬಾದನಹಟ್ಟಿ ಗ್ರಾಮದಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಂಸದ ವೈ. ದೇವೇಂದ್ರಪ್ಪ ಚಾಲನೆ

0
217

ಬಳ್ಳಾರಿ:ಸೆ:22:- ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಬುಧವಾರ ಸಂಸದ ವೈ.ದೇವೇಂದ್ರಪ್ಪ ಚಾಲನೆ ನೀಡಿದರು.
ನಂತರ ತಾಲೂಕಿನ ಕಲ್ಲುಕಂಬ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕರೊನಾ ಸೋಂಕು ತಡೆಯಲು ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಅಲ್ಲದೇ ಲಸಿಕೆ ಹಾಕಿಸಿಕೊಳ್ಳುವುದರಿಂದ ಆರೋಗ್ಯದಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಲಸಿಕೆಯಿಂದ ದೇಹದಲ್ಲಿ ಆರೋಗ್ಯ ಏರುಪೇರು ಆಗುತ್ತದೆ ಎಂಬ ಗಾಳಿ ಸುದ್ದಿಗಳಿಗೆ ಜನರು ಕಿವಿಗೊಡದೆ ಲಸಿಕೆ ಪಡೆದು ಕರೊನಾ ಸೋಂಕು ಸಂಪೂರ್ಣ ನಿರ್ಮೂಲನೆ ಮಾಡಲು ಎಲ್ಲಾರು ಕೈ ಜೋಡಿಸೋಣ ಎಂದರು.

ಪ್ರಧಾನಿ ನರೇದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ದೇಶದಲ್ಲಿ ಒಟ್ಟು 2 ಕೋಟಿಗೂ ಹೆಚ್ಚು ಲಸಿಕೆಯನ್ನು ಜನರು ಹಾಕಿಸಿಕೊಂಡಿದ್ದಾರೆ. ಕುರುಗೋಡು ತಾಲೂಕು ಆಡಳಿತದ ಕಾರ್ಯ ವೈಖರಿಯಿಂದ ಮೊದಲನೆ ಲಸಿಕಾ ಅಭಿಯಾನದಲ್ಲಿ ತಾಲೂಕಿನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಅದೇ ರೀತಿ 2ನೇ ಲಸಿಕಾ ಅಭಿಯಾನದಲ್ಲಿ ನಿರೀಕ್ಷೇಗೂ ಮೀರಿ ಫಲಿತಾಂಶ ಬರಬೇಕು ಎಂದು ಅಧಿಕಾರಿಗಳಿಗೆ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ರಾಘವೇಂದ್ರ ರಾವ್, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ತಾಪಂ ವ್ಯವಸ್ಥಾಪಕ ಅನೀಲ್‍ಕುಮಾರ್, ಕಾರ್ಯನಿರ್ವಾಹಕ ಅಭಿಯಂತರ ಸುರೇದ್ರ ನಾಥ್, ವಿಎ ಪಲ್ಲೇದ ಮಲ್ಲಿಕಾರ್ಜುನ, ಪಿಡಿಒ ದೇವರಾಜ್, ಎಎಸ್‍ಐ ಅನ್ಸರ್, ಜೆಇ ರಶ್ಮಿ, ಆರೋಗ್ಯ ಸಹಾಯಕಿ ಶಂಶೂನ್, ಗ್ರಾಪಂ ಸದಸ್ಯ ಮಂಜುನಾಥ, ಮೇಟಿ ಆಗಲೂರಪ್ಪ, ಎಚ್.ಬಸವರಾಜ್ಪ ಇತರರಿದ್ದರು.

LEAVE A REPLY

Please enter your comment!
Please enter your name here