ಚಪ್ಪರದಹಳ್ಳಿಯಲ್ಲಿ ಚರಂಡಿಗಳಲ್ಲಿ ಕಸ ಕೊಳೆತು ನಾರುತ್ತಿದೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ನಿರ್ಲಕ್ಷ..!!

0
382

ಕೊಟ್ಟೂರು:23:ಏ:-ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಅಯ್ಯನಹಳ್ಳಿ ಗ್ರ‍‍ಾಮ ಪಂಚಾಯ್ತಿ ವ್ಯಾಪ್ತಿಯ ಚಪ್ಪರದಹಳ್ಳಿ ಗ್ರಾಮದಲ್ಲಿ. ಬಹುತೇಕ ಕಡೆಗಳಲ್ಲಿ ಚರಂಡಿ ನಿರ್ಮಾಣವಾಗಿಲ್ಲ ಪರಿಣಾಮ ತ್ಯಾಜ್ಯನೀರು ರಸ್ತೆಯಲ್ಲಿಯೇ ನಿಂತು ಗುಂಡಿಗಳಾಗಿವೆ. ನೀರಿನೊಂದಿಗೆ ಕಸ ಕೊಳೆತು ನಾರುತ್ತಿದ್ದು, ಸೊಳ್ಳೆಗಳ ಆವಾಸ ತಾಣಗಳಾಗಿವೆ ಮತ್ತು ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿವೆ. ಸಂಬಂಧಿಸಿದಂತೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷಗೆ ಕಾರಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ನೈರ್ಮಲ್ಯತೆ ಕಾಣೆಯಾಗಿದ್ದು ಸ್ವಚ್ಚತೆ ಕಾಪಾಡಬೇಕಾದವರು ತಮ್ಮ ಕರ್ತವ್ಯ ಮರೆತಿದ್ದಾರೆ, ಜನಪ್ರತಿನಿಧಿಗಳು ಜವಾಬ್ದಾರಿ ಅರಿಯದೇ ಗ್ರಾಮಸ್ಥರ ಕುರಿತು ಕಾಳಜಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಂಬಂಧಿಸಿದಂತೆ ತಾಪಂ ಕಾರ್ಯನಿರ್ವಹಣಾಧಿಕಾರಿ ಶೀಘ್ರವೇ ಗ್ರಾಮಕ್ಕೆ ಭೆಟ್ಟಿ ನೀಡಬೇಕಿದ್ದು,ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಚಪ್ಪರದಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

“ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ನೀರಿನ ಗುಂಡಿಗಳು ನಿರ್ಮಾಣವಾಗಿವೆ,ಅಲ್ಲಲ್ಲಿ ಕಸ ಕೊಳೆತು ಗಬ್ಬೆದ್ದು ನಾರುತ್ತಿದ್ದು ಮೂಗುಮುಚ್ಚಿಕೊಂಡು ಜೀವನ ನಡೆಸುವಂತಾಗಿದೆ”

-ಕರಡಿ ವೀರೇಶ್

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here