ಮಾನ್ಯತೆ, ಕಾಯಕ ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು;ಡಾ. ಸತೀಶ್ ಪಾಟೀಲ್

0
386

ಕೊಟ್ಟೂರು:26:-ಸಮಾಜದಲ್ಲಿ ಸಮಾನತೆ, ಕಾಯಕ ನಿಷ್ಠೆಯೊಂದಿಗೆ ಶಾಂತಿಗಾಗಿ ಹೋರಾಡಿದ್ದ ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಇವರುಗಳು ಸಮಾನ ವಿಚಾರಧಾರೆಗಳನ್ನು ಹೊಂದಿದ್ದರು ಎಂದು ಹ.ಬೊ.ಹಳ್ಳಿ ಸರಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ|| ಸತೀಶ್‌ಪಾಟೀಲ್ ಹೇಳಿದರು.

ಪಟ್ಟಣದ ತುಂಗಭದ್ರ ಶಿಕ್ಷಣ ಕಾಲೇಜಿನಲ್ಲಿ ತಾಲೂಕು ಕಸಾಪ ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬುದ್ಧ ಬಸವ ಗಾಂಧಿ ಅಂಬೇಡ್ಕರ್‌ರ ಸಾಮಾಜಿ ಕಳಕಳಿ, ಸಮಾಜ ಸೇವೆ ಕುರಿತು ಅವರು ಮಂಗಳವಾರ ಉಪನ್ಯಾಸ ನೀಡಿದರು. ಈ ಎಲ್ಲರಲ್ಲೂ ಸಮಾಜದಲ್ಲಿ ಪ್ರತಿಯೊಬ್ಬರೂ ಸ್ವಾವಲಂಬಿ ಜೀವಿಯಾಗಿಯಾಗಲು ಅವರವರ ಕಾರ್ಯಕದಲ್ಲಿ ನಿರತರಾಗಿರಬೇಕು, ಎಲ್ಲರಲ್ಲೂ ಸಮಾನತೆ ಮೂಡಸಬೇಕು ಎಂಬ ವಿಚಾರಗಳಿದ್ದವು. ಅದೇ ಮಾರ್ಗದಲ್ಲಿ ಅವರು ತಮ್ಮ ವಿಚಾರಗಳನ್ನು ನಿಷ್ಠುರವಾಗಿ ಹೇಳುತ್ತಿದ್ದರು. ಅವರು ಹಾಕಿಕೊಟ್ಟಿರುವ ಅನೇಕ ಮಾರ್ಗಗಳು ಇಂದಿಗೂ ಪ್ರಸ್ತುತವಾಗಿವೆ. 12ನೇ ಶತಮಾನದಲ್ಲಿ ಬಸವೇಶ್ವರರು ಕಾಯಕಕ್ಕೆ ಆದ್ಯತೆ ನೀಡಿದ್ದರು. ಸರಳ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದರು. ಗಾಂಧೀಜಿ, ಅಂಬೇಡ್ಕರ್ ಅವರು ಸಹ ಬುದ್ದ ಬಸವರಂತೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು ಎಂದು ಹೇಳಿದರು.

ಅಕ್ಕಮಹಾದೇವಿ, ಮಾತೃಭಾಷೆ ವಿಷಯದಲ್ಲಿ ಉಪನ್ಯಾಸ ನೀಡಿದ ಚಿಗಟೇರಿ ಸರಕಾರಿ ಪ.ಪೂ.ಕಾಲೇಜು ಉಪನ್ಯಾಸಕಿ ಹೊನ್ನಮ್ಮ ಈಶ್ವರಪ್ಪ ತುರಕಾಣಿ, 12ನೇ ಶತಮಾನದಲ್ಲಿನ ಅನುಭವ ಮಂಟಪದಲ್ಲಿ ತನ್ನದೇ ವಿಚಾರಗಳನ್ನು ಮಂಡಿಸಿ ಸ್ಥಾನ ಪಡೆದ ಮೊದಲ ಮಹಿಳೆ ಅಕ್ಕಮಹಾದೇವಿ. ಬಸವಾದಿ ಇತರೆ ಶರಣರಂತೆ ಸಾಮಾಜಿಕ ಕಳಕಳಿಯೊಂದಿಗೆ ಅನೇಕ ವಚನಗಳನ್ನು ಸಾರಿದ್ದರು. ಶಿಕ್ಷಣವನ್ನು ಯಾವುದೇ ಭಾಷೆಯಲ್ಲಿ ಪಡೆದರೂ, ಮಾತೃ ಭಾಷೆಯನ್ನು ಮರೆಯಬಾರದು. ಮಾತೃ ಭಾಷೆ ನಮಗೆ ಮಾತಾಡುವುದನ್ನು ಮಾತ್ರವಲ್ಲ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು.
ಅದ್ಯಕ್ಷತೆ ವಹಿಸಿದ್ದ ತುಂಗಭದ್ರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಶಿವಣ್ಣ, ಉದ್ಘಾಟಿಸಿದ ಕಾಲೇಜು ಪ್ರಾಚಾರ್ಯ ಎಸ್.ಎಂ.ರವಿಕುಮಾರ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ ಪ್ರಾಸ್ತಾವಿಕ ಮಾತನಾಡಿದರು.

ಕೊಟ್ಟೂರಿನ ದಿ.ಪತ್ತಿಕೊಂಡ ಕಾಮಾಕ್ಷಮ್ಮ ವಿಶ್ವನಾಥ ಶೆಟ್ಟಿ, ದಿ.ದೇವರಮನಿ ಚಿನ್ನಪ್ಪ ಶಾರದಮ್ಮ, ಸಂಡೂರಿನ ಅಂಬೂಬಾಯಿ ಹನುಮಂತರಾವ ಘೋರ್ಪಡೆ, ಗುಂಡಮ್ಮ ಮತ್ತು ಮಕ್ಕಳ ಇವರ ದತ್ತಿ ಉಪನ್ಯಾಸಗಳಿದ್ದವು. ಕಸಾಪ ಗೌರವ ಕಾರ್ಯದರ್ಶಿ ಅರವಿಂದ ಬಸಾಪುರ, ಮಮ್ತಾಜ್ ನಿರ್ವಹಿಸಿದರು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here