ಬಂಡ್ರಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ.

0
734

ಸಂಡೂರು:ಮೇ.03:-ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಮೆರವಣಿಗೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿ ಜಗಜ್ಯೋತಿ ಬಸವೇಶ್ವರ ನಾಮಪಲಕವನ್ನು ಉದ್ಘಾಟಿಸಿ ನಂತರ ಮುಖ್ಯ ಬೀದಿಗಳಲ್ಲಿ ಬಸವೇಶ್ವರ ಬಾವಚಿತ್ರವನ್ನು ಮೆರವಣಿಗೆಯನ್ನು ಸಮಾಜದ ಯುವಕರ ತಂಡ ಬಹಳ ಅಚ್ಚುಕಟ್ಟಾಗಿ ಮಾಡಿದರು

ಇದೇ ಸಂಧರ್ಭದಲ್ಲಿ ವೀರಶೈವ ಸಮಾಜದ ಮುಖಂಡರಾದ ರವಿಕುಮಾರ್ ಹಾಗೂ ಯುವ ಮುಖಂಡರಾದ ಮಲ್ಲಿಕಾರ್ಜುನ ಪೂಜಾರ್ ಅವರನ್ನು ನಮ್ಮ ಪತ್ರಿಕಾ ತಂಡ ಬಸವಣ್ಣನ ಬಗ್ಗೆ ಹೇಳಿ ಎಂದು ಕೇಳಿದಾಗ

ಮೊದಲಿಗೆ ಪಿ.ರವಿಕುಮಾರ್ ಅವರು ಮಾತನಾಡಿ. ಸಮಾಜದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ದಬ್ಬಾಳಿಕೆ ದೌರ್ಜನ್ಯಗಳಿಂದ ದಮನಿತ ಸಮುದಾಯಗಳನ್ನು ಮುಕ್ತಗೊಳಿಸಲು ಹೋರಾಡಿದ ಮಹಾನ್ ವ್ಯಕ್ತಿ ಹಾಗೂ ಮೂಢನಂಬಿಕೆ, ಜಾತಿವ್ಯವಸ್ಥೆ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆಯಂತಹ ಅನಿಷ್ಟ ಆಚರಣೆಗಳನ್ನು ತೊಡೆದುಹಾಕಿ ಕಾಯಕ ಸಮಾನತೆ, ಲಿಂಗ ಸಮಾನತೆ ಸಾರಿದವರು ಅಣ್ಣ ಬಸವಣ್ಣನವರು. ದೇವರನ್ನು ಕಾಣಲು ಮಧ್ಯವರ್ತಿಗಳನ್ನು ಸಂಪರ್ಕಿಸಬೇಕಾಗುವಂತಹ ಕಾಲದಲ್ಲಿ ನಿಷ್ಠೆಯ ಕಾಯಕ ಮಾಡುವ ಜೊತೆಗೆ ಮನದಲ್ಲಿಯೇ ದೇವರನ್ನು ಕಾಣಬಹುದು ಎಂದು ತೋರಿಸಿಕೊಟ್ಟರು. ಕಾಯಕದಿಂದ ಬರುವ ಸಂಪತ್ತನ್ನು ತನಗಾಗಿ ಬಳಸುವ ಜೊತೆಗೆ ಸಮಾಜಕ್ಕೂ ಮೀಸಲಿರಿಸಬೇಕು ಎನ್ನುವಂತಹ ದಾಸೋಹದ ಸಿದ್ಧಾಂತವನ್ನು ತಿಳಿಸಿಕೊಟ್ಟು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳ ಫಲ ತಲುಪುವಂತೆ ಮಾಡಬೇಕು ಎಂದು ತಳಪಾಯ ಹಾಕಿಕೊಟ್ಟವರು ಜಗಜ್ಯೋತಿ ಬಸವಣ್ಣನವರು, ಹಾಗಾಗಿ ಎಲ್ಲರೂ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ನಂತರ ಪಿ. ಮಲ್ಲಿಕಾರ್ಜುನ್ ಪೂಜಾರ್
ಹನ್ನೆರಡನೇ ಶತಮಾನದಲ್ಲಿ ಬಸವೇಶ್ವರರು ಸಾಮಾಜಿಕ ಪರಿವರ್ತನೆ ಮಾಡಿ, ಸಮಾಜದಲ್ಲಿ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಆ ದಿಸೆಯಲ್ಲಿ ವಿಶ್ವಜ್ಞಾನಿ, ಜಗದ ಜ್ಯೋತಿ, ಭಕ್ತಿ ಭಂಡಾರಿ ಬಸವೇಶ್ವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಾರ್ಥಕತೆ ಬರಲಿದೆ.
ಹನ್ನೆರಡನೇ ಶತಮಾನದಲ್ಲಿ ಜಾತಿ ನಿರ್ಮೂಲನೆಗೆ ಹಾಗೂ ಸ್ತ್ರೀಯರಿಗೆ ಸಮಾನ ಅವಕಾಶ ನೀಡಲು ಬಸವೇಶ್ವರರು ಶ್ರಮಿಸಿದರು. ಇಂದಿನ ವೈಜ್ಞಾನಿಕ ಶರವೇಗದ ಬದುಕಿನಲ್ಲಿಯೂ ಜಾತಿ ನಿರ್ಮೂಲನೆಗೆ ಹಾಗೂ ಸ್ತ್ರೀಯರಿಗೆ ಸಮಾನ ಅವಕಾಶ ಕಲ್ಪಿಸಲು ಹೋರಾಟಗಳು ನಡೆಯುತ್ತಿವೆ ಎಂದರು.
ಹಿಂದೆ ಶಿಕ್ಷಣದಲ್ಲಿ ಸಂಸ್ಕøತ ಭಾಷೆಯನ್ನು ಬಳಸುತ್ತಿದ್ದರು, ಅಂತಹ ಸಂದರ್ಭದಲ್ಲಿ ಬಸವೇಶ್ವರರು ನಾಡಿನ ಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಎಲ್ಲರಿಗೂ ಅರ್ಥವಾಗುವಂತೆ ಮತ್ತು ಹತ್ತಿರವಾಗುವಂತೆ ಸಾಮಾಜಿಕ ಸಂದೇಶಗಳನ್ನು ನೀಡಿದ್ದರು.
‘ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲ ಸಂಗಮನೊಲಿಸುವ ಪರಿ’ ಎಂದು ಬಸವಣ್ಣ ಅವರು ವರ್ಣಿಸಿದ್ದಾರೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನ್ ಪೂಜಾರ್,ಬಿ. ಮಂಜುನಾಥ್, ಮೇಘರಾಜ್, ಜಗದೀಶ್, ಶಿವರಾಜ್, ಎಸ್.ಡಿ. ಮಂಜುನಾಥ್, ಎಸ್.ಬಿ.ಕೊಟ್ರೇಶ್, ಬಸವರಾಜ್, ಗಣೇಶ್, ಶಿವರಾಜ್, ಕರಿಬಸವರಾಜ್, ಮುರುಳಿ, ಪಿ.ರವಿಕುಮಾರ್, ಲಿಂಗಶೆಟ್ಟಿ ಬಸವರಾಜ್, ಮೂರೆತ್ತಿನ ಈರಣ್ಣ, ಪೂಜಾರ್ ಬಸವರಾಜ್, ಪಿ ಮಲ್ಲಿಕಾರ್ಜುನ, ಗೂಳಿ ಬಸವರಾಜ್, ಗೂಳಿ ಕೊಟ್ರಪ್ಪ, ಕೊಟ್ರೇಶ್, ಎ. ನಾಗರಾಜ್, ಹಡಪದ ಷಡಕ್ಷರಪ್ಪ, ಕೆ. ಸಿದ್ದೇಶ್, ಟಿ. ಸಿದ್ದಪ್ಪ, ರಾಜಣ್ಣ, ಬಿ. ನಾಗೇಶ್, ಡಾ. ಮಂಜುನಾಥ್, ಗುರುನಾಥ್ ಹಾಗೂ ಸಮಾಜದ ಇತರರು ಇದ್ದರು

LEAVE A REPLY

Please enter your comment!
Please enter your name here