ಪತ್ರಕರ್ತರ ಗೂಂಡಾಗಿರಿ.! ಪತ್ರಿಕಾ ನೀತಿ- ನಿಯಮಗಳು ಮರೆತಿದ್ದಾರೆ : ಪ್ರಕಾಶ್ ಎಸ್.ಪಿ ಆರೋಪ

0
172

ಕೊಟ್ಟೂರು:ಜೂನ್ :16:-ದೇಶದ ಪ್ರಗತಿಯ ಹಾದಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವು ತನ್ನದೇ ತಪ್ಪುಗಳಿಂದ ಜನರ ತಿರಸ್ಕಾರ ಮತ್ತು ಭ್ರಷ್ಟಾಚಾರದ ಗೂಂಡಾಗಿರಿಯ ಗೂಡಾಗುತ್ತಿದೆ. ಇತ್ತಿಚೆಗೆ ಸುಳ್ಳು ಸುದ್ದಿಗಳ ಜೊತೆಗೆ ಬ್ಲಾಕ್‌ ಮೇಲ್, ಬ್ಲಾಕ್‌ಮೇಲ್ ಸುದ್ದಿಗಳಿಂದ ಮಾಧ್ಯಮವು ಇಂದು ಹೆಸರುಗಳಿಸುತ್ತಿದೆ. ಹತ್ತಾರು ಕಡೆ ತಮ್ಮ ದರ್ಪ ದೌಲತ್ತುಗಳನ್ನು ತೋರಿಸುತ್ತಾ ಹಣಗಳಿಸುವ ದಂದೆಯಲ್ಲಿ ತೊಡಗಿದ್ದಾರೆ. ಪತ್ರಿಕಾ ಧರ್ಮವನ್ನು ಮರೆತ ಕೆಲವು ಗೂಂಡಾಗಳು ಮತ್ತು ಪತ್ರಿಕಾ ನೀತಿ- ನಿಯಮಗಳು ಗೊತ್ತಿಲ್ಲದ ಕೆಲವು ಕ್ರಿಮಿಗಳು ಪತ್ರಕರ್ತರು ಎಂಬ ಹಗಲುವೇಷ ಹಾಕಿಕೊಂಡು, ಸರಕಾರಿ ಕಿರಿಯ ಅಧಿಕಾರಿಗಳನ್ನು ಬ್ಲಾಕ್‌ ಮೇಲ್ ಮಾಡಿ ಹಣಗಳಿಸುವುದರಿಂದ ಹಿಡಿದು ಕೆಲವು ಪ್ರಾದೇಶಿಕ ರಾಷ್ಟ್ರೀಯ ಪತ್ರಿಕೆಗಳ ವರದಿಗಾರರು ಹಣ ಮಾಡಲು ಹಲವಾರು ಕೆಟ್ಟ ದಾರಿ ಹಿಡಿಯುತ್ತಿದ್ದಾರೆ.

ಮಾಧ್ಯಮಗಳು ಬೆಳೆದಂತೆ ಭ್ರಷ್ಟಾಚಾರ ವಂಚನೆಗಳು ಹೆಚ್ಚಾಗುತ್ತಿದ್ದು. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಕೆಲವು ಸಣ್ಣ ಮಾಧ್ಯಮಗಳ ಮೇಲೆ ಕೆಸರು ಎರಚಿ ತಾವು ಶುದ್ದರು ಎಂದು ಬಿಂಬಿಸುತ್ತಿದ್ದಾರೆ. ಕಾರ್ಯಾಂಗ ಶಾಸಕಾಂಗವು ಭ್ರಷ್ಟಚಾರದ ಕೂಪಗಳಾಗಿರುವ ಈ ಹೊತ್ತಿನಲ್ಲೇ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪ್ರಜಾಪ್ರಭುತ್ವದ ಕಾವಲು ನಾಯಿ, ‘ಎಂದೇ ಖ್ಯಾತಿಗಳಿಸಿದ್ದ ಮಾಧ್ಯಮರಂಗವು ಕೆಲವು ನಿಚ್ಚ ಮನಸ್ಸಿವೆ. ವೃತ್ತಿಗಳಿಂದ ಟೀಕೆಗೆ ಗುರಿಯಾಗಿರುವುದು ಅತ್ಯಮತ ಕೇದಕರ ಸಂಗತಿ.

ಇತ್ತೀಚಿನ ದಿನಗಳಲ್ಲಿ ಯಾವುದೇ, ವಿದ್ಯಾರ್ಹತೆಗಳು ಇಲ್ಲದೇ, ಪತ್ರಿಕ್ಯೋದ್ಯಮದ ಜವಾಬ್ದಾರಿಯನ್ನು ಅರಿತುಕೊಳ್ಳದೆ ಎಲ್ಲಂದರಲ್ಲಿ ನಾಯಿ ಕೊಡೆಯಂತೆ ಪತ್ರಕರ್ತರು ಹುಟ್ಟಿಕೊಳ್ಳುತ್ತಿರುವುದು ನಿಜಕ್ಕೂ ಕೇಳದ ಸಂಗತಿ, ಇನ್ನಾದರೂ ಸಾಮಾಜೀಕ ಜವಬ್ದಾರಿಯನ್ನು ಅರಿತು, ರಾಜಕಾರಣಿಗಳಿಗೆ ಬಕೀಟ್ ಹಿಡಿಯದೇ ತಪ್ಪು ಮಾಡಿದವರ ವಿರುದ್ದ ಕೆಚ್ಚೆದೆಯ ಬರವಣಿಗೆ ಜೊತೆಗೆ ನೊಂದವರಿಗೆ, ಅನ್ಯಾಯಕ್ಕೆ ತುತ್ತಾದವರಿಗೆ ಸ್ಪಂದಿಸಿ, ಪತ್ರಿಕೋದ್ಯಮದ ಘನತೆಯನ್ನು ಕಾಪಾಡುವುದರ ಜೊತೆಗೆ ಯಾವ ಪಕ್ಷ, ಜಾತಿ, ಧರ್ಮಗಳಿಗೂ ಒಳಗಾಗದೇ, ನಡೆಯುವ ಅಕ್ರಮಗಳನ್ನು ಬಯಲಿಗೆಳೆದು ಜನರಲ್ಲಿ ಅರಿವು ಮೂಡಿಸುವ ಪ್ರಾಮಾಣಿಕತೆಯ ಕಡೆಗೆ ಪತ್ರಕರ್ತರು ಸಾಗಬೇಕಿದೆ.

-ಪ್ರಕಾಶ್ ಎಸ್.ಪಿ
( ಪತ್ರಕರ್ತರು)

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here